
ದೊಡ್ಡಬಳ್ಳಾಪುರ : ಕಾರ್ಮಿಕರ ಹಿತ ರಕ್ಷಣೆ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ವಲಯಗಳ ಅಭಿವೃದ್ಧಿಗಾಗಿ ಸರ್ಕಾರಗಳು ಮುಕ್ತ ಮನಸ್ಸಿನಿಂದ ಶ್ರಮಿಸಬೇಕಿದೆ ಎಂದು ಕರ್ನಾಟಕ ಜನತಾ ಸಮಿತಿಯ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಎಲ್. ಎಸ್. ಆಶಾಗೌಡ ತಿಳಿಸಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೇಲ್ನೋಟಕ್ಕೆ ಹಲವು ಯೋಜನೆಗಳ ರೂಪಿಸುವ ಮೂಲಕ ಕಾರ್ಮಿಕರ ಅಭಿವೃದ್ಧಿಯಾಗಿದೆ ಎಂದರೇ ಅಂದು ಸತ್ಯಕ್ಕೆ ದೂರವಾದ ಮಾತು. ಕೇವಲ ಯೋಜನೆ ರೂಪಿಸುವುದರಿಂದ ಕಾರ್ಮಿಕರ ಅಭಿವೃದ್ಧಿ ಸಾಧ್ಯವಿಲ್ಲ ಆ ಯೋಜನೆ ಫಲವು ಪ್ರತಿ ಕಾರ್ಮಿಕರಿಗೆ ತಲುಪಿದರೆ ಮಾತ್ರ ಕಾರ್ಮಿಕರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಇನ್ನು ಸರ್ಕಾರದ ಯೋಜನೆಗಳ ಲಾಭ ಪಡೆಯದ ಹಲವಾರು ಕಾರ್ಮಿಕ ಕುಟುಂಬಗಳಿದ್ದು. ಸದರಿ ಕುಟುಂಬಗಳಿಗೆ ಯೋಜನೆಗಳ ಫಲ ದೊರೆಯಬೇಕಿದೆ. ಕಾರ್ಮಿಕರು ದೇಶವನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ, ದೇಶದ ಆರ್ಥಿಕತೆ ಭದ್ರಗೊಳಿಸಲು ಸಹಕರಿಸುತ್ತಾರೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಹೆಚ್ಚಿನ ಯೋಜನೆಗಳನ್ನು ರೂಪಿಸುವ ಮೂಲಕ ಪ್ರತಿ ಕಾರ್ಮಿಕ ಕುಟುಂಬದ ಆರ್ಥಿಕ ಭದ್ರತೆಯನ್ನು ಕಾಪಾಡಬೇಕಿದೆ ಎಂದರು.
ಕಾರ್ಮಿಕರು ನೂರಾರು ವಿಭಾಗಗಳಲ್ಲಿ ತಮ್ಮದೇ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದು ಇಂದಿನ ಕಾರ್ಯಕ್ರಮ ಸಮಾಜದ ಏಳಿಗೆಗಾಗಿ ಶ್ರಮಿಸುವ ಪ್ರತಿ ಕಾರ್ಮಿಕರಿಗೆ ಅರ್ಪಿಸಲಾಗಿದೆ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕರ್ನಾಟಕ ಜನತಾ ಸಮಿತಿ ಸದಾ ಕಾರ್ಮಿಕರ ಬೆಂಬಲವಾಗಿ ನಿಲ್ಲುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ. ಆರ್ . ಸೌಮ್ಯ ರಮೇಶ್, ಯಶೋಧರಾಜಣ್ಣ, ಜೆಡಿಎಸ್ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಜಿ. ಶ್ರೀ ರಾಮಯ್ಯ , ಜೆಡಿಎಸ್ ಘಟಕದ ರಾಜ ಉಪಾಧ್ಯಕ್ಷ ಲಿಂಗಯ್ಯ, ಕರ್ನಾಟಕ ಜನತಾ ಸಮಿತಿ ಸಂಸ್ಥಾಪಾಧ್ಯಕ್ಷ. ವಿ.ವೆಂಕಟ್ ರೆಡ್ಡಿ . ಕೆ ಜೆ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜರೆಡ್ಡಿ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ಗೆ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ದೊಡ್ಡಬಳ್ಳಾಪುರ ನಗರಸಭೆ ಮಾಜಿ ಅಧ್ಯಕ್ಷ ತಾ.ನಾ. ಪ್ರಭುದೇವ್, ಕಾರ್ಮಿಕರ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನಿಪಾಪಣ್ಣ. ರಾಜ್ಯ ಕಾರ್ಯದರ್ಶಿ ಡಾ.ವಿಜಯ್ ಕುಮಾರ್. ಕೆ ಜೆ ಎಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ರುದ್ರೇಶ್. ದೊಡ್ಡಬಳ್ಳಾಪುರ ತಾಲೂಕು ಕಲಾಘಟದ ಅಧ್ಯಕ್ಷ. ಮುನಿರತ್ನ . ಕೆ ಜೆ ಎಸ್ ತಾಲೂಕು ಕಾರ್ಮಿಕರ ಘಟಕ ಅಧ್ಯಕ್ಷ . ಸ್ವರ್ಣಮ್ಮ. ವಿ ಸುನೀತ. ಕೆ ಜೆ ಎಸ್ ಗೌರವಾಧ್ಯಕ್ಷೆ ಗೌರಮ್ಮ. ಕೆಜೆಎಸ್ ಸಂಘಟನಾ ಕಾರ್ಯದರ್ಶಿ. ಲಕ್ಷ್ಮೀ. ಸಹ ಕಾರ್ಯದರ್ಶಿ. ನೇತ್ರಾ. ಗುಲ್ಬರ್ಗ ಕೆ ಜೆ ಎಸ್ ಜಿಲ್ಲಾಧ್ಯಕ್ಷ . ಅನುರಾಧ ಗೌಡ. ಕೆ ಜೆ ಎಸ್ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಮಾರುತಿ . ಜೆಡಿಎಸ್ ಹಿರಿಯ ಮುಖಂಡರಾದ ಹನುಮಂತೇಗೌಡ, ದೇವರಾಜ್ ಸೇರಿದಂತೆ ಕರ್ನಾಟಕ ಜನತಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.