
ದೊಡ್ಡಬಳ್ಳಾಪುರ : ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ರಾಮುಲು ಅವರ 54ನೇ ಹುಟ್ಟು ಹಬ್ಬವನ್ನು ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ದಿ. ಜಗದೀಶ್ ವೃತ್ತದಲ್ಲಿ ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಿಕೆ ಮಾಡಿ ನೆರೆದಿದ್ದ ಸಾರ್ವಜನಿಕರಿಗೆ ಅನ್ನದಾಸೋಹ ಮಾಡುವ ಮೂಲಕ ಮಾಜಿ ಸಚಿವರಾದ ಶ್ರೀರಾಮುಲು ಅವರಿಗೆ ಅಭಿಮಾನಿಗಳು ಹುಟ್ಟು ಹಬ್ಬದಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ಕೃಷ್ಣಪ್ಪ (ಕಿಟ್ಟಿ )ಮಾತನಾಡಿ ಹಲವಾರು ವರ್ಷಗಳಿಂದ ನಾವು ತುಂಬಾ ಇಷ್ಟಪಡುವ ಶ್ರೀರಾಮುಲು ಅವರ ಹುಟ್ಟು ಹಬ್ಬವನ್ನು ತಾಲೂಕಿನಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ರಾಜ್ಯಕ್ಕೆ ಅವರ ನಿರಂತರ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಆದರ್ಶ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಸಾರ್ವಜನಿಕರಿಗೆ ಅನ್ನದಾಸೋಹ ಮಾಡುವ ಮೂಲಕ ಆಚರಿಸಿದ್ದೇವೆ ಎಂದರು
ರಾಜಕುಮಾರ್ ಮಾತನಾಡಿ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀರಾಮುಲು ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ, ಅಲ್ಲದೆ ನಾಯಕ ಸಮುದಾಯಕ್ಕೆ ಅವರ ಕೊಡುಗೆ ಸಾಕಷ್ಟಿದೆ , ಸಮುದಾಯದ ಯಾವುದೇ ಕುಟುಂಬಕ್ಕೆ ಸಮಸ್ಯೆಯಾದ ಸಂದರ್ಭದಲ್ಲಿ ಅವರು ಸಹಕರಿಸುವ ರೀತಿ ವಿಶೇಷ, ಶ್ರೀರಾಮುಲು ಅವರ ಅಭಿಮಾನಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ , ಅವರ ಹುಟ್ಟು ಹಬ್ಬದ ಅಂಗವಾಗಿ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡಿದ್ದೇವೆ , ಅವರು ನೂರಾರು ವರ್ಷ ಸುಖ ಸಂತೋಷದೊಂದಿಗೆ ಬಾಳಲಿ ಎಂಬುದು ನಮ್ಮೆಲ್ಲರ ಹಾರೈಕೆ ಎಂದರು.
ನಟರಾಜ್ ಮಾತನಾಡಿ ಇಂದು ನಮಗೆಲ್ಲಾ ವಿಶೇಷವಾದ ದಿನ ಕಾರಣ ನಮ್ಮೆಲ್ಲರ ಆರಾಧ್ಯರು ನೆಚ್ಚಿನ ನಾಯಕರು, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀರಾಮುಲು ಅವರ ಜನ್ಮದಿನ , ಈ ದಿನವನ್ನು ದುಂದು ವೆಚ್ಚ ಸರ್ವರಿಗೂ ಮಾದರಿಯಾಗುವ ರೀತಿಯಲ್ಲಿ ಸಾರ್ವಜನಿಕರಿಗೆ ಅನ್ನದಾನ ಮಾಡುವ ಮೂಲಕ ಆಚರಿಸಿದ್ದೇವೆ, ಅವರಿಗೆ ಮತ್ತೊಮ್ಮೆ ಅಧಿಕಾರ ಸಿಗಲಿ ನಾಡಿಗೆ ಮತ್ತಷ್ಟು ಒಳಿತು ಮಾಡಲಿ ಎಂಬುದು ನಮ್ಮೆಲ್ಲರ ಹಾರೈಕೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಶ್ರೀರಾಮುಲು ಅಭಿಮಾನಿ ಬಳಗದ ಮಂಜುನಾಥ್, ವೆಂಕಟೇಶ್, ರಾಜಕುಮಾರ್, ಕೃಷ್ಣಮೂರ್ತಿ, ಸಂಜೀವ್ ನಾಯಕ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.