ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಂಗಸ್ವಾಮಯ್ಯ ರವರಿಗೆ ವಾಲ್ಮೀಕಿ ಸಮುದಾಯ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಹೌದು 1996 ರಲ್ಲಿ ಪೋಲೀಸ್ ಇಲಾಖೆಗೆ ಸೇರ್ಪಡೆ ಆದರು. ತಲಗಟ್ಟಪುರ, ಅನುಗೊಂಡನಹಳ್ಳಿ, ರಾಜಾನುಗುಂಟೆ, ದೊಡ್ಡಬೆಳವಂಗಲ, ದೊಡ್ಡಬಳ್ಳಾಪುರ ನಗರ, ಪ್ರಸ್ತುತ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಎಎಸ್ ಐ ಆಗಿ ಸೇವೆ ಸಲ್ಲಿಸುತ್ತಿರುವ ಇವರು ಪೋಲೀಸ್ ಠಾಣೆಗೆ ಯಾರೆ ಬರಲಿ ಇಬ್ಬರನ್ನು ಕೂರಿಸಿ ಇಬ್ಬರಿಗೂ ಸಮಾಧಾನ ಆಗುವಂತೆ ನ್ಯಾಯ ಮಾಡುವುದರಲ್ಲಿ ಪರಿಣಿತರು. ಸಾಮಾನ್ಯವಾಗಿ ಪೋಲೀಸ್ ಠಾಣೆಯಲ್ಲಿ ದೂರು ನೀಡಿದಾಗ, ಇಬ್ಬರಿಗೆ ಬೇಸರ ಆಗಿ ಮತ್ತೊಬ್ಬರು ಖುಷಿಯಾಗುವುದು ಸಾಮಾನ್ಯ. ಆದರೆ ಇವರ ಬಳಿ ಹೋದರೆ ಇಬ್ಬರೂ ಸಮಾಧಾನವಾಗಿ ಪೋಲೀಸ್ ಠಾಣೆಯಿಂದ ಹೊರ ಬರುವುದು ಇವರ ವಿಶೇಷ
ಹಿಂದುಳಿದ, ಶೋಷಿತ ವರ್ಗದ ಜನರನ್ನು ಕಂಡರೆ ಬಹಳ ಪ್ರೀತಿ. ಕೆಳ ವರ್ಗದ ಜನರು ಯಾರೇ ಬಂದರು ಅವರ ಸಮಸ್ಯೆಯನ್ನು ಪೋಲೀಸ್ ಠಾಣೆಯಲ್ಲಿಯೇ ಬಗೆ ಹರಿಸಿ ಕೋರ್ಟ್ ಕಚೇರಿ ಅಲೆಯುವದನ್ನು ತಪ್ಪಿಸುವಲ್ಲಿ ಇವರ ಪಾತ್ರ ಬಹಳ ಮುಖ್ಯ. ಇವರ ದಕ್ಷತೆಯಿಂದೆ ಜನರಿಗೆ ಬಹಳ ನ್ಯಾಯ ದೊರೆತ ಕಾರಣ ಜನರಿಗೆ ಕಾನೂನಿನ ಮೇಲೆ ಮತ್ತಷ್ಟು ಗೌರವ ಹೆಚ್ಚಾಗುವುದರ ಜೊತೆಗೆ, ಸಾಕಷ್ಟು ಜನ ಜೀವನ ಶೈಲಿಯನ್ನ ಬದಲಾವಣೆ ಮಾಡಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವುದು ಇವರ ದಕ್ಷತೆಗೆ ಸಾಕ್ಷಿ ಹಾಗಾಗಿ ನಮ್ಮ ವಾಲ್ಮೀಕಿ ಸಮುದಾಯದ ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದೇವೆ ಎಂದು ಕಾರ್ಯಕ್ರಮದ ಆಯೋಜಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಎ ಎಸ್ ಐ ಡಿ.ಎಸ್. ರಂಗಸ್ವಾಮಯ್ಯ ನವರ ಉತ್ತಮ ಸೇವೆ ಸಮಾಜಕ್ಕೆ ಮತ್ತಷ್ಟು ಲಭಿಸಲಿ ಇವರ ಸೇವೆ ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನವಾಗಲಿ, ಇವರಂತೆಯೇ ಅವರು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲಿ ಎಂದು ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದಾರೆ.

