
ದೊಡ್ಡಬಳ್ಳಾಪುರ ಆಗಸ್ಟ್ 21(ವಿಜಯಮಿತ್ರ ) : ವಿನೂತನ ಯೋಜನೆಗಳನ್ನು ರೂಪಿಸುವ ಮೂಲಕ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಸ್ಕಾಂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಬೇಕಾಗುವ ಅನುಕೂಲಕರ ವಾತಾವರಣವನ್ನು ಕಲ್ಪಿಸಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ನಗರ ಭಾಗದ ಬೆಸ್ಕಾಂ ಕಚೇರಿ ಮುಂಭಾಗ ಆಯೋಜನೆ ಮಾಡಲಾಗಿದ್ದ ಕುಂದುಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ತಾಲೂಕಿನಲ್ಲಿ ಕೇವಲ ಗ್ರಾಮಾಂತರವಷ್ಟೇ ಅಲ್ಲದೇ ನಗರ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು . ನೇಕಾರಿಕೆ ಉದ್ಯಮ ನಗರ ಭಾಗದಲ್ಲಿ ಪ್ರಮುಖವಾಗಿದ್ದು. ವಿದ್ಯುತ್ ವ್ಯತ್ಯಾಯದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ . ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಶೀಘ್ರಗತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅವಶ್ಯಕ ಸಹಕಾರ ಕಲ್ಪಿಸುವ ಮೂಲಕ ತಾಲೂಕಿನ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ತಾಲ್ಲೂಕಿನ ಹಲವಡೆ ಒಂದಿಷ್ಟು ಸಮಸ್ಯೆ
ರಾಜೀವ್ ಗಾಂಧಿ ಬಡಾವಣೆಗಳಲ್ಲಿ ಸಾರ್ವಜನಿಕರು ಎಫ್ 15 ಲೈನ್ ನಿಂದ ಎಫ್ 10ಗೆ ಬದಲಿಸುವಂತೆ ಮನವಿ ಮಾಡಿದರು. ಶ್ರೀ ರಾಮನಹಳ್ಳಿ ಗ್ರಾಮದಲ್ಲಿ 13 ಬೋರಿಗೆ ಒಂದೇ ಟ್ರಾನ್ಸ್ಫಾರ್ಮರ್ ಇದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥ ರವಿಕುಮಾರ್ ಮನವಿ ಮಾಡಿದರು .
ನಗರದ ಶಾಂತಿನಗರದಲ್ಲಿ ಸದಾ ಸಿಂಗಲ್ ಫೇಸ್ ಸಮಸ್ಯೆ ಎದುರಗುತ್ತಿದ್ದು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ನಿವಾಸಿಗಳು ಮನವಿ ಮಾಡಿದರು. ಟ್ರಾನ್ಸ್ಫಾರ್ಮರ್ ಗಳಿಂದ ಅಗತ್ಯಕ್ಕಿಂತ ಹೆಚ್ಚು ಕನೆಕ್ಷನ್ ನೀಡುತ್ತಿರುವ ಕಾರಣ ವೋಲ್ಟೇಜ್ ಸಮಸ್ಯೆಯಾಗುತ್ತಿದ್ದು. ಈ ಸಮಸ್ಯೆಯಿಂದಾಗಿ ನೇಕಾರಿಗೆ ಉದ್ಯಮ ಸಂಪೂರ್ಣ ನೆಲಕಚ್ಚುತ್ತಿದೆ ನೂತನ ಟ್ರಾನ್ಸ್ಫಾರ್ಮರ್ ಗಳ ಅಳವಡಿಕೆ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದರು.
ನಗರದಲ್ಲಿ 15 ಅಡಿ ಅಥವಾ ಅದಕ್ಕಿಂತಲೂ ಚಿಕ್ಕ ರಸ್ತೆಗಳ ಕಾರಣ ಟ್ರಾನ್ಸ್ಫಾರ್ಮರ್ ಗಳನ್ನು ಅಳವಡಿಸಲು ಸೂಕ್ತ ಸ್ಥಳದ ಕೊರತೆ ಎದುರಾಗಿದ್ದು . ಸಾರ್ವಜನಿಕರು ತಮ್ಮ ಮನೆಗಳ ಮುಂಭಾಗ ಟ್ರಾನ್ಸ್ಫಾರ್ಮರ್ ಅಳವಡಿಕೆ ಮಾಡಲು ಒಪ್ಪುವುದಿಲ್ಲ. ಸಾರ್ವಜನಿಕರು ಸೂಕ್ತ ಸ್ಥಳವನ್ನು ಗುರುತಿಸಿ ನೀಡುವ ಮೂಲಕ ಬೆಸ್ಕಾಂ ಸಿಬ್ಬಂದಿಗಳಿಗೆ ಸಹಕರಿಸಬೇಕಾಗಿ ಬೆಸ್ಕಾಂ ಸಿಬ್ಬಂದಿ ವಿನಂತಿಸಿದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ಪದ್ಮರಾಜ್, ಹಂಸಪ್ರಿಯ, ಬಂತಿ ವೆಂಕಟೇಶ್, ರಮೇಶ್ ಸೇರಿದಂತೆ ಬೆಸ್ಕಾಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.