
ದೊಡ್ಡಬಳ್ಳಾಪುರ : ತಾಲ್ಲೂಕಿನ ಪಾಲನಜೋಗಿಹಳ್ಳಿ ಗ್ರಾಮದಲ್ಲಿ ದಾಖಲಾತಿಗಳಿಲ್ಲದೆ, ಅಕ್ರಮ ಕಟ್ಟಡ ನಿರ್ಮಾಣ ಮಾಡಿಕೊಂಡು ಗ್ರಾಮಠಾಣದ ಸುಮಾರು ಜಾಗ ಒತ್ತುವರಿ ಮಾಡಿದ್ದಾರೆ ಆದರ ನಿಯಮಗಳ ಉಲ್ಲಂಘನೆ ಮಾಡಿ ಒತ್ತುವರಿ ಮಾಡಿದ್ದರು ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಸ್ಥಳೀಯ ಅಧಿಕಾರಿಗಳ ನಿರ್ಲಕ್ಷತೆ ತೋರುತ್ತಿದೆ ಎಂದು ಪ್ರಬುದ್ಧ ಕರ್ನಾಟಕ ಭೀಮ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಯು. ಮುನಿರಾಜು ಆರೋಪಿಸಿದರು.
ಭೂಕಬಳಿಕೆ ವಿರುದ್ಧ ಪಾಲನಜೋಗಿಹಳ್ಳಿಯಲ್ಲಿ ಪ್ರಬುದ್ಧ ಕರ್ನಾಟಕ ಭೀಮ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು ಗ್ರಾಮಠಾಣಾ ವ್ಯಾಪ್ತಿಯ ಸುಮಾರು ಜಾಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಸರ್ವೆ ನಂ.44/1 ರಲ್ಲಿ C.A.ಸೈಟ್, ಉದ್ಯಾನವನ, ಮಾರಾಟ ಸರ್ವೆ ನಂ.22/5 ರಲ್ಲಿ ಅಕ್ರಮ ಖಾತೆ ಸರ್ವೆ ನಂ. 18/4 ರಲ್ಲಿ ಉಂಡೆ ಖಾತೆ ಫಾರಂ ನಂ.9 ಫಾರಂ ನಂ.11 ನ್ನು ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಬುದ್ಧ ಕರ್ನಾಟಕ ಭೀಮಸೇನೆ ಅಗ್ರಹಿಸುತ್ತದೆ ಎಂದರು.
ಗ್ರಾಮಠಾಣ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಪ್ರಬುದ್ಧ ಕರ್ನಾಟಕ ಭೀಮಸೇನೆಯು RTI ಮೂಲಕ ಪಂಚಾಯಿತಿಯಲ್ಲಿ ಸದರಿ ಕಟ್ಟಡಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪಡೆದು ಪರಿಶೀಲಿಸಿದಾಗ ಪ್ರಸ್ತುತ ಇರುವ ಕಟ್ಟಡಕ್ಕೂ ದಾಖಲಾತಿಗಳಿಗೂ ಯಾವುದೇ ಸಂಬಂಧವಿಲ್ಲ. ದಾಖಲಾತಿಗಳಿಲ್ಲದೇ ಗ್ರಾಮಠಾಣದಲ್ಲಿ ಕಟ್ಟಡ ನಿರ್ಮಾಣ ಮಾಡಿ ಬಾಡಿಗೆ ಮನೆಗಳಾಗಿ ವಿಂಗಡಿಸಿರುವುದು ಕಾಣುತ್ತದೆ.
ಒಂದು ಲ್ಯಾಂಡ್ ಮಾಡಬೇಕಾದರೆ ಲ್ಯಾಂಡ್ ಮ್ಯಾಪ್, ಲೇಔಟ್ ಪ್ಲಾನ್, ಜಮೀನಿನ ನಕ್ಷೆ ಸರ್ವೆ ನಂಬರು ಯಾವುದು, ಸ್ಕೆಚ್ ಪ್ಲಾನ್ ರಸ್ತೆ ಅನುಮೋದನೆ ನಕ್ಷೆ ಮತ್ತು ಎನ್.ಓ.ಸಿ ಹಿಂಬರಹಗಳನ್ನು ಗ್ರಾಮಪಂಚಾಯಿತಿಯಿಂದ ಹಾಗೂ ಯೋಜನಾ ಪ್ರಾಧಿಕಾರದಿಂದ ತೆಗೆದುಕೊಳ್ಳಬೇಕು. ಆದರೆ ಈ ಪ್ರಕರಣದಲ್ಲಿ ಯಾವುದೇ ದಾಖಲಾತಿಗಳು ಕಾಣುತ್ತಿಲ್ಲ. C.A ಸೈಟ್, ಉದ್ಯಾನವನ, ಇತರೆ ಸರ್ಕಾರಿ ಸೌಲಭ್ಯಕ್ಕಾಗಿ ಯಾವುದು ಜಾಗವನ್ನು ಮೀಸಲಿಟ್ಟಿದ್ದಾರೆ ಎಂಬುದು ಮಾಹಿತಿ ಇಲ್ಲ. ಹಾಗಾಗಿ ನಿಯಮಗಳ ಉಲ್ಲಂಘನೆಯಾಗಿದ್ದರು ಉಂಡೆ ಖಾತೆ, ಫಾರಂ ನಂ.9 ಮತ್ತು ಫಾರಂ ನಂ.11 ನ್ನು ಕೊಡಿಗೆಹಳ್ಳಿ ಪಂಚಾಯಿತಿಯಿಂದ ಮಾಡಲಾಗಿದೆ ಎಂದರು.
ದಾಖಲಾತಿಗಳನ್ನು ಪರಿಶೀಲಿಸಿ ನೋಡಿ, ಅಕ್ರಮ ಖಾತೆ, ಉಂಡೆ ಖಾತೆ, ಹಾಗೂ ಗ್ರಾಮಠಾಣದ ಸುಮಾರು ಜಾಗವನ್ನು ಒಂದೇ ಕುಟುಂಬ ದವರಿಂದ ಒತ್ತುವರಿ ಮತ್ತು ಪಂಚಾಯಿತಿ ಸದಸ್ಯನಿಂದ ಗ್ರಾಮಠಾಣ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ವಿಚಾರಕ್ಕೂ ಅರ್ಜಿ ಸಲ್ಲಿಸಿದ್ದರು ತೆರವುಗೊಳಿಸದೇ ಇರುವುದು ಅಧಿಕಾರಿಗಳ ನಿರ್ಲಕ್ಷತೆ ಎದ್ದು ಕಾಣುತ್ತದೆ ಇಂದು ಸಾಂಕೇತಿಕವಾಗಿ ಒಂದು ದಿನದ ಪ್ರತಿಭಟನೆ ಮಾಡಿದ್ದೇವೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.