ಸ್ಥಳೀಯ ವಿದ್ಯಾರ್ಥಿಗಳು ಓದುಗರ ಅನುಕೂಲಕ್ಕಾಗಿ ನಗರದ 12ನೇ ವಾರ್ಡ್ ನಲ್ಲಿ 1200ಕ್ಕೂ ಅಧಿಕ ಪುಸ್ತಕ ಭಂಡಾರ ಹೊಂದಿರುವ ಸುಸಜ್ಜಿತ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಾಯಿತು.
ಸ್ಥಳೀಯ ಶಾಸಕ ಧೀರಜ್ ಮುನಿರಾಜು ನಗರಸಭಾ ಅಧ್ಯಕ್ಷ ಸುಮಿತ್ರ ಆನಂದ್ , ಸ್ಥಳೀಯ ನಗರಸಭಾ ಸದಸ್ಯ ಶಿವ.ಎಂ (ಶಿವರಾಜ್ ), ಹಾಗೂ ಎಲ್ಲಾ ನಗರಸಭೆ ಸದಸ್ಯರು, ಗಣ್ಯರ ಜೊತೆಗೂಡಿ ನೂತನ ಗ್ರಂಥಾಲಯವನ್ನು ಉದ್ಘಾಟಿಸಿದರು.

ಈ ಕುರಿತು ಸ್ಥಳೀಯ ಮುಖಂಡರು ಹಾಗೂ ವಕೀಲರಾದ ನಾಗೇಂದ್ರ ಮಾತನಾಡಿ ವಿದ್ಯೆಎಂಬುದು ಕಳವು ಮಾಡಲಾಗದ ಸಂಪತ್ತು, ಹಾಗಾಗಿ ಕಲಿಕೆಗೆ ಅವಶ್ಯಕವಾಗಿರುವ ಜ್ಞಾನ ಸಂಪತ್ತನ್ನು ಹೊಂದಿರುವ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಗ್ರಂಥಾಲಯವನ್ನು ವೀರಭದ್ರನ ಪಾಳ್ಯದಲ್ಲಿ ಉದ್ಘಾಟಿಸಲಾಗಿದೆ. ಸ್ಥಳೀಯ ಯುವಕರು ವಿದ್ಯಾರ್ಥಿಗಳು ಓದುಗರು ಈ ಗ್ರಂಥಾಲಯವನ್ನು ಸದ್ಭಾಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಜಕೀಯ ಕಾರಣಗಳಿಂದ ಈಗಾಗಲೇ ಉದ್ಘಾಟನೆ ಆಗಬೇಕಿದ್ದ ಗ್ರಂಥಾಲಯವು ನೆನೆಗುದಿಗೆ ಬಿದ್ದಿತ್ತು , ಸ್ಥಳೀಯ ಯುವಕರ ಪರಿಶ್ರಮದಿಂದಾಗಿ ಇಂದು ಗ್ರಂಥಾಲಯ ಗಣ್ಯರ ಮುಖೇನ ಲೋಕಾರ್ಪಣೆಗೊಂಡಿದೆ . ಸ್ಪರ್ಧಾತ್ಮಕ ಐಎಎಸ್, ಕೆಎಎಸ್,ಪಿಡಿಒ, ಆರಕ್ಷಕ ಪೇದೆ, ಇತರೆ ಪರೀಕ್ಷೆಗಳಿಗೆ ಅವಶ್ಯಕ ಮಾಹಿತಿ ಉಳ್ಳ ಪುಸ್ತಕಗಳು ಈ ಗ್ರಂಥಾಲಯದಲ್ಲಿ ಲಭ್ಯವಾಗಲಿದೆ ಹಾಗಾಗಿ ಸ್ಥಳೀಯ ಯುವಕರು ಓದುಗರು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಗ್ರಂಥಾಲಯದ ಘನತೆ ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಪ್ರಭಾಕರ್, ಲಾರಿ ದೊಡ್ಡಯ್ಯ, ಚಂದ್ರಕುಮಾರ್, ವಿಜಯಕುಮಾರ್, ಚೇತನ್ ಕುಮಾರ್, ಕೆಂಪರಾಜ್, ಅಭಿಷೇಕ್, ನವೀನ್, ಅಭಿಲಾಷ್ , ಮಂಜುನಾಥ್, ಮುನಿರಾಜು, ರಮೇಶ್, ಸಂತೋಷ್, ರಾಜೇಶ್. ವಿಶ್ವ. ಮಹೇಶ್, ಕೋಟಿ ಮುನಿಯಪ್ಪ, ಶಿವರಾಜ್ ಇದ್ದರು
