ದೊಡ್ಡಬಳ್ಳಾಪುರ : ರೈತರ ಪರ ಧ್ವನಿಯಾಗಿ ರಾಜ್ಯದ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹಲವಾರು ನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಆದರೆ ನಮ್ಮ ಜೆಡಿಎಸ್ ಪಕ್ಷದಲ್ಲಿ ಈ ರೀತಿಯ ಕಾರ್ಯವನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುತ್ತಿದೆ ಹಾಗಾಗಿ ಜೆಡಿಎಸ್ ಪಕ್ಷದ ನನ್ನಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹಳ್ಳಿರೈತ ಅಂಬರೀಷ್ ತಿಳಿಸಿದ್ದಾರೆ
ಈ ಕುರಿತು ಮಾತನಾಡಿರುವ ಅವರು ರೈತರಿಗೆ ಉತ್ತಮ ಮಾರುಕಟ್ಟೆ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ ಸ್ಥಳೀಯ ರೈತರು ಬೆಳೆದ ಹಲಸಿನ ಹಣ್ಣನ್ನು ರಾಷ್ಟ್ರ ಹಾಗೂ ರಾಜ್ಯದ ವಿವಿಧ ಪ್ರಮುಖರಿಗೆ ನೀಡಲಾಗಿದೆ. ಹಾಗೂ ಇತಿಹಾಸ ಪ್ರಸಿದ್ಧವಾದ ಶ್ರೀ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ನೆಡೆಯುವ ದನಗಳ ಜಾತ್ರೆ ಅಂಗವಾಗಿ ಜಾತ್ರೆಗೆ ಬರುವ ದನ ಕರುಗಳಿಗೆ ಹಾಗೂ ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಹುಲ್ಲು ಮತ್ತು ನೀರು ವಿತರಣೆ ಕಾರ್ಯಕ್ರಮ ರೂಪಿಸಿದ್ದೇವು ಆದರೆ ಇದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ ಎಂದು ಜೆಡಿಎಸ್ ಪಕ್ಷದ ಕೆಲ ಪ್ರಮುಖರು ಮಾತನಾಡಿದ್ದಾರೆ ಹಾಗಾಗಿ ನಮ್ಮಿಂದ ಯಾರಿಗೂ ಬೇಸರವಾಗಬಾರದು ಹಾಗೂ ನನ್ನ ಸೇವೆ ರೈತರ ಪರವಾಗಿ ಸದಾ ನಿರಂತರವಾಗಿ ಸಾಗುತ್ತದೆ ಎಂದು ತಿಳಿಸಲು ಈ ನಿರ್ಧಾರಕ್ಕೆ ಮುಂದಾಗಿದ್ದೇನೆ ಎಂದರು .
ಪಕ್ಷದ ಜಿಲ್ಲಾ ಹಾಗೂ ರಾಜ್ಯ ವರಿಷ್ಠರನ್ನು ಭೇಟಿ ಮಾಡಿ ನಂತರ ಅಧಿಕೃತ ರಾಜೀನಾಮೆ ಘೋಷಣೆ ಮಾಡುತ್ತೇನೆ ಎಂದು ವಿಜಯಮಿತ್ರ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.
