ದೊಡ್ಡಬಳ್ಳಾಪುರ : ಇಂದಿನ ವಿಶೇಷ ದಿನವನ್ನು ನಿರಾಶ್ರಿತ ಕಡುಬಡವರು ಹಾಗೂ ಪುಟಾಣಿ ಮಕ್ಕಳೊಂದಿಗೆ ಆಚರಿಸಿರುವುದು ಸಂತಸ ತಂದಿದೆ ಎಂದು ಖ್ಯಾತ ವಕೀಲರು ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕರಾದ ರವಿ ಮಾವಿನಕುಂಟೆ ತಿಳಿಸಿದರು .

ತಾಲ್ಲೂಕಿನ ದರ್ಗಾಜೋಗಿಹಳ್ಳಿ ನಡೆದ 2026ನೇ ದಿನದ ಅನ್ನದಾಸೋಹ ಕಾರ್ಯಕ್ರಮದಲ್ಲಿ ರವಿ ಮಾವಿನಕುಂಟೆಯವರ 46 ನೇ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳ ವತಿಯಿಂದ ನಿರಂತರ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು .ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿನಿತ್ಯ ಹಸಿದವರಿಗೆ 2ಹೊತ್ತಿನ ಊಟವನ್ನು ನೀಡುವ ಮೂಲಕ ನೂರಾರು ಕುಟುಂಬಗಳಿಗೆ ಆಸರೆಯಾಗಿದೆ . ಹಲವಾರು ದಾನಿಗಳ ನೆರವಿನಿಂದ ಈ ಸ್ಥಳವು ಸುಕ್ಷೇತ್ರವಾಗಿದೆ ಎಂದರು.
ಪ್ರತಿನಿತ್ಯ ಹಸಿವು ನೀಗಿಸುವ ಈ ಕಾರ್ಯ ಸುದೀರ್ಘವಾಗಿ ನೆಡೆಯಲಿ ,ಮುಂದಿನ ದಿನಗಳಲ್ಲಿ ಈ ಸಮಿತಿ ಟ್ರಸ್ಟ್ ಆಗಿ ಮತ್ತಷ್ಟು ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವಂತಾಗಲಿ , ಮಲ್ಲೇಶ್ ಮತ್ತು ತಂಡದ ಈ ಉತ್ತಮ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು .
ನಿರಂತರ ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಅನ್ನದಾಸೋಹಿ ಮಲ್ಲೇಶ್ ವಕೀಲರಾದ ರವಿ ಮಾವಿನಕುಂಟೆ ಅವರನ್ನು ಸನ್ಮಾನಿಸಿ ಗೌರವಿಸಿದರು

ಮುಖಂಡರಾದ ಹನುಮಂತರಾಯಪ್ಪ ಮಾತನಾಡಿ ಸರಳ ಸಜ್ಜನಿಕೆಯ ನಮ್ಮ ನೆಚ್ಚಿನ ನಾಯಕರು ಹಾಗು ಖ್ಯಾತ ವಕೀಲರಾದ ರವಿ ಮಾವಿನಕುಂಟೆ ಅವರ ವಿಶೇಷ ದಿನವನ್ನು ಅತ್ಯಂತ ಸರಳ ಹಾಗೂ ವಿಶೇಷವಾಗಿ ವಯೋವೃದ್ಧರಿಗೆ ಹೊದಿಕೆ ,ಶಾಲಾಮಕ್ಕಳಿಗೆ ಹಾಲು ಮತ್ತು ನೋಟ್ ಬುಕ್ ವಿತರಣೆ ,ಮಹಿಳೆಯರಿಗೆ ವಸ್ತ್ರ ವಿತರಣೆ ಜೊತೆಗೆ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಿದ್ದೇವೆ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿದ ಮಲ್ಲೇಶ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು .

ಮುಖಂಡರಾದ ಗಿರೀಶ್ ಮಾತನಾಡಿ ವಿಶೇಷ ದಿನವನ್ನು ಇತರರಿಗೆ ಸಹಾಯ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರವಿ ಮಾವಿನಕುಂಟೆಯವರಿಗೆ ಶುಭವಾಗಲಿ ,ನಿರಂತರ ದಾಸೋಹಕ್ಕೆ ದಾನಿಗಳ ಅವಶ್ಯಕತೆ ಇದೆ ಹಾಗಾಗಿ ದಾನಮಾಡಲು ಇಚ್ಛಿಸುವ ದಾನಿಗಳು ಮಲ್ಲೇಶ್ ಅವರನ್ನು ಸಂಪರ್ಕಿಸುವ ಮೂಲಕ ತಮ್ಮ ವಿಶೇಷ ದಿನಗಳನ್ನು ಆಚರಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ರಂಗಸ್ವಾಮಿ ,ಸೆಲ್ವಂ ,ಹನುಮಂತರಾಯಪ್ಪ , ಫರ್ದಿನ್ ಖಾನ್ ,ಕುರುಬರಹಳ್ಳಿ ಗಿರೀಶ್ ಸೇರಿದಂತೆ ಹಲವರು ಹಾಜರಿದ್ದರು .
