
ದೊಡ್ಡಬಳ್ಳಾಪುರ : ಬಡ ವರ್ಗದ ಜನರ ಪಡಿತರ ಚೀಟಿಗಳನ್ನು ಏಕಾ ಏಕಿ ರದ್ದುಗೊಳಿಸಿ ಬಡವರ ಅನ್ನಕ್ಕೆ ಕನ್ನ ಹಾಕಿದಂತಾಗಿದೆ, ಬಡ ಜನರು ಪಡಿತರ ಚೀಟಿಗಾಗಿ ಪ್ರತಿನಿತ್ಯವೂ ತಾಲೂಕು ಕಚೇರಿಗೆ ಅಲೆದಾಡುವಂತಾಗಿದೆ ಈ ಕೂಡಲೇ ಈ ಸಮಸ್ಯೆಯನ್ನ ಸೂಕ್ತರೀತಿಯಲ್ಲಿ ಪರಿಹರಿಸಬೇಕು ಎಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಂಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ತಾಲೂಕಿನ ಸಾಮಾನ್ಯ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನೆಡೆಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ಹಲವಾರು ಗೊಂದಲಗಳನ್ನು ಸೃಷ್ಟಿ ಮಾಡಿದೆ, ಇಂತಹ ಸಂದರ್ಭದಲ್ಲಿ ಬಡ ವರ್ಗದ ಜನರ ಪಡಿತರ ರದ್ದು ಪಡಿಸಿರುವುದು ಎಷ್ಟು ಸರಿ,
ಹತ್ತಾರು ವರ್ಷಗಳಿಂದ ತಾಲೂಕಿನಲ್ಲಿ ಸೂರಿಲ್ಲದೆ ಇರುವಂತಹ ವಸತಿ ಹೀನರಿಗೆ ವಸತಿ ಕಲ್ಪಿಸಬೇಕು, ತಾಲೂಕಿನಾದ್ಯಂತ ನಾಯಿಗಳ ಹಾವಳಿ ಹೆಚ್ಚಾಗಿದ್ದು ವಯೋವೃದ್ದರು ಹಾಗೂ ಮಕ್ಕಳನ್ನು ಮಾರಕವಾಗಿ ಕಚ್ಚಿ ಗಾಯಗೊಳಿಸಿದ ಹಲವು ಘಟನೆಗಳು ಸಂಭವಿಸಿವೆ ಈ ಬಗ್ಗೆ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ,ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಪ್ರತಿನಿತ್ಯ ಸಿಗಬೇಕಾದ ಸೌಲಭ್ಯಗಳು ಸಿಗದೇ ಪ್ರತಿನಿತ್ಯ ಅಲೆದಾಡುವಂತಾಗಿದೆ,ಈ ರೀತಿಯ ವಿಳಂಬ ನೀತಿಯನ್ನು ತಪ್ಪಿಸಲು ಕ್ರಮಜರುಗಿಬೇಕು ಎಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾದ್ಯಕ್ಷ ಮಂಜುನಾಥ್ ಅವರು ತಾಲೂಕಿನ ಕಸಬಾ ಹೋಬಳಿ ಪಾಲನಜೋಗಹಳ್ಳಿ ಗ್ರಾಮದ ಸ.ನಂ. 21 ರಲ್ಲಿ 5 ಎಕರೆ 0.13ಗುಂಟೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡಿದ್ದರೂ ಸಹ ತಾಲೂಕು ಆಡಳಿತ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದು ಭೂಗಳ್ಳರಿಗೆ ಕುಮ್ಮಕ್ಕು ನೀಡಿದಂತೆ ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ, ಬಡಜನರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಅಧಿಕಾರಿಗಳು ಶ್ರೀಮಂತರು ಹಾಗೂ ಭೂಮಾಫಿಯದವರಿಗೆ ಶೀಘ್ರಗತಿಯಲ್ಲಿ ಸ್ಪಂದಿಸಿ ಎಲ್ಲಾ ಕೆಲಸ ಮಾಡಿಕೊಡುತ್ತಾರೆ, ಅಕ್ರಮಕ್ಕೆ ಒಳಪಟ್ಟಿರುವ ಸರ್ಕಾರಿ ಜಾಗಕ್ಕೆ ಈ ಕೂಡಲೇ ಬೇಲಿ ಹಾಕಿ ಸರ್ಕಾರಿ ಜಾಗ ಎಂದು ನಾಮ ಫಲಕ ಹಾಕಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದೆ ಇದ್ದಲ್ಲಿ ತಾಲೂಕು ಕಚೇರಿಗೆ ಬೀಗ ಹಾಕಿ ಬೃಹತ್ ಮಟ್ಟದ ಹೋರಾಟ ನಡೆಸಲಾಗುತ್ತದೆ ಎಂದರು.
ಅಂತಿಮವಾಗಿ ಸಂಘಟನೆಯ ವತಿಯಿಂದ ತಾಲ್ಲೂಕಿನ ಸಾಮಾನ್ಯ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹಾರಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಮುಖಂಡರಾದ ನಯಾಜ್ ಖಾನ್ ತಾ.ಅದ್ಯಕ್ಷ ಬಿ.ಪಿ.ಹರಿಕುಮಾರ್,ಮಹಿಳಾ ಘಟಕದ ಶಶಿಕಲಾ, ಕುಮುದ, ಇಫ್ತಾಖರ್ ಅಹಮದ್, ಪೀರ್ ಪಾಷಾ, ಕೃಷ್ಣ, ಮುನಿರಾಜಪ್ಪ, ಗಂಗರಾಜಪ್ಪ, ಅಶ್ವತ್, ರೇಷ್ಮಾ ಖಾನಂ, ಪದ್ಮಾವತಿ,ಸೌಮ್ಯ ಬಾಯಿ, ರಾಗಿಣಿ,ವಿನಯ್ ಪ್ರಸಾದ್, ಮುನಿಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.