ದೊಡ್ಡಬಳ್ಳಾಪುರ : ಮುಸ್ಲಿಂ ಯೂಥ್ ಅಸೋಸಿಸಿಯೇಷನ್ ಚುನಾವಣೆ ನಡೆದು 3ವರ್ಷ ಕಳೆದಿವೇ ಚುನಾವಣೆ ಇಲ್ಲದೆ ಈಗ ನೇಮಕ ಮಾಡಿರುವ ತಂಡವನ್ನು ವಿಸರ್ಜಿಸಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಚುನಾವಣೆಗೆ ಮುಂದಾಗಬೇಕು ಎಂದು ಮುಸ್ಲಿಂ ಮುಖಂಡ ಬಶೀರ್ ತಿಳಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ನಮ್ಮ ಮುಸ್ಲಿಂ ಯೂಥ್ ಅಸೋಸಿಸಿಯೇಷನ್ ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದು , ಚುನಾವಣೆ ನೆಡೆಸದೆ ಕೆಲ ಪ್ರಮುಖರು ತಮಗೆ ಬೇಕಿರುವ ತಂಡ ಕಟ್ಟಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ , ಕಾರಣ ಕೇಳಿದರೆ ಬೈಲಾದಂತೆ ನೆಡೆದು ಕೊಳ್ಳುತ್ತಿದ್ದೇವೆ ಎಂದು ಹೇಳುತ್ತಾರೆ . ಸಮುದಾಯದ ಹಿತಕ್ಕಾಗಿ ಬೈಲಾದಲ್ಲಿ ತಿದ್ದುಪಡಿ ಮಾಡುವ ಮೂಲಕ ಚುನಾವಣೆಗೆ ಮುಂದಾಗಬೇಕು ಎಂದು ಅಗ್ರಹಿಸಿದರು.
ಕೇವಲ ಎರಡು ಏರಿಯಾಗೇ ಚುನಾವಣೆ ಸೀಮಿತ
ನಗರದ ಬೆಸ್ತರ ಪೇಟೆ ಹಾಗೂ ಚಿಕ್ಕ ಪೇಟೆ ಗಳಿಗೆ ಸೀಮಿತಾ ಮಾಡಿ ಚುನಾವಣೆಗೆ ಸಿದ್ದ ಎನ್ನುತ್ತಾರೆ ಆದರೆ ತಾಲ್ಲೂಕಿನ ಹಲವಾರು ವಾರ್ಡ್ ಹಾಗೂ ಬಾಗಗಳಲ್ಲಿ ಮುಸ್ಲಿಂ ಸಮುದಾಯ ಜೀವನ ಸಾಗಿಸುತ್ತಿದೆ ಪ್ರಮುಖವಾಗಿ ಇಸ್ಲಾಂ ಪುರ, ದರ್ಗಾಜೋಗಹಳ್ಳಿ , ಮುತ್ತೂರು , ಕರೇನಹಳ್ಳಿ, ಪಾಲನ ಜೋಗಿಹಳ್ಳಿ ಸೇರಿದಂತೆ ಎಲ್ಲಾ ಭಾಗಗಳಲ್ಲಿಯೂ ನಮ್ಮವರು ಇದ್ದಾರೆ ಹಾಗಾಗಿ ತಾಲ್ಲೂಕಿನ ಎಲ್ಲಾ ಮುಸ್ಲಿಂ ಸಮುದಾಯ ಭಾಗವಹಿಸುವಂತೆ ಚುನಾವಣೆ ನೆಡೆಸಲಿ ಎಂದು ಮುಖಂಡರು ಒತ್ತಾಯಿಸಿದರು.
ಶಾಂತಿನಗರದ ನಿವಾಸಿ ನೂರ್ ಅಹಮದ್ ಮಾತನಾಡಿ ಕಳೆದ 12 ವರ್ಷಗಳಿಂದ ಚುನಾವಣೆ ನಡೆಸದೆ ಅಧಿಕಾರ ಪಡೆದು ಸಂಘವನ್ನು ನಡೆಸುತ್ತಿರುವ ಪ್ರಮುಖರು ಈವರೆಗೂ ಸಂಘದ ಯಾವುದೇ ಲೆಕ್ಕ ಪತ್ರ ಮಂಡಿಸಿಲ್ಲ, ನಮ್ಮ ಒತ್ತಾಯ ಇಷ್ಟೇ ನಮ್ಮ ಸಮುದಾಯದ ಒಳಿತಿಗಾಗಿ ಮಾಡಿರುವ ಸಂಘದ ಆದಾಯ ಮತ್ತು ಖರ್ಚು,ವೆಚ್ಚಗಳ ಸಂಪೂರ್ಣಮಾಹಿತಿ ಹೊಂದಿರುವ ಲೆಕ್ಕ ಪತ್ರವನ್ನು ಸಮುದಾಯಕ್ಕೆ ನೀಡಲಿ ಎಂದರು.

ವಾಕ್ಫ್ ಬೋರ್ಡ್ ನ ಮಾಜಿ ಸದಸ್ಯ ಶ್ರೀನಗರ ಬಷೀರ್, ಇಸ್ಟಿಕರ್ ಅಹಮದ್, ಇಬ್ರಾಹಿಂ, ವಾಕ್ಫ್ ಸದಸ್ಯ ಅಧಿಲ್ ನಯಾಜ್ ಖಾನ್, ಇನಾಯತ್ ಖಾನ್ ಸೇರಿದಂತೆ ಹಲವು ಮುಸ್ಲಿಂ ಸಮುದಾಯದ ಮುಖಂಡರು ಹಾಜರಿದ್ದರು.

