
ದೊಡ್ಡಬಳ್ಳಾಪುರ : ಕಳೆದ ರಾತ್ರಿ ತೇರಿನ ಬೀದಿಯಲ್ಲಿರುವ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳವು ಯತ್ನ ನಡೆದಿದ್ದು, ಪಕ್ಕದ ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ದೇವರ ಎರಡು ಬೆಳ್ಳಿ ಕಿರೀಟ,ಒಂದು ಚಿನ್ನದ ತಾಳಿಯನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ
ದೊಡ್ಡಬಳ್ಳಾಪುರ ನಗರದ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ ನಡೆದಿದ್ದು, ದೇವಸ್ಥಾನದ ಹುಂಡಿಗೆ ಭಾರೀ ಹಣವೇ ಬಂದಿದೆ ಎಂದು ಲೆಕ್ಕಾಚಾರ ಹಾಕಿದ್ದ ಕಳ್ಳರು, ನಿನ್ನೆ ರಾತ್ರಿ ಹುಂಡಿಗೆ ಕಳವು ಮಾಡಲು ವಿಫಲ ಯತ್ನ ಮಾಡಿದ್ದಾರೆ, ಬರಿಗೈಯಲ್ಲಿ ವಾಪಸ್ ಹೋಗದ ಕಳ್ಳರು ಪಕ್ಕದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ದೇವರ ಎರಡು ಬೆಳ್ಳಿ ಕಿರೀಟ, ಒಂದು ಚಿನ್ನ ತಾಳಿ ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳಕ್ಕೆ ಮುಜರಾಯಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಮತ್ತು ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.