ದೊಡ್ಡಬಳ್ಳಾಪುರ : ತಾಲ್ಲೂಕಿನಲ್ಲಿ ಎರಡು- ಮೂರು ಮಡಿವಾಳ ಸಂಘಗಳು ಚಾಲ್ತಿಯಲ್ಲಿ ಇರುವುದು ಗಮನಕ್ಕೆ ಬಂದಿದೆ. ತಾಲ್ಲೂಕಿನ ಮಡಿವಾಳ ಸಂಘದ ಅಧ್ಯಕ್ಷರಾಗಿ ಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕದ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಮಡಿವಾಳ ಮಾಚಿ ದೇವರ ಅಭಿವೃದ್ಧಿ ನಿಗಮ ಮಂಡಳಿ ನೂತನ ಅಧ್ಯಕ್ಷರಾದ ಸಿ.ನಂಜಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಕರ್ನಾಟಕ ರಾಜ್ಯ ಸರ್ಕಾರವು ಮಡಿವಾಳ ಸಮುದಾಯದ ಅಭಿವೃದ್ಧಿಗಾಗಿ ಮಾಚಿ ದೇವರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ನಮ್ಮ ನಿಗಮಕ್ಕೆ 33ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರೆ. ಮಡಿವಾಳ ಸಮುದಾಯದಲ್ಲಿ ಇಂದಿಗೂ ಹಲವಾರು ಕಡುಬಡ ಕುಟುಂಬಗಳಿವೆ ಅಂತಹ ಅರ್ಹರಿಗೆ ಈ ಅನುದಾನ ಸದ್ಭಾಳಕೆ ಆಗಲಿ ಎಂಬುದೇ ನಮ್ಮ ಉದ್ದೇಶ ಎಂದರು.
ದೊಡ್ಡಬಳ್ಳಾಪುರ ಶ್ರೀ ಮಡಿವಾಳರ ಸಂಘ (ರಿ.) ದ ಗೌರವಾಧ್ಯಕ್ಷರಾಗಿ ರಾಜ್ ಕುಮಾರ್, ತಾಲ್ಲೂಕು ಅಧ್ಯಕ್ಷರಾಗಿ ಶಂಕರಪ್ಪ, ಕಾರ್ಯಧ್ಯಕ್ಷ ಈಶ್ವರ್, ಉಪಾಧ್ಯಕ್ಷ ನಟರಾಜ್, ನರಸಿಂಹ ಮೂರ್ತಿ ,ಪ್ರಧಾನ ಕಾರ್ಯದರ್ಶಿ ರಘು ಕುಮಾರ್, ಜಂಟಿ ಕಾರ್ಯದರ್ಶಿ ಆರ್ ಶಿವಕುಮಾರ್ (ವೈರ್ ಶಿವು), ತಾಲೂಕು ಹಿರಿಯ ಸಲಹೆಗಾರ ರಾಜಣ್ಣ ಜಿ.ಸಿ, ಖಜಾಂಜಿ ಬಾಲಾಜಿ, ಸಹ ಕಾರ್ಯದರ್ಶಿ ಆನಂದ್, ಮುತ್ತುರಾಜು, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ, ವೀರಾಂಜನೇಯ, ಸಂಜೀವ್, ರವಿಕುಮಾರ್,ನಿರ್ದೇಶಕರಾಗಿ ದುರ್ಗೇಶ್, ನಾಗರತ್ನಮ್ಮ, ತಿಪ್ಪಕ್ಕ, ಮಂಜುಳಾ ಇವರನ್ನು ಅಧಿಕೃತವಾಗಿ ಸಂಘದ ಪದಾಧಿಕಾರಿಗಳನ್ನಾಗಿ ಘೋಷಣೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಚಿ ದೇವರ ಅಭಿವೃದ್ಧಿ ನಿಗಮ ಮಂಡಳಿಯ ಉಪಾಧ್ಯಕ್ಷ ರಾಜಣ್ಣ, ರಾಜ್ಯ ಪ್ರಮುಖರು, ಮಡಿವಾಳ ಸಮುದಾಯದ ಜಿಲ್ಲೆ ಹಾಗೂ ತಾಲ್ಲೂಕು ಮುಖಂಡರು ಹಾಜರಿದ್ದರು.
