ದೊಡ್ಡಬಳ್ಳಾಪುರ : ತಾಲ್ಲೂಕಿನ ತೂಬಗೆರೆಯಲ್ಲಿ ದಸರಾ ಮಾದರಿ ಆನೆ ಅಂಬಾರಿಯಲ್ಲಿ ಚಾವಡಿ ಗಣಪತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು .
ಕೇವಲ ಹೋಬಳಿ ಅಷ್ಟೇ ಅಲ್ಲದೆ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಜೃಂಭಣೆಯಿಂದ ನೆಡೆದ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ ದೇವನಹಳ್ಳಿ ವ್ಯಾಪ್ತಿಯಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮ ಯಾವುದೇ ಪಕ್ಷ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಪರಸ್ಪರ ಒಗ್ಗೂಡಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ರಾಜ್ಯದಲ್ಲಿ ದಸರಾ ಉತ್ಸವದಲ್ಲಿ ಮೆರವಣಿಗೆ ನಡೆಯುವಂತೆ ತೂಬಗೆರೆ ಗ್ರಾಮದಲ್ಲಿ ಗಣಪತಿಯನ್ನು ಆನೆಯ ಮೇಲೆ ಅಂಬಾರಿ ಕೂರಿಸಿ ಮೆರವಣಿಗೆ ಮಾಡಲಾಗುತ್ತಿದೆ .
ದಸರಾ ಮೆರವಣಿಗೆ ನೋಡಲು ಸಾಧ್ಯವಾಗದ ಎಷ್ಟೋ ಕುಟುಂಬಗಳಿಗೆ ಆನೆ ಮೆರವಣಿಗೆ ನೋಡುವ ಭಾಗ್ಯ ಈ ಕಾರ್ಯಕ್ರಮದಿಂದ ದೊರೆಯಲಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಗಿ ಆಯೋಜನೆ ಮಾಡಿರುವ ಚಾವಡಿ ಗಣೇಶೋತ್ಸವ ಸಮಿತಿಯವರಿಗೆ ಶುಭಾವಾಗಲಿ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ ಎಚ್ ಮುನಿಯಪ್ಪ ನವರು ಪುಷ್ಪಾರ್ಚನೆ ಮಾಡುವುದರ ಮೂಲಕ ಅಂಬಾರಿ ಮೆರವಣಿಗೆ ಚಾಲನೆ ನೀಡಿದರು

ಸಮಾಜ ಸೇವಕರು ಬಿಜೆಪಿ ಪಕ್ಷದ ಪ್ರಮುಖರಾದ ಅಂಬರೀಶ್ ಗೌಡ ಮಾತನಾಡಿ ಇಂದು ತೂಬಗೆರೆಯಲ್ಲಿ ವಿಜಯೋತ್ಸವ ನಡೆಯುತ್ತಿದೆಯೆಂದರೆ ತಪ್ಪಾಗಲಾರದು . ಹಲವಾರು ವರ್ಷಗಳಿಂದ ಮೈಸೂರಿನ ದಸರಾ ಸಂದರ್ಭದಲ್ಲಿ ಜಂಬೂಸವಾರಿ ವಿಶೇಷತೆ ಪಡೆದಿದ್ದು, ಅಂತೆಯೇ ಇದೇ ಮೊದಲ ಬಾರಿಗೆ ತೂಬಗೆರೆಯ ಚಾವಡಿ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಸಿದ್ದಗಂಗಾ ಮಠದ ಆನೆ (ಲಕ್ಷ್ಮಿ) ಕರೆತಂದು ಶ್ರೀ ವಿದ್ಯಾ ಗಣಪತಿಯನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುತ್ತಿದೆ . ಈ ವಿಶೇಷ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ತೂಬಗೆರೆ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ (ಕಿಟ್ಟಿ) ಮಾತನಾಡಿ ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿಯವರು ಮೊದಲ ಬಾರಿಗೆ ತೂಬಗೆರೆಯ ಇತಿಹಾಸದಲ್ಲೇ ದಸರಾ ಮಾದರಿ ಆನೆ ಅಂಬಾರಿ ಮೆರವಣಿಗೆಯನ್ನು ಆಯೋಜಿಸಿದ್ದು, ಇದು ಊರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಇದೊಂದು ಸ್ಮರಣೀಯ ಕಾರ್ಯಕ್ರಮವಾಗಿದೆ.
ಮುಂದಿನ ದಿನಗಳಲ್ಲಿ ಗ್ರಾಮದ ಬೀದಿಬೀದಿಗಳಲ್ಲಿ ಒಂದೊಂದು ಗಣಪತಿ ಕುರಿಸುವ ಬದಲು ಗ್ರಾಮಕ್ಕೆಲ್ಲ ಒಂದೇ ಗಣಪತಿ ಕೂರಿಸಿದರೆ ಉತ್ತಮ. ಮನೆ ಮಟ್ಟಕ್ಕೆ ಚಿಕ್ಕ ಗಣಪತಿ ಇರಲಿ ಆದರೆ ಗ್ರಾಮಕ್ಕೆ ಒಂದೇ ಗಣಪತಿ ಇರಲಿ ಹಲವಾರು ತಿಂಗಳುಗಳಿಂದ ಕಾರ್ಯಕ್ರಮವನ್ನು ವಿಶೇಷವಾಗಿ ರೂಪಿಸಿರುವ ಮಧು ಮತ್ತು ತಂಡದವರಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ, ನಾದಸ್ವರ, ಕಲಾ ತಂಡಗಳು ನೆರೆದಿದ್ದ ಭಕ್ತರ ಗಮನ ಸೆಳೆದವು.

ಈ ಕುರಿತು ವಕೀಲರು, ಜಿಲ್ಲಾ ಬಿಜೆಪಿ ಪ್ರಮುಖರಾದ ಆರ್ ಪ್ರತಾಪ್ ಮಾತನಾಡಿ ಮೆರವಣಿಗೆಯ ಹಾಗೂ ವಿಸರ್ಜನೆಗಾಗಿ ಅಗತ್ಯವಾದ ಸರ್ಕಾರದ ಎಲ್ಲಾ ಅನುಮತಿಗಳನ್ನು ಪಡೆದುಕೊಳ್ಳಲು ಹರಸಾಹಸ ಪಟ್ಟಿದ್ದೇವೆ ಕಾರ್ಯಕ್ರಮ ಯಶಸ್ವಿಯಾಗಲು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜು, ದೇವನಹಳ್ಳಿ ಶಾಸಕರಾದ ಕೆಎಚ್ ಮುನಿಯಪ್ಪ ರವರು ಹಾಗೂ ಸಮಾಜಸೇವಕರು ಬಿಜೆಪಿ ಪಕ್ಷದ ಪ್ರಮುಖರಾದ ಅಮರೇಶ್ ಗೌಡರವರು ಸಹಕಾರ ನೀಡಿದ್ದು . ಕಾರ್ಯಕ್ರಮದ ಸಂಪೂರ್ಣ ಯಶಸ್ಸಿನ ಫಲ ಮಧು ಮತ್ತು ಸಂಗಡಿಗರಿಗೆ ಸಲ್ಲಬೇಕಾಗುತ್ತದೆ ಕಾರಣ ಅಚ್ಚುಕಟ್ಟಾದ ಯೋಜನೆ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದಿರುವುದು ನಮ್ಮ ತೂಬಗೆರೆಯ ಯುವಕರ ತಂಡ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

