
ದೊಡ್ಡಬಳ್ಳಾಪುರ ವಿಜಯಮಿತ್ರ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಮಾನವ ಸರಪಣಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಗರದ ಪ್ರವಾಸಿ ಮಂದಿರದ ಬಳಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕೆ ಎಚ್ ಮುನಿಯಪ್ಪ, ಉಪ ವಿಭಾಗಾಧಿಕಾರಿ ದುರ್ಗಾ ಶ್ರೀ, ತಾಲೂಕು ದಂಡಾಧಿಕಾರಿ ವಿದ್ಯಾ ವಿಭಾ ರಾಥೋಡ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮ ಯಶಸ್ವೀಗೊಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದಿಂದ ಪ್ರಾರಂಭವಾಗಿ ಹೆಗ್ಗಡಿಹಳ್ಳಿ ಕ್ರಾಸ್ (ನಂದಿ ಬೆಟ್ಟದ ಹತ್ತಿರ)ವರಗೆ ಒಟ್ಟು 34.5 ಕಿಲೋಮೀಟರ್ ವರೆಗೆ ಮಾನವ ಸರಪಳಿಯೊಂದಿಗೆ ಸಂವಿಧಾನ ಪೀಠಿಕೆ ಭೋದನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮಾನವ ಸರಪಣಿಯನ್ನು ನಿರ್ಮಿಸಿದ್ದರು.
ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಓದುವ ಮೂಲಕ ಪ್ರತಿಜ್ಞೆಯಾಗಿ ತೆಗೆದುಕೊಳ್ಳಲಾಯಿತು . ಅಂರಾರಾಷ್ಟ್ರೀಯ ಉದ್ದೇಶವೇ ಮಾನವ ಹಕ್ಕುಗಳ ರಕ್ಷಣೆ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸದೃಢಗೊಳಿಸುವುದಾಗಿದೆ. ಪ್ರಚಾರ ಒಳಗೊಂಡಿರುವ ಪ್ರಜಾಪ್ರಭುತ್ವದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ ಎಂದು ಗಣ್ಯರು ಅಭಿಪ್ರಾಯವ್ಯಕ್ತಪಡಿಸಿದರು .
ಕೊನೆಯಲ್ಲಿ ಜೈ ಹಿಂದ್ ಮತ್ತು ಜೈ ಕರ್ನಾಟಕ ಘೋಷಣೆಗಳನ್ನು ಹೇಳುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.