
ದೊಡ್ಡಬಳ್ಳಾಪುರ : ತಾಲೂಕಿನ ವಿಧಾನಸಭಾ ಕ್ಷೇತ್ರ ಶಾಸಕರು ಹಾಗೂ ರಾಜ್ಯ ಬಿಜೆಪಿ ಯುವ ಘಟಕ ಅಧ್ಯಕ್ಷರಾದ ಧೀರಜ್ ಮುನಿರಾಜುರವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣ ಗೌಡರ ಬಣ )ಯ ಪುರುಷೋತ್ತಮ್ ಗೌಡ ನೇತೃತ್ವದ ತಂಡ ಸನ್ಮಾನಿಸಿ ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.
ಶಾಸಕರನ್ನು ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಕೆ ಕತ್ತರಿಸುವ ಮೂಲಕ ಸನ್ಮಾನಿತರನ್ನು ಗೌರವಿಸಲಾಯಿತು .
ಬೆಂಗಳೂರು ಗ್ರಾಮಾಂತರ ಕರವೇ ಘಟಕದ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ತಾಲೂಕಿಗೆ ಯುವ ನಾಯಕ ದೊರೆತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ , ಸದಾ ನಾಡು ನುಡಿ ವಿಚಾರವಾಗಿ ನಮ್ಮೊಂದಿಗೆ ಕೈಜೋಡಿಸುವ ಮೂಲಕ ತಾಲೂಕಿನಲ್ಲಿ ಕನ್ನಡ ಬಳಕೆಗೆ ಅತಿ ಹೆಚ್ಚು ಒತ್ತು ನೀಡುತ್ತಿದ್ದು, ನಿರಂತರ ಸೇವಾ ಕಾರ್ಯಗಳ ಮೂಲಕ ತಾಲೂಕಿನ ಜನರಗೆ ಕೇವಲ ಶಾಸಕರಾಗಿ ಉಳಿಯದೆ ಪ್ರಧಾನ ಸೇವಕರಾಗಿ, ಬೆಂಬಲವಾಗಿ ಶ್ರಮಿಸುತ್ತಿರುವ ಧೀರಜ್ ಮುನಿರಾಜುರವರಿಗೆ ಮತ್ತಷ್ಟು ರಾಜಕೀಯವಾಗಿ ಬೆಳವಣಿಗೆ ದೊರೆಯಲಿ , ಶುಭವಾಗಲಿ ಎಂದು ಹಾರೈಸಿದರು .
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣ ಗೌಡರ ಬಣ )ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಸದಸ್ಯರು, ಕರವೇ ಹಿತೈಷಿಗಳು ಉಪಸ್ಥಿತರಿದ್ದರು.