ಶಾಸಕರಿಗೆ ನಿಗಮ ಮಂಡಳಿ ಪಟ್ಟ : ಪಟ್ಟಿಯಲ್ಲಿ ಮಸ್ಕಿ ಶಾಸಕರ ಹೆಸರುಂಟು ನಿಗಮ ಮಂಡಳಿ ಇಲ್ಲ

Spread the love

ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವ ಮೊದಲ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

 

ರಾಜ್ಯದ ಒಟ್ಟು 36 ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನ ಆಯ್ಕೆ ಮಾಡಲಾಗಿದೆ.

ನಿಗಮ ಮಂಡಳಿ ಪಟ್ಟ 36 ಶಾಸಕರಿಗೆ ಸಿಕ್ಕಿದ್ದು ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಶರತ್ ಬಚ್ಚೇಗೌಡ ರವರಿಗೆ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಮಂಡಳಿ ನೀಡಲಾಗಿದೆ .

 

ಆದರೆ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಶಾಸಕರ ಹೆಸರಿದ್ದು ಮಂಡಳಿ ಹೆಸರು ಸೂಚಿಸಿಲ್ಲ .ಯಾವ ಮಂಡಳಿ ಅಥವಾ ಯಾವ ಕಾರಣಕ್ಕೆ ಮಂಡಳಿಯ ಹೆಸರು ಸೂಚಿಸಲಾಗಿಲ್ಲ ಎಂಬ ಪ್ರಶ್ನೆಗೆ ರಾಜ್ಯ ಸರ್ಕಾರವೇ ಉತ್ತರಿಸಬೇಕಿದೆ ..

Leave a Reply

Your email address will not be published. Required fields are marked *