
ದೊಡ್ಡಬಳ್ಳಾಪುರ : 42ನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್,ಜೂನಿಯರ್,ಸೀನಿಯರ್, ಮತ್ತು11ನೇ ಅಕಾಡೆಮಿ ಪೂಂಸೆ ಟೆಕ್ವಾಂಡೋ ಚಾಂಪಿಯನ್ ಷಿಪ್ 2025ರ ಸ್ಪರ್ಧೆಯಲ್ಲಿ ಮೋನಿಷಾ ಜಿ ಮತ್ತು ನಿತಿನ್ ಬಿ.ಎಸ್. ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕೆ ರಾಮಾಂಜಿನಪ್ಪ ರಾಮ್ ಟ್ವೆಕಾಂಡೋ ಅಕಾಡೆಮಿ(ಸೆಂಟರ್)ಯಲ್ಲಿ ತರಬೇತಿ ಪಡೆದು ಬೆಂಗಳೂರಿನಲ್ಲಿರುವ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನೆಡೆದಂತಹ ಸೀನಿಯರ್ ವಿಭಾಗದ ಪುರುಷರ ಟೆಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಏಳು ಸ್ಪರ್ಧಿಗಳಲ್ಲಿ ಇಬ್ಬರು ಚಿನ್ನದ ಪದಕ ಗೆದ್ದರೆ ಇಬ್ಬರು ಬೆಳ್ಳಿಪದಕ ಮೂವರು ಕಂಚಿನ ಪದಕ ಪಡೆದುಕೊಂಡು ಜಿಲ್ಲೆಗೆ ಹೆಸರು ಮತ್ತು ಕೀರ್ತಿ ತಂದಿದ್ದಾರೆ ಎಂದು ತರಬೇತುದಾರರ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೀನಿಯರ್ ವಿಭಾಗದ ಮಹಿಳಾ ಟೇಕ್ವಾಂಡೋ ಸ್ಪರ್ಧೆಯಲ್ಲಿ ಮೋನಿಷ ಜಿ, ನಿತಿನ್ ಬಿ ಎಸ್ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಪಡೆದರೆ ಅರ್ಜುನ್ ಎನ್,ಮತ್ತು ಗೌತಮ್ ಆರ್ ಎಚ್, ಬೆಳ್ಳಿ ಪದಕ ಪಡೆದಿದ್ದಾರೆ.ಪ್ರೇಕ್ಷಾ ಎಮ್,ರೇಣುಕಾ ಎಲ್,ಶುಭಂತ್ ವಿ, ಕಂಚಿನ ಪದಕ ಪಡೆದಿದ್ದಾರೆ.
ರಾಮ್ ಟೈಕ್ವಾಂಡೋ ಸೆಂಟರ್ ಅಕಾಡೆಮಿಯ ತರಬೇತುದಾರ ರಾಮ್ ಎಲ್ಲರಿಗೂ ಅಭಿನಂದಿಸುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ