ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯ ನಿವಾಸಿ ರಾಮಕೃಷ್ಣಪ್ಪ, ಅವರಿಗೆ ವೇಣುಗೋಪಾಲ್ ಎಂಬ ಮಗನಿದ್ದ, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ, ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂದು 15 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ, ಮನೆ ಬಿಟ್ಟು ಹೋದಾಗ 22 ವರ್ಷಯ ಯುವಕ ವೇಣುಗೋಪಾಲ್, ಕಳೆದೆ 15 ವರ್ಷಗಳಿಂದ ಇಂದಲ್ಲಾ ನಾಳೆ ಮನೆಗೆ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿ ರಾಮಕೃಷ್ಣಪ್ಪ ಕಾಯುತ್ತಿದ್ದರು.
ರಾಮಕೃಷ್ಣಪ್ಪನವರ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ, ಹಾಸಿಗೆಯಲ್ಲಿ ಮಗ ವೇಣುಗೋಪಾಲನನ್ನ ಕನವರಿಸುತ್ತಿದ್ದಾರೆ, ಸಾಯುವ ಕೊನೆ ಗಳಿಗೆಯಲ್ಲೂ ಮಗನ ಮುಖ ನೋಡ ಬೇಕೆಂಬುದು ಅವರ ಆಸೆ, ಆದರೆ ಅವನು ಎಲ್ಲಿದ್ದಾನೆಂಬ ಸುಳಿವಿಲ್ಲ, ವೇಣುಗೋಪಾಲ್ ತಾಯಿ ರತ್ನಮ್ಮ ಮತ್ತು ಅಕ್ಕ ಸವಿತಾ ಮನೆಗೆ ಬರುವಂತೆ ಅಂಗಲಾಚಿ ಬೇಡಿ ಕೊಳ್ಳುತ್ತಿದ್ದಾರೆ, ವೇಣುಗೋಪಾಲ್ ಎಲ್ಲೇ ಇದ್ರು ಹೇಗೆ ಇದ್ರು ಬೇಗ ಆಸ್ಪತ್ರೆಗೆ ಬಾ ಎಂದು ಕಣ್ಣೀರಿಟ್ಟು ಕರೆಯುತ್ತಿದ್ದಾರೆ, ಒಮ್ಮೇ ಮಗನ ಮುಖ ನೋಡಿದ್ರೆ ರಾಮಕೃಷ್ಣಪ್ಪನವರು ನೆಮ್ಮದಿಯಿಂದ ಕೊನೆಯುಸಿರೆಳೆತ್ತಾರೆಂಬ ಸಣ್ಣ ಆಸೆ ಕುಟುಂಬಸ್ಥರಿಗೆ.

ಮನೆ ಬಿಟ್ಟು ಹೋದ ಮಗನ ಕನವರಿಕೆಯಲ್ಲಿ ತಂದೆ ಜೀವ ಹಿಡಿದುಕೊಂಡಿದ್ದಾರೆ, ಮಗನ ಮುಖ ನೋಡಿದ್ರೆ ಸಾಯುವ ಜೀವಕ್ಕೆ ನೆಮ್ಮದಿ ಸಿಗುತ್ತೆ ಎಂಬುದು ಕುಟುಂಬಸ್ಥರ ಆಸೆ,
ಅನಾರೋಗ್ಯದಿಂದ ಬಳಲುತ್ತಿರುವ ಸುಮಾರು 70 ವರ್ಷದ ರಾಮಕೃಷ್ಣಪ್ಪ ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಸ್ಥಿತಿ ಚಿಂತಾಜನಕವಾಗಿದ್ದು ಸಾಯುವ ಕೊನೆಯ ಕ್ಷಣದಲ್ಲಿದ್ದಾರೆ, ಅರೆಪ್ರಜ್ಞಾ ಸ್ಥಿತಿಯಲ್ಲಿರುವ ಅವರು ಮಗನ ಹೆಸರು ಕರೆದ್ದಾಗ ಮಾತ್ರ ಸ್ಪಂದನೆ ಮಾಡುತ್ತಿದ್ದಾರೆ, ಮನೆ ಬಿಟ್ಟು ಹೋದ ಮಗನ ಕನವರಿಕೆಯಲ್ಲಿ ಕೊನೆಯುಸಿರನ್ನ ಹಿಡಿದಿದ್ದಾರೆ.
ವೇಣುಗೋಪಾಲ್ ಬಗ್ಗೆ ಮಾಹಿತಿ ಇದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಬೇಡಿಕೊಂಡಿದ್ದಾರೆ. ರವಿರಾಜ್ -9113011791 ರಮೇಶ್ -7760874762 ಸುರೇಶ್ – 9945845483
