ದೊಡ್ಡಬಳ್ಳಾಪುರ : ಅಳಿವಿನ ಅಂಚಿನಲ್ಲಿರುವ ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಶಕ್ತಿ ತುಂಬುವ ಕೆಲಸವನ್ನು ಆತ್ಮನಿರ್ಭರ ಭಾರತ ಅಭಿಯಾನ ಮಾಡುತ್ತಿದ್ದು, ಈ ಅಭಿಯಾನವು ಒಟ್ಟು 3 ಸಪ್ತಾಹಗಳ ಕಾಲ ನೆಡೆಯಲಿದೆ ಎಂದು ಬಿಜೆಪಿ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು
ನಗರದ ಬಿಜೆಪಿ ಜಿಲ್ಲಾ ಕಛೇರಿ ಕಾರ್ಯಲಯದಲ್ಲಿ ಜಿಲ್ಲಾ ಮಟ್ಟದ ಆತ್ಮ ನಿರ್ಭರ ಭಾರತ ಕಾರ್ಯಕ್ರಮ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶಿಯ ಉತ್ಪಾದಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಕಾರ್ಯಕ್ರಮವನ್ನು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು 11ವರ್ಷಗಳಿಂದ ನೆಡೆಸಿಕೊಂಡು ಬರುತ್ತಿದ್ದಾರೆ, ಈ ಅಭಿಯಾನದ ಮುಖ್ಯ ಉದ್ದೇಶ ಸಣ್ಣ ಹಾಗೂ ಗುಡಿ ಕೈಗಾರಿಕೆಗಳನ್ನ ಪ್ರೋತ್ಸಹಿಸಿ ಸ್ವದೇಶಿ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇಶದ ಜನತೆ ಬಳಸುವ ಮೂಲಕ ಸ್ವದೇಶಿ ಉತ್ಪಾದಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದಾಗಿದೆ ಎಂದರು.
ಜಿಲ್ಲಾ ಸಂಚಾಲಕ ಒಬದೇನಹಳ್ಳಿ ಮುನಿಯಪ್ಪ ಮಾತನಾಡಿ ನಮ್ಮ ಸ್ಥಳೀಯ ಗುಡಿಕೈಗಾರಿಕೆಗಳಲ್ಲಿ ಸಿದ್ದಪಡಿಸಿದ ವಸ್ತುಗಳನ್ನು ಖರೀದಿ ಮಾಡುವ ಮೂಲಕ ನಮ್ಮ ದೇಶದ ಉತ್ಪದಕರ ಅಭಿವೃದ್ಧಿಗೆ ದೇಶದ ಜನತೆ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ಈ ಅಭಿಯಾನಕ್ಕೆ ದೇಶದ ಪ್ರಧಾನಿಗಳು ಚಾಲನೆ ನೀಡಿದ್ದಾರೆ.ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಭಾರತೀಯ ಜನತಾ ಪಕ್ಷವು ಅರಿವು ಮೂಡಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್ ಎಂ ರವಿಕುಮಾರ್ , ಜಿಲ್ಲಾ ಆತ್ಮ ನಿರ್ಭರ ಭಾರತದ ಸಂಚಾಲಕ ಒಬೆದೇನಹಳ್ಳಿ ಮುನಿಯಪ್ಪ, ಜಿಲ್ಲಾ ಸಹ ಸಂಚಾಲಕರಾದ ವಾಣಿ ನಂದಕುಮಾರ್,ಜಿಲ್ಲಾ ಸಹ ಸಂಚಾಲಕ ಕೆ ನಾಗೇಶ್, ದೊಡ್ಡಬಳ್ಳಾಪುರ ಮಂಡಲ ಅಧ್ಯಕ್ಷ ಮುದ್ದಪ್ಪ , ನಗರ ಮಂಡಲದ ಆತ್ಮ ನಿರ್ಭರ ಭಾರತದ ಸಹ ಸಂಚಾಲಕ ಪಿ ಎಸ್ ವೆಂಕಟೇಶ್, ಜಿಲ್ಲಾ ಕಚೇರಿ ಕಾರ್ಯಲಯದ ಕಾರ್ಯದರ್ಶಿಯಾದ ಮಂಜುನಾಥ ಉಪಸ್ಥಿತರಿದ್ದರು.
