ದೊಡ್ಡಬಳ್ಳಾಪುರ : ಕುಡಿದ ಮತ್ತಿನಲ್ಲಿ ತಂದೆ- ಮಗನ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನೀಡಿದ್ದು ಕುಡಿದ ಮತ್ತಿನಲ್ಲಿ ಮಗನ ಮೇಲೆ ಡಬ್ಬಲ್ ಬ್ಯಾರೆಲ್ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ಗ್ರಾಮದ ಹರೀಶ (30) ಮೇಲೆ ಗುಂಡಿನ ದಾಳಿ ಮಾಡಲಾಗಿದೆ, ಅಪ್ಪ ಸುರೇಶ (60) ನಿಂದ ಹರೀಶನ ತಲೆಗೆ ಗುಂಡು ಹೊಡೆಯಲಾಗಿದೆ, ಸೆಲ್ಫ್ ಲೋಡ್ ಗನ್ ಶೂಟ್ ಮಾಡಿ ಕೊಲೆ ಯತ್ನ ಮಾಡಲಾಗಿದೆ, ತಲೆಗೆ ತೀರ್ವ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವನಿಸಲಾಗಿದ್ದು , ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಆರೋಪಿ ಸುರೇಶನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಹಿನ್ನಲೆ
ಅಪ್ಪ ಸುರೇಶ ಮದ್ಯ ವ್ಯಸನದಿಂದ ಸಾಕಷ್ಟು ಜಮೀನು ಮಾರಾಟ ಮಾಡಿ ಹಾಳು ಮಾಡಿದ್ದ. ಇದ್ದ ಜಮೀನುಗಳನ್ನು ಮಾರಾಟ ಮಾಡಿ ಪಾನಮತ್ತನಾಗಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಗ ಹರೀಶ ಸಹ ಇತ್ತೀಚಿಗೆ ಮದ್ಯಪಾನ ಮಾಡಲು ಶುರು ಮಾಡಿದ್ದು, ಬೆಳ್ಳ ಬೆಳಿಗ್ಗೆ ಪಾನಮತ್ತ ತಂದೆ ಜೊತೆ ಜಗಳಕ್ಕೆ ಇಳಿದಿದ್ದ ಮಗ ಹರೀಶನ ಮೇಲೆ ತಂದೆ ಸುರೇಶ ಅಲ್ಲೆ ಇದ್ದ ಹಳೆಕಾಲದ ಸೆಲ್ಫ್ ಲೋಡ್ ಗನ್ ನಿಂದ ತಲೆಗೆ ಶೂಟ್ ಮಾಡಿದ್ದಾನೆ.
