ದೊಡ್ಡಬಳ್ಳಾಪುರ:ಭಾರತೀಯ ಕಿಸಾನ್ ಸಂಘದ ಜಿಲ್ಲಾ ಹಾಗು ತಾಲ್ಲೂಕು ಘಟಕದ ವತಿಯಿಂದ ರೈತರ ಆರಾಧ್ಯ ದೈವ ಕೃಷಿಯ ಮೂಲ ಪುರುಷ ಬಲರಾಮ ದೇವರ ಜಯಂತೋತ್ಸವ ಕಾರ್ಯಕ್ರಮ ಅಚರಣೆ ಮಾಡಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಆಚರಣೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ ರವರು ಬಲರಾಮ ದೇವರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ಭಾರತೀಯ ಕಿಸಾನ್ ಸಂಘ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೈದ್ಧಾಂತಿಕವಾಗಿ ಸಂಬಂಧ ಹೊಂದಿರುವ ಭಾರತದ ಅತಿದೊಡ್ಡ ರೈತ ಸಂಘಟನೆಯಾಗಿದೆ. ಇದನ್ನು 1978 ರಲ್ಲಿ ದತ್ತೋಪಂತ್ ಥೇಂಗಡಿ ಅವರು ಸ್ಥಾಪಿಸಿದ ಈ ಸಂಘಟನೆಯು ರೈತರ ಹಿತಾಸಕ್ತಿಗಳನ್ನು ಕಾಪಾಡುವುದು, ಕೃಷಿ ಉನ್ನತೀಕರಣ, ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತದೆ. ಇದು ರಾಜಕೀಯ ರಹಿತ ಸಂಸ್ಥೆಯಾಗಿದೆ ಎಂದರು.
ಭಾರತವು ಕೃಷಿ ಪ್ರಧಾನ ದೇಶ, ಆದರೆ ಗ್ರಾಮೀಣ ಜನಸಂಖ್ಯೆಯ ಸುಮಾರು 70% ರಷ್ಟು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿದೆ, ರೈತ ವಿರೋಧಿ ಕಾನೂನುಗಳು, ಹೆಚ್ಚಿನ ಸಾಲದ ಹೊರೆ, ಕಳಪೆ ಸರ್ಕಾರಿ ನೀತಿ, ಸಬ್ಸಿಡಿಗಳಲ್ಲಿನ ಭ್ರಷ್ಟಾಚಾರ, ಬೆಳೆ ವೈಫಲ್ಯ, ಮಾನಸಿಕ ಆರೋಗ್ಯ, ವೈಯಕ್ತಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆ ಗಳಿಂದ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅದರೆ ಇಂತಹ ಸಮಸ್ಯೆಗಳನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಅದರಿಂದ ಸಂಘಟನೆಯ ಮೂಲಕ ನಮ್ಮ ಹಕ್ಕು ಪಡೆಯಬೇಕಾದರೆ ರೈತರು ಒಗ್ಗಟ್ಟಿನ ಹೋರಾಟದಿಂದ ಮಾತ್ರ ಸಾದ್ಯ ಎಂದರು.

ಭಾರತೀಯ ಕಿಸಾನ್ ಸಂಘ ತಾಲ್ಲೂಕು ಅಧ್ಯಕ್ಷ ನೆಲ್ಲುಗುದಿಗೆ ಚಂದ್ರು ಮಾತನಾಡಿ ವ್ಯವಸಾಯ ಅಧಿಕ ಶ್ರಮ ಕಡಿಮೆ ಪ್ರತಿಫಲ ಎನ್ನುವ ಹಂತ ತಲುಪಿದೆ.ಹಾಗಾಗಿ ರೈತರು ಹಾಗೂ ಕಾರ್ಮಿಕ ವರ್ಗ ವ್ಯವಸಾಯ ಬಿಟ್ಟು ನಗರದ ಕಡೆ ಮುಖಮಾಡಿ ಅಂಗಡಿ ಮಂಗಟ್ಟುಗಳು ಮಾಡಿಕೊಂಡು ವ್ಯವಸಾಯದ ಕೆಲಸ ಮರೆಯುವ ಸ್ಥಿತಿಗೆ ತಲುಪಿದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡಿದರೆ ತಿಂಗಳಿಗೆ ಒಂದಿಷ್ಟು ವೇತನ ಹಾಗು ಆರೋಗ್ಯ ಕವಚ ಜೊತೆಯಲ್ಲಿ ಕಾರ್ಮಿಕ ನಿಧಿ ಯಿಂದ ನಿವೃತ್ತಿ ಸಮಯದಲ್ಲಿ ಸಹಾಯವಾಗುತ್ತೆ ಎಂದು ವ್ಯವಸಾಯಮರೆತು ಜೀವನ ಸಾಗಿಸಲು ಮುಂದಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ಅಂಜೀನಪ್ಪ,ಮಹಿಳಾ ಪ್ರಮುಖರಾದ ಅಂಬಿಕಾ, ತಾಲ್ಲೂಕು ಪ್ರದಾನ ಕಾರ್ಯದರ್ಶಿ ರಾಜಘಟ್ಟ ಗಣೇಶ್,ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರಾದ ಗೀತಾ ಹಾಗು ಗೂಳ್ಯ ಶಿವಣ್ಣ ಹಾಗೂ ಮತ್ತಿತರರು ಹಾಜರಿದ್ದರು.
