ವಿಜಯಮಿತ್ರ ಸುದ್ದಿ ದೊಡ್ಡಬಳ್ಳಾಪುರ : ಬೊಮ್ಮದೇವರ (ಬೊಮ್ಮ ಲಿಂಗೇಶ್ವರ )ಮತ್ತು ಮಾಚಿದೇವರ ದೇವಾಲಯದಲ್ಲಿ ಆಯುಧಪೂಜೆ ಹಾಗು ವಿಜಯದಶಮಿ ಅಂಗವಾಗಿ ಶ್ರೀ ಬೊಮ್ಮದೇವರ (ಬೊಮ್ಮ ಲಿಂಗೇಶ್ವರ )ಮತ್ತು ಮಾಚಿದೇವರ ದೇವಾಲಯದ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ .) ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಟ್ರಸ್ಟ್ ನ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಜಿ.ರಂಗಸ್ವಾಮಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೊಮ್ಮ ಲಿಂಗೇಶ್ವರ ಮತ್ತು ಮಾಚಿದೇವರಿಗೆ ನವರಾತ್ರಿ ಹಾಗೂ ದಸರಾ ಹಬ್ಬದ ಅಂಗವಾಗಿ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎಲ್ಲಾ ಕುಲಭಾಂದವರಿಗೂ ಶುಭ ಕೋರಿದ್ದೇವೆ . ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ . ದೇವಾಲಯದ ಅಭಿವೃದ್ಧಿ ಹಾಗೂ ಸಮುದಾಯದ ಏಳಿಗೆಗೆ ಎಲ್ಲರ ಸಹಕಾರದ ಅವಶ್ಯಕತೆ ಇದೆ ಎಂದರು .
ದೇವಾಲಯಕ್ಕೆ ಬಂದ ಭಕ್ತದಿಗಳಿಗೆ ಪೂಜೆ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು .
ಪೂಜಾ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಕೃಷ್ಣಪ್ಪ ,ಅಧ್ಯಕ್ಷಕೆ. ಬಿ.ರಾಜಣ್ಣ, ಕಾರ್ಯಾಧ್ಯಕ್ಷ ಪಿ.ನಾಗರಾಜು, ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಿವಕುಮಾರ್ , ಮಾಜಿ ಖಜಾಂಚಿ ಈ. ನಾಗರಾಜು ನಿರ್ದೇಶಕರಾದ ಪಿ.ಹೆಚ್.ರಮೇಶ್ ,ಡಿ ವಿ.ಸುಂದರ್ ರಾಜ್ ,ಆರ್. ಆನಂದ್ ,ಹೆಚ್.ರಮೇಶ್ ,ಆರ್.ಮೂರ್ತಿ ,ರಾಜ್ ಕುಮಾರ್ ,ಜಿ. ಮಂಜುಳ ,ಬಿ.ಈಶ್ವರ್ ,ಜಿ.ರಂಗಸ್ವಾಮಿ ,ವಜ್ರಪ್ಪ ,ಬಿ.ಈಶ್ವರ್ ಸೇರಿದಂತೆ ಹಲವರು ಹಾಜರಿದ್ದರು .
