
ಇದೇ ಏಪ್ರಿಲ್ 10ರ ಗುರುವಾರದಂದು ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್ (ರಿ.) ಉದ್ಘಾಟನಾ ಕಾರ್ಯಕ್ರಮವು ಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನದ ಮಹಾಸ್ವಾಮಿಗಳಾದ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ಶುಭಶೀರ್ವಾದದಿಂದ ಅದ್ದೂರಿಯಾಗಿ ನೆರವೇರಿತು ಎಂದು ಟ್ರಸ್ಟ್ ನ ಅಧ್ಯಕ್ಷ ವೈ.ಸುಬ್ರಮಣಿ ತಿಳಿಸಿದರು.
ಅರದೇಶನಹಳ್ಳಿ, ಕುಂದಾಣ ಹೋಬಳಿಯ ಅರದೇಶನಹಳ್ಳಿಯ ಶ್ರೀ ಬಗಳಾಮುಖಿದೇವಿ ದೇವಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್ (ರಿ.) ಸ್ಥಾಪಿಸಿದ್ದು, ಸದರಿ ಟ್ರಸ್ಟ್ ನ ಉದ್ಘಾಟನೆಯನ್ನು ಹಲವು ಗಣ್ಯರ ಜೊತೆಗೂಡಿ ದೀಪ ಬೆಳಗಿಸಿ ಬಗಳಾಮುಖಿದೇವಿ ಅಮ್ಮನವರಿಗೆ ಮಂಗಳಾರತಿ ಸಲ್ಲಿಸುವ ಮೂಲಕ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಯವರು ನೂತನ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು,ಬಗಳಾಮುಖಿ ದೇವಿಯ ಕೃಪಾಶಿರ್ವಾದಿಂದ ಇಂದು ನೂತನ ಟ್ರಸ್ಟ್ ಸ್ಥಾಪಿಸಿ, ದೇವಾಲಯದ ಅಭಿವೃದ್ಧಿಗೆ ಮುಂದಾಗಿರುವ ಸುಬ್ರಮಣಿ ಹಾಗೂ ತಂಡಕ್ಕೆ ಶುಭವಾಗಲಿ, ಇಲ್ಲಿಗೆ ಬರುವ ಸಕಲ ಭಕ್ತರ ಸಂಕಷ್ಟಗಳನ್ನು ನೀವಾರಿಸುವ ಮೂಲಕ ಕೇವಲ ತಾಲ್ಲೂಕು ಜಿಲ್ಲೆ ಅಷ್ಟೇ ಅಲ್ಲದೇ ರಾಜ್ಯ ಎಲ್ಲೆಡೆ ತಾಯಿಯ ಪ್ರಸಿದ್ದಿ ಪಸರಿಸಲಿ ಎಂದರು.
ಶಕ್ತಿ ದೇವಿಯ ಆಲಯ ಸ್ಥಾಪನೆ, ನಿರ್ವಹಣೆ ಸುಲಭದ ಕೆಲಸವಲ್ಲ ಇಂತಹ ಮಹಾತ್ಕಾರ್ಯಕ್ಕೆ ಪೂರಕವಾಗಿ ಶ್ರಮಿಸಿರುವ ಎಲ್ಲರಿಗೂ ತಾಯಿ ಬಗಳಾಮುಖಿ ಶುಭ ಉಂಟುಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಹನುಮಂತರಾಜು,ಕಾರ್ಯದರ್ಶಿಗಳಾದ ಕು|| ಯಮುನ, ಎಸ್. (ವಕೀಲರು), ಸಹಕಾರ್ಯದರ್ಶಿ ಎಸ್.ಎನ್. ನರಸಿಂಹಮೂರ್ತಿ, ವಿಜಯಲಕ್ಷ್ಮೀ,ನಾಗರಾಜು, ಸದಸ್ಯರಾದ ಹೆಚ್. ಹರೀಶ್,ಯಶ್ವಂತ್,ಯಲ್ಲಮ್ಮ,ಶಾರದಮ್ಮ,ರಾಮಮೂರ್ತಿ, ಆರ್. ಸಂತೋಷ, ಜಯರಾಮ್, ಮಂಜುನಾಥ್,ಪುನೀತ್, ಸಂಚಾಲಕರಾದ ಕೆ ಸಿ ಗೋಪಾಲ್,ಮಾರುತಿ, ಹನುಮಂತರಾಜು ಸೇರಿದಂತೆ ಹಲವರು ಹಾಜರಿದ್ದರು.