ದೊಡ್ಡಬಳ್ಳಾಪುರ : ನಗರದ ಕೆ.ಸಿ.ಪಿ ವೃತ್ತದ ಬಳಿ ನೂತನವಾಗಿ ಆರಂಭಿಸಿರುವ ಶ್ರೀ ಚೌಡೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ., ದ ದೊಡ್ಡಬಳ್ಳಾಪುರ ಶಾಖೆಯ ಉದ್ಘಾಟನಾ ಸಮಾರಂಭ ಶಾಖೆಯ ಆವರಣದಲ್ಲಿ ನಡೆಯಿತು.
ದೊಡ್ಡಬಳ್ಳಾಪುರದಲ್ಲಿ ಶ್ರೀ ಚೌಡೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ದೊಡ್ಡಬಳ್ಳಾಪುರ ಶಾಖೆಯನ್ನು ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ಪೀಠಾಧ್ಯಕ್ಷ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ತತ್ವವಿಲ್ಲದಿದ್ದರೆ ಈ ಜಗತ್ತಿನಲ್ಲಿ ಬದುಕುವುದು ಕಷ್ಟ. ಅಂತೆಯೇ ಸಹಕಾರ ಕ್ಷೇತ್ರದಿಂದ ಇಂದು ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗುತ್ತಿದೆ. ನೂತನವಾಗಿ ಆರಂಭಿಸಿರುವ ಶ್ರೀ ಚೌಡೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಹಕಾರ ತತ್ವಗಳಿಗೆ ಹಾಗೂ ನಿಯಮಗಳಿಗೆ ಬದ್ದವಾಗಿ ಸದಸ್ಯರ ಶ್ರೇಯೋಭಿವೃದ್ದಿಗೆ ನೆರವಾಗಬೇಕಿದೆ ಎಂದು ಹಾರೈಸಿದರು.
ತೊಗಟವೀರ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್ ಮಾತನಾಡಿ, ಸೊಸೈಟಿಯು ನೇಕಾರ ಸಮುದಾಯಕ್ಕೆ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ. ಸೊಸೈಟಿಯ ಆಶೋತ್ತರಗಳಿಗೆ ಸದಸ್ಯರು ಸ್ಪಂಧಿಸಿ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದರು.
ಶ್ರೀ ಚೌಡೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುಷ್ಪಾಂಡಜ ಮಹರ್ಷಿ ತೊಗಟವೀರ ಕುಲಗುರು ಪೀಠ ಟ್ರಸ್ಟ್ ಅಧ್ಯಕ್ಷ ಎಸ್.ಹರೀಶ್, ಮಾಜಿ ಅದ್ಯಕ್ಷ ಸಿ.ಅಶ್ವತ್ಥನಾರಾಯಣ್, ತೊಗಟವೀರ ಕ್ಷತ್ರಿಯ ಸಂಘದ ತಾಲೂಕು ಅಧ್ಯಕ್ಷ ಟಿ.ಎನ್.ತಿಮ್ಮರಾಜು ಸೂಸೈಟಿಯ ಆಡಳಿತ ಮಂಡಲಿಯ ಅಧ್ಯಕ್ಷ ಜಿ.ವಿಜಯಕುಮಾರ್, ಉಪಾಧ್ಯಕ್ಷ ಆರ್.ಮೋಹನ್ ಕುಮಾರ್ ನಿರ್ದೇಶಕರಾದ ಅಚ್ಚಪ್ಪ ನಾಗರಾಜ್, ಎನ್.ವೆಂಕಟರಮಣ, ಕೆ.ಆರ್.ಶಿವಪ್ಪ, ಎಂ.ಚಂದ್ರಮ್ಮ, ಎನ್.ಕೃಷ್ಣಪ್ಪ, ನಾಗರತ್ನಮ್ಮ, ಬಿ.ಎಂ.ಗಣೇಶ್ ಮೂರ್ತಿ, ಮುನಿ ವೆಂಕಟಪ್ಪ, ಎಸ್.ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಹಾಜರಿದ್ದರು.
