
ದೊಡ್ಡಬಳ್ಳಾಪುರ ಆಗಸ್ಟ್ 18 ( ವಿಜಯಮಿತ್ರ) : ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಸ್ಥಾಪಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ(47/74/75) ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಅತಿ ವೇಗವಾಗಿ ಬೆಳೆಯುತ್ತಿದ್ದು . ಪ್ರತಿ ತಾಲೂಕಿನಲ್ಲೂ ಸಂಘಟನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಚಾಲಕರು ಕರ್ತವ್ಯ ನಿರ್ವಹಿಸಬೇಕಿದೆ. ಆದರೆ ರಾಜ್ಯ ಸಮಿತಿ ತೀರ್ಮಾನಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಂಗಮಿ ಜಿಲ್ಲಾ ಸಂಚಾಲಕರು ತಮ್ಮ ಕರ್ತವ್ಯ ವನ್ನು ಸರಿಯಾಗಿ ನಿರ್ವಹಿಸದ ಕಾರಣ ಸೂಕ್ತ ವ್ಯಕ್ತಿಯನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಬೇಕೆಂದು ದೊಡ್ಡಬಳ್ಳಾಪುರ ತಾಲ್ಲೂಕು ಸಂಚಾಲಕ ರಾಮಮೂರ್ತಿ (ರಾಮು) ನೆರಳಘಟ್ಟ ತಿಳಿಸಿದರು.
ಆಗಸ್ಟ್ 18ರಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದೊಡ್ಡಬಳ್ಳಾಪುರ ತಾಲೂಕು ಸಂಚಾಲಕ ರಾಮಮೂರ್ತಿ (ರಾಮು)ನೆರಳಘಟ್ಟ ರವರ ನೇತೃತ್ವದಲ್ಲಿ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕುಗಳ ಸರ್ವ ಸದಸ್ಯರ ತುರ್ತು ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಸಮಿತಿಯ ಬೆಂಗಳೂರು ಗ್ರಾಮಾಂತರ ಹಂಗಾಮಿ ಜಿಲ್ಲಾ ಸಂಚಾಲಕರ ಬದಲಾವಣೆ ಕುರಿತು ಚರ್ಚಿಸಲಾಯಿತು.
ಸಭೆಯ ನಂತರ ಮಾತನಾಡಿದ ಅವರು ಜಿಲ್ಲೆಯಾದ್ಯಂತ ದಲಿತರ ಮೇಲೆ ದೌರ್ಜನಗಳು, ದಲಿತರ ಭೂಮಿಯನ್ನು ಕುಸಿತುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದೂ ದಲಿತರ ಶಕ್ತಿಯಾಗಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸದಾ ಹೋರಾಟ ನಡೆಸುತ್ತಿದೆ . ಪ್ರತಿ ತಾಲೂಕಿನಲ್ಲೂ ನಮ್ಮ ಸಂಘಟನೆ ಬೆಳೆಯುತ್ತಿದ್ದು . ಇಂತಹ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದವರು ತಾಲೂಕಿನಲ್ಲಿ ಕಾರ್ಯಕರ್ತರ ಬೆಳವಣಿಗೆಗೆ ಸಹಾಯ ಮಾಡಿಕೊಡಬೇಕಿದೆ ಹಾಗೂ ಸಂಘಟನೆ ಬಲಪಡಿಸುವ ರೀತಿಯಲ್ಲಿ ಶ್ರಮಿಸಬೇಕಿದೆ. ಪ್ರಸ್ತುತ ಹಂಗಾಮಿ ಜಿಲ್ಲಾ ಸಂಚಾಲಕ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನ ಸರ್ವ ಸದಸ್ಯರು ಒಮ್ಮತದಿಂದ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸುವ ಮೂಲಕ ಹಂಗಾಮಿ ಜಿಲ್ಲಾ ಸಂಚಾಲಕರ ಬದಲಾವಣೆ ಮಾಡಬೇಕೆಂದು ಕೋರಿ ರಾಜ್ಯ ಸಮಿತಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಹಂಗಾಮಿ ಜಿಲ್ಲಾ ಸಂಚಾಲಕರು ನಮ್ಮ ಹಿರಿಯರು ಹಾಗೂ ದಲಿತ ಹೋರಾಟಗಾರರು ಅವರ ಕುರಿತು ನಮಗೆ ಹೆಮ್ಮೆ ಇದೆ ಆದರೆ ಜಿಲ್ಲೆಯಲ್ಲಿ ಸದಾ ಚೈತನ್ಯ ಹೊಂದಿರುವ ಕ್ರಿಯಾಶೀಲ ಸಂಚಾಲಕರ ಅವಶ್ಯಕತೆ ಇದೆ. ರಾಜ್ಯ ಸಮಿತಿಯು ಈ ಪರಿಸ್ಥಿತಿಯನ್ನು ಮನಗೊಂಡು ಸೂಕ್ತ ವ್ಯಕ್ತಿಯನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಮಾತನಾಡಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾಮಮೂರ್ತಿ (ರಾಮು) ನೇರಳೆಘಟ್ಟ ಇವರ ನೇತೃತ್ವದಲ್ಲಿ ಸಂಘಟನೆ ಪ್ರಬಲವಾಗಿ ಬೆಳೆಯುತ್ತಿದ್ದು . ಉಳಿದ ದೇವನಹಳ್ಳಿ, ಹೊಸಕೋಟೆ ತಾಲೂಕಿನಲ್ಲಿ ಸಂಘಟನೆ ಯಾವುದೇ ರೀತಿಯಾಗಿ ಅಭಿವೃದ್ಧಿ ಹೊಂದಿಲ್ಲ ಸಂಘಟನೆ ಬಲಪಡಿಸಲು ಜಿಲ್ಲಾ ಸಂಚಾಲಕರು ಶ್ರಮಿಸಬೇಕಿದೆ. ಆದರೆ ಜಿಲ್ಲಾ ಸಂಚಾಲಕರು ಸಂಘಟನೆಯ ಬಲವರ್ಧನೆಗೆ ಯಾವುದೇ ರೀತಿಯ ಯೋಜನೆಗಳು ಅಥವಾ ಕಾರ್ಯಗಳನ್ನು ರೂಪಿಸಿರುವುದಿಲ್ಲ ಹಾಗಾಗಿ ಜಿಲ್ಲಾ ಸಂಚಾಲಕರನ್ನು ಬದಲಾವಣೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೊಸಕೋಟೆ,ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಮುಖಂಡರು, ಕಾರ್ಯಕರ್ತರು ಸದಸ್ಯರು ಉಪಸ್ಥಿತರಿದ್ದರು.