ದೊಡ್ಡಬಳ್ಳಾಪುರ : KIDB ರೈತರ ಭೂಮಿಗೆ ಅವೈಜ್ಞಾನಿಕ ಬೆಲೆ ನಿಗದಿ ಪಡಿಸಿದ್ದು ರೈತರ ಕೂಗು ಅಧಿಕಾರಿಗಳಿಗೆ ಕೇಳದಂತಾಗಿದೆ ರೈತರ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ನೆಡೆ ಸರಿಯಿಲ್ಲ ಎಂದು ಇಂದು ನೆಡೆದ ಪತ್ರಿಕಾಗೋಷ್ಠಿಯಲ್ಲಿ ಕೊನಘಟ್ಟ ಗ್ರಾಮದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮದ ರೈತರಿಂದ KIDB ಭೂಸ್ವಾಧೀನ ಕುರಿತಾಗಿ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು.

ಈ ಸಂದರ್ಭದಲ್ಲಿ ಸ್ಥಳೀಯ ರೈತ ರಾಮೇಗೌಡ ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಉಳುಮೆ ಮಾಡುವ ಭೂಮಿಯನ್ನು ರೈತರಿಂದ ಪಡೆದುಕೊಳ್ಳಲಾಗುತ್ತಿದೆ ಆದರೆ ಆ ಭೂಮಿಗೆ ಸರಿಯಾದ ರೀತಿಯಲ್ಲಿ ಬೆಲೆ ನಿಗದಿ ಮಾಡುವಲ್ಲಿ KIDB ಸೋತಿದೆ ..ರೈತರ ಮನವಿ ಕೇಳಲು ಸಿದ್ದವಿಲ್ಲದ KIDBಗೆ ಭೂಮಿ ನೀಡಲು ರೈತರು ಸಿದ್ಧರಿಲ್ಲ ಅಧಿಕಾರಿಗಳು ಇನ್ನಾದರೂ ಎಚ್ಚೆದ್ದು ರೈತ ಕುಟುಂಬಗಳ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದರು
ರೈತ ಮುಖಂಡರಾದ ಆನಂದ್ ಮಾತನಾಡಿ KIDB ಯಾವ ಆಧಾರದ ಮೇಲೆ ಭೂಮಿ ಬೆಲೆ ನಿಗದಿ ಮಾಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ರೈತರ ಮನಸ್ಸನ್ನು ಓಲೈಸಲು ಎರಡು ಬಾರಿ ಸಭೆ ಕರೆದಿದ್ದು ರೈತರು ಭೂಮಿ ಕೊಡಲು ಇಚ್ಛೆ ಇಲ್ಲದೆ ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ ಆದರೂ ಏಕಾಏಕಿ ಅವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಸುತ್ತೋಲೆ ನೀಡಿರುವುದು ಸರಿಯಲ್ಲ ಮೊದಲು ರೈತರೊಂದಿಗೆ ಸಂವಾದ ನಡೆಸಿ ವೈಜ್ಞಾನಿಕ ಬೆಲೆ ನಿಗದಿ ಪಡಿಸಲು ಕ್ರಮ ಕೈಗೊಳ್ಳಲಿ ಇಲ್ಲದಿದ್ದಲ್ಲಿ ರೈತರು ಹೋರಾಟಕ್ಕೂ ಸಿದ್ದ ಎಂದು ತಿಳಿಸಿದರು

ಸ್ಥಳೀಯ ರೈತ ಮುಖಂಡರಾದ ರಾಮಾಂಜಿನಪ್ಪ ಮಾತನಾಡಿ ಕೊನಘಟ್ಟ ಗ್ರಾಮವು ತರಕಾರಿ ಉತ್ಪಾದನೆ ಮಾಡುವಲ್ಲಿ ಹೆಸರುವಾಸಿಯಾಗಿದ್ದು ಇಂದು KIDB ಯಿಂದಾಗಿ ರೈತರು ತಮ್ಮ ಜಮೀನುಗಳನ್ನು ಕೆಳೆದು ಕೊಳ್ಳುವ ಪರಿಸ್ಥಿತಿ ಎದುರಾಗಿದೆ ಸರಿಯಾದ ಬೆಲೆ ಸಿಗದೆ ನಾವು ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಭೂಮಿಯನ್ನೇ ಆಧರಿಸಿ ಜೀವನ ಸಾಗಿಸುತ್ತಿರುವ ರೈತ ಸರಿಯಾದ ಬೆಲೆ ಸಿಗದ ಮೇಲೆ ಯಾರ ಬಳಿ ಕೇಳಬೇಕು ಅಧಿಕಾರಿಗಳು ರೈತರ ಕಷ್ಟಗಳನ್ನು ಕೇಳಬೇಕಿದೆ KIDB ಗೆ ತಿಳಿಹೇಳಬೇಕಿದೆ ಆದರೆ ಇಲ್ಲಿ ಅಧಿಕಾರಿಗಳೇ ರೈತರ ಪರ ಇಲ್ಲದಿರುವುದು ವಿಪರ್ಯಾಸ ರೈತರ ಭೂಮಿಗೆ ಸರಿಯಾದ ಬೆಲೆ ಸಿಗದ ಪಕ್ಷದಲ್ಲಿ ಹೋರಾಟ ಖಂಡಿತ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕೊನಘಟ್ಟ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು
