
ದೊಡ್ಡಬಳ್ಳಾಪುರ : ಕೆ.ಸಿ.ಪಿ.ಸರ್ಕಲ್ CL7 ಬಾರ್ ಅಂಡ್ ರೆಸ್ಟೋರೆಂಟ್ ಲೈಸೆನ್ಸ್ ಗಾಗಿ ನೀಡಿರುವ ಅರ್ಜಿಯನ್ನು ಪರಿಶೀಲಿಸಿ, ಅನುಮತಿ ಕೊಡಬಾರದೆಂದು ಪ್ರಬುದ್ಧ ಕರ್ನಾಟಕ ಭೀಮ ಸೇನೆ ಆಗ್ರಹಿಸಿ ತಾಲ್ಲೂಕಿನ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಅವರುದೊಡ್ಡಬಳ್ಳಾಪುರ ತಾಲ್ಲೂಕು, ಕೆ.ಸಿ.ಪಿ.ಸರ್ಕಲ್’ ಹತ್ತಿರವಿರುವ, ವಾರ್ಡ್ ನಂ.11ರ ಆರ್.ಡಿ.ಕಂಫರ್ಟ್ ನಲ್ಲಿ CL7 ಬಾರ್ ಅಂಡ್ ರೆಸ್ಟೋರೆಂಟ್ ಗಾಗಿ ಅನುಮತಿ ನೀಡುವಂತೆ ಕೋರಿ ಅಬಕಾರಿ ಇಲಾಖೆಯಲ್ಲಿ ಅರ್ಜಿಯನ್ನು ಸಲ್ಲಿಸಿರುವುದು ತಿಳಿದುಬಂದಿದ್ದು, ಸದರಿ ಕಟ್ಟಡದ ಮೇಲೆ ಮೊಬೈಲ್ ಟವರ್ ಇದ್ದು. ಪಾರ್ಕಿಂಗ್ ಇಲ್ಲದ ಜಾಗವಾಗಿದ್ದು,ನಿಯಮಗಳನ್ನು ಅನುಸರಿಸದೇ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಿದರು.
ಕೆ.ಸಿ.ಪಿ ಸರ್ಕಲ್ ನಲ್ಲಿ ಬಸ್‌ಗಳು ನಿಲ್ಲಿಸುತ್ತವೆ. ಅಲ್ಲಿಂದ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಶಾಲಾ ಮಕ್ಕಳು ಓಡಾಡುವ ರಸ್ತೆಯಾಗಿದೆ. ಹತ್ತಿರದಲ್ಲಿರುವ ಕೊಂಗಾಡಿಯಪ್ಪ ಪ್ರೌಢಶಾಲೆ, ಕಾಲೇಜು ಮತ್ತು ಎಂ.ಎಸ್.ವಿ ಪಬ್ಲಿಕ್ ಸ್ಕೂಲ್ ಇದೆ. ದೇವಾಲಯಗಳಿವೆ. ಇದೆಲ್ಲವನ್ನು ಹೆಚ್ಚಿನದಾಗಿ ಪಕ್ಕದಲ್ಲೆ ಸಾನ್ವಿ ಕ್ಯಾಥಿಂಗ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಇದ್ದು, ಅಲ್ಲಿ ತುಂಬ ಜನ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಕಡು ಬಡವರು. ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ.ಈಗಾಗಲೇ ಕೆ.ಸಿ.ಪಿ. ಸರ್ಕಲ್‌ನಲ್ಲಿ ಹೆಚ್ಚು ಅಪಘಾತಗಳಾಗಿ ಸಾವನ್ನಪ್ಪಿದ್ದಾರೆ. ಮತ್ತೆ CL7 ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿದರೆ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದರು.
ಹಾಗಾಗಿ ಅಧಿಕಾರಿಗಳ ತಂಡ ಖುದ್ದಾಗಿ ಸ್ಥಳಕ್ಕೆ ಬೇಟಿ ನೀಡಿ, ಸ್ಥಳ ಪರಿಶೀಲಿಸಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಯಾವುದೇ ಅನುಮತಿ ನೀಡದೆ ಅರ್ಜಿಯನ್ನು ವಜಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಬುದ್ಧ ಕರ್ನಾಟಕ ಭೀಮ ಸೇನೆಯ ರಾಜ್ಯಸಮಿತಿ ಸದಸ್ಯರು ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.