ದೊಡ್ಡಬಳ್ಳಾಪುರ : ತಾಲೂಕಿನ ಹೊಸಹಳ್ಳಿ ತಾಂಡದ ಯಲ್ಲಪ್ಪ ಅಪ್ಪಟ ರೈತ, ಇವರ ಕುಟುಂಬದಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳಿಗೆ ವಿಶೇಷ ಗೌರವ, ತಲೆತಲಾಂತರಗಳಿಂದ ಎತ್ತುಗಳನ್ನು ಸಾಕುತ್ತಿದ್ದಾರೆ. ಇವತ್ತಿಗೂ ನಾಲ್ಕು ಎತ್ತುಗಳ ಜೋಡಿ ಮನೆಯಲ್ಲಿವೆ. ಎತ್ತುಗಳ ಮೇಲಿನ ಅಭಿಮಾನಕ್ಕಾಗಿ ಅವರು ತಮ್ಮ ಮಗನ ಮದುವೆಯಲ್ಲಿ ಎತ್ತಿನ ಜೋಡಿ ಕಟ್ಟಿದ್ದಾರೆ.

ನಗರದ ಶಾಂತಿನಗರದಲ್ಲಿರುವ ಮಾಂಗಲ್ಯ ಮಂಟಪದಲ್ಲಿ ತಮ್ಮ ಮಗ ಮನೋಜ್ ಮದುವೆಯನ್ನ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಮದುವೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಕಲ್ಯಾಣ ಮಂಟಪದ ಹೊರಗಿನ ಮಂಟಪದಲ್ಲಿರುವ ಸಿಂಗಾರಗೊಂಡ ಎತ್ತುಗಳ ಜೋಡಿ. ತಮ್ಮ ಮಗನ ಮದುವೆಯಲ್ಲಿ ಎತ್ತುಗಳನ್ನು ಕಟ್ಟಲೇ ಬೇಕೆಂದ್ದು ಮೊದಲೇ ನಿರ್ಧಾರ ಮಾಡಿದ್ದರು, ಎತ್ತುಗಳ ಪ್ರದರ್ಶನಕ್ಕೆ ಅವಕಾಶ ನೀಡಿದ ನಂತರವೇ ಅವರು ಈ ಕಲ್ಯಾಣ ಮಂಟಪದಲ್ಲಿ ಮಗನ ಮದುವೆ ಮಾಡಲು ನಿರ್ಧಾರಿಸಿದ್ದು.
ಎತ್ತಿನ ಮೇಲಿನ ಅಭಿಮಾನಕ್ಕೆ ರೈತ ತನ್ನ ಮಗನ ಮದುವೆಯಲ್ಲಿ ಎತ್ತಿನ ಜೋಡಿ ಕಟ್ಟಿದ್ದಾರೆ, ಕಲ್ಯಾಣ ಮಂಟಪದಲ್ಲಿ ವಧು-ವರನ ಜೋಡಿಗಿಂತ ಎತ್ತಿನ ಜೋಡಿಯೇ ಜನರ ಗಮನ ಸೆಳೆಯುತ್ತಿದೆ

ಇದೇ ವೇಳೆ ರೈತ ಯಲಪ್ಪ ಮಾತನಾಡಿ ಅವರು, ಎತ್ತುಗಳಿಂದ ನಾವು ಇವತ್ತು ಉತ್ತಮ ಸ್ಥಿತಿಯಲ್ಲಿದ್ದೇವೆ, ಸಂಪತ್ತು ಆಸ್ತಿ ಮಾಡಿದ್ದೇವೆ, ಅವುಗಳನ್ನು ಬಿಟ್ಟು ಯಾವುದೇ ಕಾರ್ಯಕ್ರಮಗಳನ್ನು ನಾವು ಮಾಡುವುದಿಲ್ಲ, ಮಗನ ಮದುವೆಯಲ್ಲಿ ಎತ್ತುಗಳ ಜೋಡಿಯನ್ನ ಕಟ್ಟ ಬೇಕೆಂದ್ದು ಮೊದಲೇ ನಿರ್ಧಾರ ಮಾಡಿದೆ, ಅದಕ್ಕಾಗಿ ಒಂದು ವಾರದಿಂದ ಸಿದ್ಧತೆ ಮಾಡಿಕೊಂಡಿದೆ, ಮದುವೆ ಮಂಟಪದಲ್ಲಿ ಎತ್ತಿನ ಜೋಡಿ ಎಲ್ಲರ ಗಮನ ಸೆಳೆಯುತ್ತಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು.
ಮದುವೆ ಮನೆಯ ಅತಿಥಿಗಳಾದ ಕುಮಾರ್ ನಾಯ್ಕ್ ಮಾತನಾಡಿ, ಯಲ್ಲಪ್ಪನವರ ಕುಟುಂಬದಲ್ಲಿ 10ಕ್ಕೂ ಹೆಚ್ಚು ಎತ್ತಿನ ಜೋಡಿ ಇರುತ್ತಿದ್ದವು, ಘಾಟಿ ದನಗಳ ಜಾತ್ರೆಯಲ್ಲಿಯೂ ಎತ್ತುಗಳನ್ನ ಕಟ್ಟುತ್ತಿದ್ದರು, ಮೊದಲು ಎತ್ತುಗಳ ಅರ್ಶಿವಾದ ಪಡೆದು ನಂತರ ವಧು ವರರಿಗೆ ಅರ್ಶಿವಾದ ಮಾಡಲಿ ಎನ್ನುವ ಕಾರಣಕ್ಕೆ ಎತ್ತಿನ ಜೋಡಿ ಕಟ್ಟಿದ್ದಾರೆ, ಮದುವೆ ಮನೆಯಲ್ಲಿ ಎತ್ತಿನ ಜೋಡಿಗಳ ಸಂಭ್ರಮ ಜೋರಾಗಿದೆ, ನಾವು ರೈತರ ಮಕ್ಕಳೆಂದ್ದು ಸಾಬೀತು ಮಾಡಿದ್ದಾರೆ ಎಂದರು.

ಅತಿಥಿಗಳಾದ ಹರೀಶ್ ಮಾತನಾಡಿ, ಮದುವೆ ಹೋಗುವರು ಪಾರ್ಲರ್ ನತ್ತ ಮುಖ ಮಾಡುತ್ತಾರೆ. ರೈತರ ಮಕ್ಕಳಾದ ನಾವು ಎತ್ತುಗಳ ಸಿಂಗಾರಕ್ಕೆ ಮೊದಲ ಆದತ್ಯೆ ನೀಡುತ್ತೇವೆ, ಮದುವೆ ಹೆಣ್ಣಿನಂತೆ ಎತ್ತುಗಳನ್ನು ಹೂವಿನಿಂದ ಸಿಂಗಾರ ಮಾಡಿದ್ದೇವೆ. ಮುಂದೆ ಪ್ರತಿ ಮದುವೆಯಲ್ಲೂ ಎತ್ತುಗಳ ಪ್ರದರ್ಶನವಾಗ ಬೇಕು, ಹಳ್ಳಿಕಾರ್ ತಳಿ ಉಳಿಯ ಬೇಕು, ಬೆಳೆಯ ಬೇಕು ಎಂದರು.
