ದಿವಂಗತ ನರಸಿಂಹಯ್ಯ ನವರ ನುಡಿನಮನ ಕಾರ್ಯಕ್ರಮವು ಅಕ್ಟೋಬರ್ 24 ರಂದು ಬೆಳಗ್ಗೆ 11 ಗಂಟೆಗೆ ಕುಣಿಗಲ್ ಅರೆಶಂಕರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಿದ್ದರಾಮ ಚೈತನ್ಯ ಸ್ವಾಮಿಗಳ ನೇತೃತ್ವದಲ್ಲಿ ಕುರುವೇಲ್ ತಿಮ್ಮನಹಳ್ಳಿಯಲ್ಲಿ ನೆಡೆಯಲಿದೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಕುರುವೇಲ್ ತಿಮ್ಮನಹಳ್ಳಿ ಗ್ರಾಮದ ಹಿರಿಯರು, ರೈತರು ,ಶ್ರೀ ಆಂಜನೇಯ ಸ್ವಾಮಿ ದೇವಾಲಯದ ನಿರ್ಮಾಣ ಕರ್ತರು ,ಧಾರ್ಮಿಕ ಮುಖಂಡರಾದ ಶ್ರೀ ನರಸಿಂಹಯ್ಯನವರು ಅಕ್ಟೋಬರ್ 14 2025 ರಂದು ತಮ್ಮ 92 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದು .ಅವರ ನುಡಿನಮನ ಕಾರ್ಯಕ್ರಮವನ್ನು ಅಕ್ಟೋಬರ್ 24 ರಂದು ಬೆಳಗ್ಗೆ 11 ಗಂಟೆಗೆ ಕುರುವೇಲ್ ತಿಮ್ಮನಹಳ್ಳಿ ಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ .
ದಿವಂಗತ ನರಸಿಂಹಯ್ಯ ನವರು ರಂಗಮ್ಮ ನರಸಿಂಹಯ್ಯ ಪ್ರತಿಷ್ಠಾನ ಹೆಸರಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ
ವಿಶ್ವ ಮಾನವ ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕರುಹಾಗೂ ಪರಿಸರ ಜಗತ್ ಮಾಸ ಪತ್ರಿಕೆ ಸಂಪಾದಕರಾದ ಶಿವರಾಜ್ ಮಾತನಾಡಿ ನಿಲ್ಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ಕಳೆವುದರಲ್ಲಿ ನಮ್ಮ ಜನುಮ ಜನುಮಗಳು ಗೆಲುವಾರ್ಗೋ ಸೋಲಾರ್ಗೋ ಲೆಕ್ಕ ನೋಡುವುದೆಂದೂ ಫಲವು ಬರಿಯಾಟವೆಲೂ ಮಂಕು ತಿಮ್ಮ ಎಂಬ ಡಿವಿಜಿ ಯವರ ಸಾಲುಗಳಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿ ಯಾವುದೇ ಫಲಪೇಕ್ಷೆ ಇಲ್ಲದೆ ತಮ್ಮ ನಿಸ್ವಾರ್ಥ ಸೇವೆಯಿಂದಲೇ ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ಅವರು ನಮ್ಮೆಲ್ಲರನ್ನು ಅಗಲಿದ್ದಾರೆ. ನಮ್ಮ ತಂದೆಯವರಾದ ದಿವಂಗತ ನರಸಿಂಹಯ್ಯ ನವರ ನುಡಿ ನಮನ ಕಾರ್ಯಕ್ರಮಕ್ಕೆ ಎಲ್ಲರು ಭಾಗವಹಿಸಬೇಕೆಂದು ಮನವಿ ಮಾಡಿದರು.
