ದೊಡ್ಡಬಳ್ಳಾಪುರ : ಮೆಣಸಿ ಗೇಟ್ ಬಳಿ ಸರ್ವಿಸ್ ರಸ್ತೆ ಇಲ್ಲದೆ, ನೇರವಾಗಿ ಹೆದ್ದಾರಿಗೆ ಬಂದ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ ಇಂದು ಬೆಳೆಗ್ಗೆ ಘಟನೆ ನಡೆದಿದ್ದು, ಘಟನೆಯಲ್ಲಿ ಹೆಸರಘಟ್ಟ ಮೂಲದ ಕನ್ನಯ್ಯ (62) ಸಾವನ್ನಪ್ಪಿದ್ದಾರೆ, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೆಣಸಿ ಗೇಟ್ ಬಳಿ ಉಪನಗರ ಹೊರವರ್ತುಲ ರಸ್ತೆ (STRR) ಹಾದು ಹೋಗಿದೆ, ಮೃತ ಕನ್ನಯ್ಯ ಮೆಣಸಿ ಗೇಟ್ ಬಳಿ ಹೆದ್ದಾರಿ ಪ್ರವೇಶಿಸುವಾಗ ದಾಬಸ್ ಪೇಟೆ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ, ಅಪಘಾತದಲ್ಲಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು
ಇನ್ನು ಈ ಕುರಿತು ಕೆಸ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ ಮೆಣಸಿ ಗೇಟ್ ನಿಂದ ಮೆಸ್ಟ್ರು ಮನೆ ಕ್ರಾಸ್ ವರೆಗೂ ಸರ್ವಿಸ್ ರಸ್ತೆ ಇಲ್ಲ, ಸರ್ವಿಸ್ ರಸ್ತೆ ಮಾಡುವಂತೆ ಹಲವು ಬಾರಿ STRR ಗೆ ಮನವಿ ಮಾಡಲಾಗಿದೆ. ಸರ್ವಿಸ್ ರಸ್ತೆಗಾಗಿ ರೈತರಿಂದ ಜಮೀನು ಸ್ವಾಧೀನ ಮಾಡಿಕೊಂಡಿದ್ದರು ಸರ್ವಿಸ್ ರಸ್ತೆ ಮಾಡದ STRR ವಾಹನ ಸವಾರರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ರಾಜಕೀಯ ಪ್ರಮುಖರೋ ಸಿನಿಮಾ ತಾರೆಯರೋ ಅಪಘಾತಕ್ಕೆ ಒಳಗಾದರೆ ಶೀಘ್ರ ಕ್ರಮ ಕೈಗೊಳ್ಳುವ ರಸ್ತೆ ಪ್ರಾಧಿಕಾರ ಹತ್ತಾರು ಸಾರ್ವಜನಿಕರ ಪ್ರಾಣವೇ ಹೋಗುತ್ತಿದ್ದರು ಗಮನ ಹರಿಸದೆ ಇರುವುದು ವಿಪರ್ಯಾಸವೇ ಸರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮೆಣಸಿ ಗೇಟ್ ಬಳಿ ಸರ್ವಿಸ್ ರಸ್ತೆ ಇಲ್ಲದೆ ಇರುವುದರಿಂದ ಗ್ರಾಮಸ್ಥರು ನೇರವಾಗಿ ಹೆದ್ದಾರಿ ಪ್ರವೇಶಿಸುತ್ತಾರೆ, ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಅಮಾಯಕ ಗ್ರಾಮಸ್ಥರ ವಾಹನಗಳಿಗೆ ಡಿಕ್ಕಿ ಹೊಡೆಯುತ್ತದೆ, ವಾರಕ್ಕೊಂದು ಅಪಘಾತಗಳು ಸಾಮಾನ್ಯವಾಗಿದೆ ಇಲ್ಲಿ, ಹೆದ್ದಾರಿ ಪ್ರವೇಶಿಸುವುದಕ್ಕೆ ಹೆದರುವಂತ ಪರಿಸ್ಥಿತಿ ಇದೆ, ಅಪಘಾತಗಳನ್ನ ತಡೆಯುವುದ್ದಾಗಿ ವಾಹನ ಸವಾರರಿಗೆ ಸಲಹೆ ನೀಡುವ ಸರ್ಕಾರಗಳು, ಅದೇ ಸರ್ವಿಸ್ ರಸ್ತೆ ಮಾಡದೆ ಅಪಘಾತಗಳಿಗೆ ಕಾರಣವಾಗಿರುವ STRR ಯಾವುದೇ ಸೂಚನೆಗಳನ್ನ ನೀಡುತ್ತಿಲ್ಲ, ಸರ್ವಿಸ್ ರಸ್ತೆ ಮಾಡದೆ ಇದ್ದರೆ ಪ್ರತಿಭಟನೆ ಮಾಡುವುದ್ದಾಗಿ ಎಚ್ಚರಿಕೆಯನ್ನ ನೀಡಿದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ನೀರಿಕ್ಷಕರಾದ ಸಾದಿಕ್ ಪಾಷಾ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿದ್ದು ತನಿಖೆನಂತರ ಮತ್ತಷ್ಟು ಮಾಹಿತಿ ಹೊರ ಬರಲಿದೆ.
