ದೊಡ್ಡಬಳ್ಳಾಪುರ : 2044 ನೇ ದಿನದ ನಿರಂತರ ಅನ್ನದಾಸೋಹದ ಅಂಗವಾಗಿ ನಿರ್ಗತಿಕರಿಗೆ , ಕಡುಬಡವರಿಗೆ ಆಹಾರ ವಿತರಣೆ ಮತ್ತು ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಸಿಹಿ ವಿತರಣೆ ಮಾಡಲಾಯಿತು.

ನಟ ,ನಿರ್ಮಾಪಕ ಲಕ್ಷ್ಮೀ ಪತಿ ರವರ ಪುತ್ರ ಪ್ರವೀಣ್ ಕುಮಾರ್ ಹಾಗೂ ಶ್ರೀಮತಿ ಪಂಕಜ ಹಾಗೂ ಶಿವರಾಜ್ ( ಮಾಲೀಕರು ನಂದಿನಿ ಹಾಲಿನ ಕೇಂದ್ರ .ಡಿ.ಕ್ರಾಸ್) ರವರ ಪುತ್ರ ರಾಜೇಶ್ ರವರ ಹುಟ್ಟುಹಬ್ಬವನ್ನು ನಿರಂತರ ಅನ್ನದಾಸೋಹ ವೇದಿಕೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು .
ದಾನಿಗಳಾದ ಲಕ್ಷ್ಮೀಪತಿ ಮಾತನಾಡಿ ಪ್ರತಿವರ್ಷಕ್ಕಿಂತ್ತಲೂ ಈ ವರ್ಷ ನನ್ನ ಮಗನ ಹುಟ್ಟುಹಬ್ಬದ ಆಚರಣೆ ವಿಶೇಷವಾಗಿದೆ . ಇದು ನೂರಾರು ಜನರಿಗೆ ಆಹಾರ ನೀಡಿರುವ ಸಂತೃಪ್ತ ಭಾವನೆ ನನಗೆ ಸಿಕ್ಕಿದೆ ಅಲ್ಲದೇ ಪುಟಾಣಿ ಶಾಲಾ ಮಕ್ಕಳಿಗೆ ಅವಶ್ಯಕವಿರುವ ಅಗತ್ಯ ಕಲಿಕಾಪರಿಕರಗಳನ್ನು ನೀಡಿರುವುದು ಮತ್ತಷ್ಟು ಸಂತಸ ತಂದಿದೆ ಎಂದರು .

ನಿರಂತರ ಅನ್ನದಾಸೋಹ ಸಮಿತಿಯ ತಮ್ಮ ವಿಶೇಷದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಮನವಿ ಮಾಡಿದರು .

ಈ ಸಂದರ್ಭದಲ್ಲಿ ದಾನಿಗಳಾದ ಚಂದ್ರಪ್ಪ ರವರು ( ಮಾಲೀಕರು ನಂದಿನಿ ಹಾಲಿನ ಕೇಂದ್ರ ದರ್ಗಾಜೋಗಿಹಳ್ಳಿ) ,ಸೆಲ್ವಂ , ಕೆಂಪರಾಜು ಸೇರಿದಂತೆ ಹಲವಾರು ಹಾಜರಿದ್ದರು
