
ದೊಡ್ಡಬಳ್ಳಾಪುರ: ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧ್ಯಕ್ಷರು ಉದ್ದೇಶಪೂರ್ವಕವಾಗಿಯೇ ತಮ್ಮ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಾ ಏಕ ಪಕ್ಷಯವಾಗಿ ತಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಬೈರಸಂದ್ರ ಪಾಳ್ಯದ ಗ್ರಾಮಸ್ಥರಾದ ಭಾರ್ಗವ್ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನೆಡೆಸಿದರು.
ಏನಿದು ವಿಚಾರ….???
ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಂತೆ ಬೈರಸಂದ್ರ ಪಾಳ್ಯ ಹಾಗೂ ಗೆಜ್ಜೆಗದಹಳ್ಳಿ ಎರಡು ಪ್ರಮುಖ ಕೆರೆಗಳಿದ್ದು ಕೆರೆಗಳ ಮಣ್ಣು ಊಳೆತ್ತುವ ವಿಚಾರದಲ್ಲಿ ಬಹಳಷ್ಟು ವಿವಾದಗಳು ಉದ್ಭವವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಸದ್ಯದ ಪರಿಸ್ಥಿತಿಯಲ್ಲಿ ಬೈರಸಂದ್ರ ಪಾಳ್ಯ ಕೆರೆಯಲ್ಲಿ ಮಣ್ಣು ಎತ್ತು ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಣ್ಣು ಊಳೆತ್ತುವ ವಿಚಾರದಲ್ಲಿ ಬೈರಸಂದ್ರ ಪಾಳ್ಯದ ಗ್ರಾಮಸ್ಥರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು,ಆ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧಿಕಾರಿಗಳು ಬೈರಸಂದ್ರ ಪಾಳ್ಯದ ಕೆರೆಯ ವ್ಯಾಪ್ತಿಯು ನಮಗೆ ಬರುವುದಿಲ್ಲವೆಂದು ಲಿಖಿತ ಮೂಲಕ ಉತ್ತರ ನೀಡಿರುತ್ತಾರೆ,ಆಗ ಬೈರಸಂದ್ರ ಪಾಳ್ಯದ ಗ್ರಾಮಸ್ಥರು ತಾವೇ ಕೆರೆಯ ಹೂಳೆತ್ತುವ ಸಲುವಾಗಿ ಕೆರೆಯ ಮಣ್ಣನ್ನು ಊರಿನ ಲೇಔಟ್ ಒಂದಕ್ಕೆ ಟ್ರ್ಯಾಕ್ಟರ್ ಮೂಲಕ ಸಾಗಿಸುವ ಕಾರ್ಯಕ್ಕೆ ಮುಂದಾಗಿದ್ದು,ಈ ಸಂಬಂಧ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮಣ್ಣು ಸಾಗಿಸುತ್ತಿರುವ ವಿಚಾರವಾಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
ಈ ಹಿನ್ನಲೆ ದೊಡ್ಡ ತುಮಕೂರು ಗ್ರಾಮ ಪಂಚಾಯತಿಯ ಮುಂಭಾಗ ಬೈರಸಂದ್ರ ಪಾಳ್ಯದ ಗ್ರಾಮಸ್ಥರು ಧರಣಿ ಕುಳಿತು ತಮಗೆ ಸೂಕ್ತ ನ್ಯಾಯ ಒದಗಿಸುವಂತೆ ಮನವಿ ಮಾಡಿದರೂ ಕೂಡ ಸ್ಥಳಕ್ಕೆ ದಾವಿಸದೇ ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧ್ಯಕ್ಷರು ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ಬೈರಸಂದ್ರ ಪಾಳ್ಯದ ನಿವಾಸಿ ಭಾರ್ಗವ್ ತಿಳಿಸಿದರು.