ದೊಡ್ಡಬಳ್ಳಾಪುರ : ವಾಸವಿದ್ದ ಮನೆಯನ್ನು ಯಾವುದೇ ಮಾಹಿತಿ ನೀಡದೆ ಏಕಾಏಕಿ ಜೆಸಿಪಿಯಿಂದ ಧ್ವಂಸಗೊಳಿಸಿರುವ ಘಟನೆ ತಾಲ್ಲೂಕಿನ ಹೊರವಲಯ ವೀರಪುರದಲ್ಲಿ ನೆಡೆದಿದೆ.
ವೀರಪುರ ಗ್ರಾಮದ ಸರ್ವೇ ನಂಬರ್ 115 ರಲ್ಲಿ ವಿಶ್ವನಾಥ್ ಎಂಬುವರ ಮನೆಯನ್ನು ಜೆಸಿಬಿ ಯಿಂದ ನೆಲಸಮ ಮಾಡಲಾಗಿದೆ.
ಮನೆಯಲ್ಲಿದ್ದ ವಸ್ತುಗಳು, ಅಡುಗೆ ಪಾತ್ರೆಗಳು ಸಂಪೂರ್ಣ ಹಾಳಾಗಿದ್ದು , ತಾವು ಸಾಕಿದ್ದ ಕೋಳಿಗಳು ಗೋಡೆ ಕೆಳಗೆ ಸಿಲುಕಿ ಸಾವನಪ್ಪಿವೆ ಗೋಡೆ ಬಿದ್ದ ಪರಿಣಾಮ ಮೇಕೆ ಮರಿಯ ಕಾಲು ಮುರಿದಿದೆ ಎಂದು ವಿಶ್ವನಾಥ್ ಕಣ್ಣೀರು ಹಾಕಿದ್ದಾರೆ.
ನೆನ್ನೆ ತಡ ರಾತ್ರಿ ಒತ್ತುವರಿ ಮಾಡಲಾಗಿದೆ ಎಂದು ಕೆಲ ಕಿಡಿಗೇಡಿಗಳು ಮನೆಯಲ್ಲಿ ಇದ್ದ ವಯಸ್ಸಾದ ನನ್ನ ತಾಯಿಯನ್ನು ಹೊರದಬ್ಬಿ ಈ ಕೃತ್ಯ ನೆಡೆಸಿದ್ದಾರೆ .ಈ ಜಾಗದ ವಿಚಾರವಾಗಿ ಹಲವಾರು ಬಾರಿ ಮನವಿ ಮಾಡಿದ್ದೇವೆ , ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಂಟಿ ಸರ್ವೇ ಮಾಡಿರುವ ಸಲಹೆ ನೀಡಿದ್ದೆವು ಆದರೆ ಅವರು ಒಪ್ಪುತ್ತಿಲ್ಲ ,ನೆನ್ನೆ ರಾತ್ರಿ ಮನೆಗೆ ನುಗ್ಗಿ ವಾಸವಿದ್ದ ಮನೆಯನ್ನು ಸಂಪೂರ್ಣ ನೆಲಸಮ ಮಾಡಿದ್ದಾರೆ ಎಂದರು .
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
