ದೊಡ್ಡಬಳ್ಳಾಪುರ : ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮದ ಶ್ರೀ ಗುರು ಶನೇಶ್ವರ ದೇವಾಲಯದಲ್ಲಿ ಆಯುಧಪೂಜೆ ಹಾಗು ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಳೆದ ಸುಮಾರು 40 ವರ್ಷಗಳಿಂದ ದಿ. ಲಿಂಗಪ್ಪ ಹಾಗೂ ಶ್ರೀಮತಿ ಲಕ್ಷ್ಮಮ್ಮ ನವರ ಕುಟುಂಬಸ್ಥರು ಗುರು ಶನೇಶ್ವರ ದೇವರಿಗೆ ಪೂಜಾ ಹಾಗೂ ಸೇವಾ ಕಾರ್ಯಗಳನ್ನು ನೆಡೆಸಿಕೊಂಡು ಬರುತ್ತಿದ್ದು ಪ್ರಸ್ತುತ ಸೇವಾಕಾರ್ಯಗಳನ್ನು ಎಲ್.ಮೈಲಾರಪ್ಪ ನೇತೃತ್ವದಲ್ಲಿ ನೆಡೆಸಲಾಗುತ್ತಿದೆ .
ದಸರಾ ವಿಶೇಷವಾಗಿ ದೇವರಿಗೆ ವಿವಿಧ ಪುಷ್ಪಾಗಳ ಅಲಂಕಾರ ಹಾಗೂ ವಿಶೇಷ ಪೂಜೆ ಸಲ್ಲಿಸಿ ದೇವಾಲಯಕ್ಕೆ ಬಂದ ಭಕ್ತದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು .
ದೇವಾಲಯದ ಪ್ರಧಾನ ಅರ್ಚಕರಾದ ಮೈಲಾರಪ್ಪ ಮಾತನಾಡಿ ಹಲವಾರು ವರ್ಷಗಳಿಂದ ಈ ಸೇವೆ ನಿರಂತರವಾಗಿ ನೆಡೆಯುತ್ತಿದ್ದು , ದಸರಾ ಸಮಯದಲ್ಲಿ ದೇವಾಲಯಕ್ಕೆ ಸ್ಥಳೀಯ ಭಕ್ತದಿಗಳಷ್ಟೇ ಅಲ್ಲದೆ ಜಿಲ್ಲೆ ಹಾಗೂ ರಾಜ್ಯದ ಹಲವು ಭಾಗಗಳಿಂದಲೂ ಬರುವುದು ವಿಶೇಷವಾಗಿದೆ ಎಂದರು .

ಸ್ಥಳೀಯ ಮುಖಂಡ ಮಲ್ಲೇಶ್ ಮಾತನಾಡಿ ಈ ಸೇವಾಕಾರ್ಯವೂ ಸುಮಾರು 40ವರ್ಷಗಳಿಂದ ಸತತವಾಗಿ ನೆಡೆಯುತ್ತಿದ್ದು ಅತ್ಯಂತ ಶ್ರದ್ದಾಭಕ್ತಿಗಳಿಂದ ದಸರಾ ಉತ್ಸವ ಆಚರಿಸಲಾಗುತ್ತದೆ . ಪ್ರತಿ ಸೋಮವಾರ ಹಾಗೂ ಶನಿವಾರ ದೇವಾಲಯದಲ್ಲಿ ಸ್ವಾಮಿಯವರಿಗೆ ವಿಶೇಷ ಪೂಜೆ ನಡೆಯುತ್ತದೆ .ನೂರಾರು ಭಕ್ತದಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು .

ದರ್ಗಾಜೋಗಿಹಳ್ಳಿ ಗ್ರಾಮಪಂಚಾಯತಿ ಸದಸ್ಯ ಜಿ .ರಂಗಸ್ವಾಮಿ ಮಾತನಾಡಿ ಶ್ರೀ ಶನೈಶ್ವರ ಸ್ವಾಮಿಯ ಸೇವಾ ಕಾರ್ಯಗಳನ್ನು ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದೆ ಕಾಲಕಾಲಕ್ಕೆ ಮೈಲಾರಪ್ಪ ಹಾಗೂ ಮಲ್ಲೇಶ್ ಕುಟುಂಬದವರು ನೆರೆವೇರಿಸಿಕೊಂಡು ಬರುತ್ತಿದ್ದಾರೆ ಈ ದೈವಕಾರ್ಯ ಸದಾ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು .
