ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಸಿದ್ದರಾಮಯ್ಯ ರವರಿಗೆ ತಾಲ್ಲೂಕು ಕುಂಚಿಟಿಗರ ಸಂಘ(ರಿ) ತಾಲ್ಲೂಕು ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಟಿಎಪಿಎಂಸಿಎಸ್ ಚುನಾವಣೆಯನ್ನು ರಾಜಕೀಯ ಪಕ್ಷಗಳ ಮುಖಂಡರು ಈ ಬಾರಿ ಪ್ರತಿಷ್ಠೆಯಾಗಿ ಪರಿಗಣಿಸಿದ್ದರಿಂದ ವಿಧಾನ ಸಭಾ ಚುನಾವಣೆಯಷ್ಟೆ ಜೋರಾಗಿ 13 ಜನ ನಿರ್ದೇಶಕರ ಆಯ್ಕೆಗೆ ಮತದಾನ ನಡೆದಿತ್ತು ಈ ಚುನಾವಣೆಯಲ್ಲಿ ಟಿಎಪಿಎಂಸಿಎಸ್ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಎನ್.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳನ್ನು ತಾಲ್ಲೂಕು ಕುಂಚಿಟಿಗರ ಸಂಘ(ರಿ), ತಾಲ್ಲೂಕು ಕುಂಚಿಟಿಗರ ನೌಕರರ ಸಂಘ ಹಾಗೂ ತಾ॥ ಯುವ ಘಟಕ ಅಭುನಂದನೆ ಸಲ್ಲಿಸಿದೆ.
ತಾಲ್ಲೂಕು ಕುಂಚಿಟಿಗರ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಮಾತನಾಡಿ ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತರು ಹಾಗೂ ಟಿ.ಎ.ಪಿ.ಎಂ.ಸಿ.ಎಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಮ್ಮ ಸಮುದಾಯದ ಡಿ.ಸಿದ್ದರಾಮಯ್ಯ ಜಯಗಳಿಸುವ ಮೂಲಕ ಸಮುದಾಯದ ಹಿರಿಮೆ ಹೆಚ್ಚಿಸಿದ್ದಾರೆ.

ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಸಿದ್ದರಾಮಯ್ಯ ಅವರು ಸಂಘದಲ್ಲಿ ಈ ಹಿಂದೆ ಉತ್ತಮ ಆಡಳಿತ ನೀಡಿದ್ದು ಎರಡನೇ ಬಾರಿಗೂ ಜನರು ಆರ್ಶೀವಾದ ಮಾಡಿದ್ದಾರೆ ಅವರ ವಿಶೇಷ ಕಾರ್ಯಕ್ರಮಗಳ ಮೂಲಕ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಗರಿಮೆ ಮತ್ತಷ್ಟು ಹೆಚ್ಚಾಗಲಿ ಎಂದರು.

