
ಶಿವಮೊಗ್ಗ: ರಾಜ್ಯಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರ ತರಬೇತಿ ಶಿಬಿರದಲ್ಲಿ ಶಿವಮೊಗ್ಗ ಜಿಲ್ಲೆಯ ನಾಲ್ವರು ಸ್ಕೌಟ್ ಆಯುಕ್ತರಿಗೆ ಇನ್ಸಿಗ್ನಿಯಾ ಪದಕ ಗೌರವ ನೀಡಿ ಸನ್ಮಾನಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರ ತರಬೇತಿ ಶಿಬಿರವು ಐದು ದಿನ ನಡೆಯಿತು.
ದೊಡ್ಡಬಳ್ಳಾಪುರದ ಡಾ. ಅನಿಬೆಸೆಂಟ್ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಶಿಬಿರದ ಆವರಣದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಶಿವಮೊಗ್ಗ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಮಲ್ಲಿಕಾರ್ಜುನ ಕಾನೂರು ಅವರು ರಾಜ್ಯಮಟ್ಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಭಾಗವಹಿಸಿದ್ದರು.
ರಾಜ್ಯ ಆಯುಕ್ತ ಸಿ.ಎಸ್.ರೆಡ್ಡಿ, ರಾಜ್ಯ ತರಬೇತಿ ಆಯುಕ್ತ ನಾಗೇಶ್ ಆರ್ ಶಿವಪೂರ್, ಗೋಪಾಲಕೃಷ್ಣ ಅಡಿಗ, ರಾಜ್ಯ ಗೈಡ್ಸ್ ತರಬೇತಿ ಆಯುಕ್ತೆ ಕೆ.ವಿ.ಶ್ಯಾಮಲಾ ಅವರು ಪ್ರಮಾಣ ಪತ್ರ, ಪದಕ ವಿತರಿಸಿ ಗೌರವಿಸಿದರು.
ರಾಜ್ಯಮಟ್ಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಪದಕ ಪಡೆದ ಶಿವಮೊಗ್ಗ ನಾಲ್ವರಿಗೆ ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಆಯುಕ್ತರಾದ ಎಸ್.ಜಿ.ಆನಂದ್, ರವಿ.ಕೆ., ಚೂಡಾಮಣಿ ಪವಾರ್, ರಾಜೇಶ್ ಅವಲಕ್ಕಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ನ ಪದಾಧಿಕಾರಿಗಳು ಅಭಿನಂದಿಸಿದರು.