ದೊಡ್ಡಬಳ್ಳಾಪುರ : ನೂತನ ಹೀಲಿನ್ ಆಸ್ಪಿಟಲ್ಸ್ ವಿರುದ್ಧ ಡಾ. ಅರ್ಜುನ್ ಎಂ.ಬಿ ಎಂಬ ವ್ಯಕ್ತಿ ಇಲ್ಲಸಲ್ಲದ ಆರೋಪಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೀಲಿನ್ ಆಸ್ಪಿಟಲ್ಸ್ ಮಾಲೀಕ ಹಾಗೂ ವೈದ್ಯ ಡಾ. ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಈ ಇದ್ದ ಸೆವೆನ್ ಹಿಲ್ಸ್ ಆಸ್ಪತ್ರೆಯು ಕಾರಣಾಂತರಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಅದೇ ಕಟ್ಟಡದಲ್ಲಿ ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಪರವಾನಗಿ ಪಡೆದುಕೊಂಡು ನೂತನವಾಗಿ ಹೀಲಿನ್ ಆಸ್ಪಿಟಲ್ಸ್ ಪ್ರಾರಂಭ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಅ.15ರಂದು ಈ ಆಸ್ಪತ್ರೆ ಉದ್ಘಾಟನೆಯಾಗಲಿದೆ.. ಹೀಗಿರುವಾಗ ಡಾ. ಅರ್ಜುನ್ ಎಂ.ಬಿ ಎಂಬ ವ್ಯಕ್ತಿ ನಮ್ಮ ಆಸ್ಪತ್ರೆಯ ಭಾವಚಿತ್ರ ತೆಗೆದು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಸೆವೆನ್ ಹಿಲ್ಸ್ ಆಸ್ಪತ್ರೆಗೂ ಹೀಲಿನ್ ಆಸ್ಪಿಟಲ್ಸ್ ಗೂ ಯಾವುದೇ ಸಂಬಂಧವಿಲ್ಲ. ಹಾಗೂ ಡಾ. ಅರ್ಜುನ್ ಎಂ.ಬಿ ಎಂಬ ವ್ಯಕ್ತಿಗೂ ಹೀಲಿನ್ ಆಸ್ಪಿಟಲ್ಸ್ ಗೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ನಮ್ಮ ಆಸ್ಪಿಟಲ್ ಗೆ ಅವಮಾನ ಮಾಡಲು ಯತ್ನಗಳು ನಡೆಸಲಾಗಿದೆ.
ನೂತನವಾಗಿ ಹೀಲಿನ್ ಆಸ್ಪಿಟಲ್ಸ್ ಪ್ರಾರಂಭ ಮಾಡಲು ಕಾನೂನಾತ್ಮಕವಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಹೀಲಿನ್ ಆಸ್ಪಿಟಲ್ಸ್ ಎಂಬ ಹೆಸರು ಇಡೀ ದೇಶದಲ್ಲೇ ಇಲ್ಲ. ಆದ್ದರಿಂದ ಟ್ರೇಡ್ ಮಾರ್ಕ್ ಸಹ ಪಡೆಯಲಾಗಿದೆ. ಇದನ್ನು ಸಹಿಸದ ಡಾ. ಅರ್ಜುನ್ ಎಂ.ಬಿ ಎಂಬ ವ್ಯಕ್ತಿ ನಮ್ಮ ಆಸ್ಪತ್ರೆ ವಿರುದ್ಧ ಅಪಪ್ರಚಾರ ಮಾಡುವ ದೃಷ್ಟಿಯಿಂದ ಹೀಲಿನ್ ಆಸ್ಪಿಟಲ್ಸ್ ಹೆಸರು ಬಳಸಿ, ಆಸ್ಪತ್ರೆಯ ಭಾವಚಿತ್ರ ತೆಗೆದು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ನಮಗೆ ಕಿಡಿಗೇಡಿಗಳು ಎಂಬ ಪದವನ್ನು ಬಳಸಿ ಅವಮಾನ ಮಾಡುತ್ತಿದ್ದಾರೆ. ಈತನ ವಿರುದ್ಧ ನಗರ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರನ್ನು ಸಹ ನೀಡಲಾಗಿದೆ.
ದಯವಿಟ್ಟು ಯಾರೂ ತಪ್ಪಾಗಿ ತಿಳಿದುಕೊಳ್ಳಬೇಡಿ, ನಾವು ಯಾವುದೇ ರೀತಿಯ ಕಾನೂನು ಬಾಗಿರವಾಗಿ ಆಸ್ಪತ್ರೆ ಪ್ರಾರಂಭ ಮಾಡಲು ಮುಂದಾಗುತ್ತಿಲ್ಲ. ಕಾನೂನಾತ್ಮಕವಾಗಿ, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳೊಂದಿಗೆ ಆಸ್ಪತ್ರೆ ಪ್ರಾರಂಭ ಮಾಡಲು ತಯಾರು ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ 24×7ಫಾರ್ಮಸಿ, ಆಕ್ಸಿಡೆಂಟ್ ಮತ್ತು ಟ್ರಾಮಾ, ಆರ್ಥೋಪೆಡಿಕ್ಸ್, ನ್ಯೂರೋ ಕೇಂದ್ರಗಳು ಲಭ್ಯವಿರಲಿದೆ. ಜೊತೆಗೆ ಮಾತೃತ್ವ, ಮಕ್ಕಳ ಆರೈಕೆ ಘಟಕವನ್ನು ಸಹ ಪ್ರಾರಂಭ ಮಾಡಲಾಗುವು ಎಂದರು.
