ದೊಡ್ಡಬಳ್ಳಾಪುರ : ತಾಲ್ಲೂಕಿನ ಕೊಡಿಗೇಹಳ್ಳಿ ವಲಯದ ಚಿಕ್ಕಪೇಟೆಯ ನಿವಾಸಿ ಫಾರೂಕ್ ಫಾಷ ರವರಿಗೆ 20,000/- ರೂಪಾಯಿಗಳ ಸಹಾಯಧನ ಮಂಜೂರು ಮಾಡಿದ್ದು ಇಂದು(ನ. 05) ತಾಲ್ಲೂಕು ಯೋಜನಾಧಿಕಾರಿಗಳಾದ ದಿನೇಶ್ ಸಹಾಯಧನ ಚೆಕ್ ವಿತರಣೆ ಮಾಡಿದರು.
Ad
ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಂಟಲು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಫಾರೂಕ್ ಫಾಷ ರವರಿಗೆ ಸಹಾಯಧನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಸವಿತಾ , ಒಕ್ಕೂಟದ ಪದಾಧಿಕಾರಿಗಳಾದ ಸುಜಾತಾ,ರತ್ನಮ್ಮ,ಸೇವಾಪ್ರತಿನಿಧಿಗಳಾದ ಮಂಜಮ್ಮ,ಶ್ವೇತಾ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು
