ದೊಡ್ಡಬಳ್ಳಾಪುರ : ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್ ವಿರುದ್ಧ ಸ್ಪರ್ದಿಸುವ ನಮ್ಮ ತೂಬಗೆರೆ ಹೋಬಳಿಯಲ್ಲಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆ ಕಾರಣಕ್ಕಾಗಿ ಕೆಲ ಜೆಡಿಎಸ್ ಪ್ರಮುಖರ ಜೊತೆಗೂಡಿ ಕಾಂಗ್ರೆಸ್ ನಾಯಕರು ಮಾತಾಯಾಚನೆ ಮಾಡುತ್ತಿದ್ದು , ದೊಡ್ಡಬಳ್ಳಾಪುರ ಕಾಂಗ್ರೆಸ್ ನಾಯಕರ ಈ ನೆಡೆಯನ್ನು ಖಂಡಿಸಿ ತೂಬಗೆರೆ ಹೋಬಳಿಯಿಂದ ತಾಲ್ಲೂಕಿನ TAPMCS ಚುನಾವಣೆಗೆ ಸ್ಪರ್ದಿಸಿದ್ದ ರಂಗಪ್ಪ ತಮ್ಮ ನಾಮಪತ್ರ ಹಿಂಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಪ್ರಾಧಿಕಾರದ ಸದಸ್ಯರು ಹಾಗೂ ಮಾಜಿ ಟಿ ಎ ಪಿ ಎಂ ಸಿ ಎಸ್ ನಿರ್ದೇಶಕರಾದ ರಂಗಪ್ಪ ಮಾತನಾಡಿ ತಾಲ್ಲೂಕಿನ ಕಾಂಗ್ರೆಸ್ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಜೆಡಿಎಸ್ ಜೊತೆಗೂಡಿ ಮಾತಾಯಾಚನೆ ಮಾಡುತ್ತಿದ್ದಾರೆ ಆದರೆ ಮುಂದಿನ ಸ್ಥಳೀಯ ಚುನಾವಣೆಗಳಲ್ಲಿ ನಾವು ಜೆಡಿಎಸ್ ವಿರುದ್ಧವೇ ಸ್ಪರ್ದಿಸಿ ಮತ ಕೇಳಬೇಕಾದ ಪರಿಸ್ಥಿತಿ ಎದುರಾಗಿದ್ದು ಸ್ಥಳೀಯ ಮುಖಂಡರ ಗಮನಕ್ಕೆ ಬಾರದೆ ಚರ್ಚಿಸದೆ ಏಕಪಾಕ್ಷಿಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಈ ವಿಚಾರವಾಗಿ ನಮ್ಮ ಹೋಬಳಿ ಕಾಂಗ್ರೆಸ್ ಮುಖಂಡರ ಸಲಹೆ ಮೇರೆಗೆ ಇಂದು ನಾವು ನಮ್ಮ ನಾಮಪತ್ರವನ್ನು ಹಿಂಪಡೆದಿದ್ದೇವೆ ಎಂದು ತಿಳಿಸಿದರು.

ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ಮಾತನಾಡಿ ಸ್ಥಳೀಯವಾಗಿ ನಮ್ಮ ಕಾಂಗ್ರೆಸ್ ಮುಖಂಡರಿಗೆ ದೊಡ್ಡಬಳ್ಳಾಪುರ ಕಾಂಗ್ರೆಸ್ ನಾಯಕರು ಮಾನ್ಯತೆ ನೀಡದೆ ಜೆಡಿಎಸ್ ಒಟ್ಟಿಗೆ ಮತ ಕೇಳುತ್ತಿರುವುದು ಸೂಕ್ತವಲ್ಲ ನಮ್ಮ ಹೋಬಳಿಯಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು, ಈಗಾಗಲೇ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯಲ್ಲಿ ಅನುಭವ ಹೊಂದಿರುವ ರಂಗಪ್ಪ ಅವರಿಗೆ ಅಧ್ಯಕ್ಷ ಸ್ಥಾನ ಕೊಡುವಲ್ಲಿ ವಂಚಿಸಿದ್ದಾರೆ. ಈ ಬಾರಿಯಾದರೂ ನೀಡುತ್ತಾರೆ ಎಂದು ಭಾವಿಸಿದ್ದೆವು ಆದರೆ ಚುನಾವಣೆ ಮೊದಲೇ ಜೆಡಿಎಸ್ ಜೊತೆ ಮತ ಕೇಳುವ ಮೂಲಕ ಅಧ್ಯಕ್ಷ ಸ್ಥಾನ ಕೈ ತಪ್ಪುವ ಸಂದೇಶ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಪ್ರಾಧಿಕಾರದ ಸದಸ್ಯರಾದ ಆರ್ ವಿ ಮಹೇಶ್, ಮುಖಂಡರಾದ ಶ್ರೀಧರ್, ಗೋಪಾಲ್ ನಾಯಕ್, ಮುರಳಿ, ಸವಿತಾ ಆನಂದ್, ಆರ್ ವಿ ಶಿವಕುಮಾರ್ ತೂಬಗೆರೆ ಹೋಬಳಿಯ ಹಲವು ಮುಖಂಡರು ಹಾಜರಿದ್ದರು.
