
Doddaballapura : ರೋಜಿಪುರ ಒಂದನೇ ಮುಖ್ಯರಸ್ತೆಯ ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳುವವರಿಲ್ಲದಂತಾಗಿದೆ, ರಸ್ತೆ,ಚರಂಡಿ, ದಾರಿದೀಪ, ಸ್ವಚ್ಛತೆ ಇಲ್ಲದೆ ಜನ ಸ್ಥಳೀಯ ಜನಪ್ರತಿನಿಧಿಗಳು ಯಾರಿಗೂ ತಿಳಿಯದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಹೌದು ನಗರದ ರೋಜಿಪುರ ವಾರ್ಡ್ ನ 1ನೇ ಮುಖ್ಯರಸ್ತೆಯಲ್ಲಿ ಸುಮಾರು 30ಕ್ಕೂ ಅಧಿಕ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಮತ ಪಡೆಯಲು ಬಂದ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಬರಲಿಲ್ಲ ನಮಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ ಮಳೆ ಬಂದಾಗಲಂತೂ ಚರಂಡಿ ಮಿಶ್ರಿತ ಕಲುಷಿತ ನೀರು ಮನೆಗೆ ನುಗ್ಗುತ್ತವೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳುವುದು ಎಂದು ತಿಳಿಯುತ್ತಿಲ್ಲ, ನಮ್ಮ ಸಮಸ್ಯೆ ಹೇಳಿಕೊಂಡರೆ ರೋಜಿಪುರ ವಾರ್ಡ್ ನ ನಗರಸಭೆ ಸದಸ್ಯರು ಈ ಪ್ರದೇಶ ನನ್ನ ಭಾಗಕ್ಕೆ ಬರುವುದಿಲ್ಲ ಎನ್ನುತ್ತಾರೆ ಅಂತೆಯೇ ವಿನಾಯಕನಗರ ವಾರ್ಡಿನ ನಗರಸಭಾ ಸದಸ್ಯರು ಈ ಪ್ರದೇಶದ ಭಾಗಕ್ಕೆ ಬರುವುದಿಲ್ಲ ಎನ್ನುತ್ತಾರೆ ನಮಗೆ ಜನಪ್ರತಿನಿಧಿ ಯಾರು ಎಂಬುದು ತಿಳಿಯುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ನಗರದ ಮಧ್ಯ ಭಾಗದಲ್ಲಿರುವ ರೋಜಿಪುರ ಹಾಗೂ ವಿನಾಯಕ ನಗರ ಗಡಿಯಲ್ಲಿ ಬರುವ ಈ 1ನೇ ಮುಖ್ಯರಸ್ತೆಯು ಎರಡು ಭಾಗಗಳಿಗೆ ಸೇರದೆ ಅನಾಥವಾಗಿದೆ ಎಂದರೆ ತಪ್ಪಾಗಲಾರದು , ನಗರಸಭೆಯ ಅಧಿಕಾರಿಗಳು ನಮ್ಮ ನಗರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ ಆದರೆ ಒಮ್ಮೆ ಈ ಪ್ರದೇಶಕ್ಕೆ ಬಂದು ನೋಡಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ, ದಾರಿ ದೀಪಗಳಿಲ್ಲ, ರಸ್ತೆಯಂತೂ ಮೊದಲೇ ಸರಿ ಇಲ್ಲ ಎನ್ನುತ್ತಾರೆ ಸ್ಥಳೀಯ ಸಾರ್ವಜನಿಕರು.
ನಗರಸಭೆ ವ್ಯಾಪ್ತಿಯ ವಿನಾಯಕನಗರ ಹಾಗೂ ರೋಜಿಪುರ ವಾರ್ಡ್ ಗಳ ಜನಪ್ರತಿನಿಧಿಗಳು ಒಮ್ಮೆ ಒಮ್ಮತಕ್ಕೆ ಬಂದು ಯಾರಾದರೂ ಸರಿ ನಮ್ಮ ಸಮಸ್ಯೆ ಬಗೆಹರಿಸಲಿ ಎಂಬುದೇ ಸ್ಥಳೀಯರ ಆಶಯ.
ವಿನಾಯಕ ನಗರ ವಾರ್ಡ್ನ ನಗರಸಭಾ ಸದಸ್ಯರಾದ ನಾಗರತ್ನಮ್ಮ ಕೃಷ್ಣಮೂರ್ತಿ ಈ ಕುರಿತು ಪ್ರತಿಕ್ರಿಯೆ ನೀಡಿ ಸದರಿ ಪ್ರದೇಶವು ನಮಗೆ ಬರುವುದಿಲ್ಲ ರೋಜಿಪುರ ಒಂದನೇ ಮುಖ್ಯರಸ್ತೆ ಎಂದು ಬೋರ್ಡ್ ಇರುವ ಪ್ರದೇಶವು ರೋಜಿಪುರ ವಾರ್ಡ್ ಗೆ ಸೇರಿದ್ದು , ನಾವು ನಗರಸಭೆ ಅಧಿಕಾರಿಗಳು ಕೊಟ್ಟಿರುವಂತಹ ನಕ್ಷೆಯನ್ನು ಆಧರಿಸಿ ಸೇವಾ ಸೌಲಭ್ಯಗಳನ್ನು ಒದಗಿಸುತ್ತೇವೆ ನಮಗೆ ನೀಡಿರುವ ನಕ್ಷೆ ಪ್ರಕಾರ ಸದರಿ ಪ್ರದೇಶವು ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ , ಆ ಪ್ರದೇಶ ವಾರ್ಡ್ ನಂಬರ್ 26 ರೋಜಿಪುರಕ್ಕೆ ಸೇರಿದ್ದು ಎಂದಿದ್ದಾರೆ.
ನಗರಸಭಾ ಅಧಿಕಾರಿಗಳು , ಪೌರಾಯುಕ್ತರು, ನಗರಸಭಾ ಸದಸ್ಯರು ಯಾರಾದರೂ ಸರಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶೀಘ್ರವಾಗಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಲಿ ಎಂಬುವುದೇ (ವಿಜಯ ಮಿತ್ರ )ನಮ್ಮ ಆಶಯ .