
ರಾಜ್ಯ ಮಟ್ಟದ 400ಮೀಟರ್ ಓಟದ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆಯ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯ ದೊಡ್ಡಬಳ್ಳಾಪುರ ರಾಮ್ ಕೆ.ರಾಮಾಂಜಿನಪ್ಪ ಒಂದು ನಿಮಿಷದ ಒಳಗಾಗಿ 400ಮೀಟರ್ ಅಂತರವನ್ನು ಕ್ರಮಿಸುವ (ಓಡಿ) ಮೂಲಕ ರಾಜ್ಯಕ್ಕೆ ಪ್ರಥಮ ಸ್ಪರ್ಧಿಯಾಗಿ ರೆಕಾರ್ಡ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಟಕ ರಾಜ್ಯ ದೈಹಿಕ ಶಿಕ್ಷಕರ ಸಂಘ (ರಿ)ಬೆಂಗಳೂರು ಜಿಲ್ಲಾ ಘಟಕ ದಕ್ಷಿಣ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದರೆ ಇವರುಗಳ ಸಹಯೋಗದೊಂದಿಗೆ ಸೆಪ್ಟೆಂಬರ್ 25ಮತ್ತು 26 ರಂದು ನಡೆದ ರಾಜ್ಯ ಮಟ್ಟದ 400ಮೀಟರ್ ಓಟದ ಸ್ಪರ್ಧೆಯಲ್ಲಿ ರಾಜ್ಯದ 35ಜಿಲ್ಲೆಗಳಿಂದ 70 ಕ್ರೀಡಾ ಪಟುಗಳು ಭಾಗವಹಿಸಿದ್ದು ನಮ್ಮ ತಾಲ್ಲೂಕಿನ ಅಣಗಲಪುರ ಗ್ರಾಮದ ರಾಮ್ ಕೆ.ರಾಮಾಂಜಿನಪ್ಪ ಪ್ರಥಮ ಸ್ಥಾನ ಪಡೆದು ಜಯಭೇರಿಯಾಗಿದ್ದಾರೆ, ದೊಡ್ಡಬಳ್ಳಾಪುರದ ಗಿರೀಶ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.