
2025 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು , ಬೆಂಗಳೂರು ಗ್ರಾಮಂತರ ಜಿಲ್ಲೆಯ ದೇವನಹಳ್ಳಿಯ ದುದ್ದನಹಳ್ಳಿ ಗ್ರಾಮದಲ್ಲಿರುವ ಎಂ ವಿ ಎಂ ಶಾಲೆ ಶೇಕಡ 100 ರಷ್ಟು ಫಲಿತಾಂಶ ಪಡೆದಿದೆ.
ಎಂ ವಿ ಶಾಲೆಯು ಈ ಬಾರಿಯು ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯಲ್ಲಿ 1 ರಾಜ್ಯ ರ್ಯಾಂಕ್ , 9 ಡಿಸ್ಟಿಂಕ್ಷನ್‌ಗಳು, 22 ಪ್ರಥಮ ದರ್ಜೆ ಮತ್ತು 2 ದ್ವಿತೀಯ ದರ್ಜೆ ಫಲಿತಾಂಶವನ್ನು ಪಡೆಯುವ ಮೂಲಕ ಗ್ರಾಮೀಣ ಕ್ಷೇತ್ರದ ಮಕ್ಕಳು ಉತ್ತಮ ಸಾಧನೆ ಮಾಡಿದ್ದು, ಶಾಲಾ ಆಡಳಿತ ಮಂಡಳಿ , ಬೋಧಕ ಹಾಗೂ ಬೋಧಕರ ವರ್ಗ ಶುಭ ವಿದ್ಯಾರ್ಥಿಗಳಿಗೆ ಕೋರಿದೆ.
ಪ್ರಾಂಶುಪಾಲರಾದ ಕೆ ಎಸ್ ಗೌರವ್ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಯಾರೂ ಖಾಸಗಿ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್‌ಗಳಿಗೆ ಹೋಗದೆ ಈ ಸಾಧನೆ ಮಾಡಿದ್ದಾರೆ, ಈ ಫಲಿತಾಂಶವು ಸಂಪೂರ್ಣವಾಗಿ ಶಾಲೆಯ ಗುಣಮಟ್ಟದ ಶಿಕ್ಷಣ, ಶಿಕ್ಷಕರ ಶ್ರಮ ಹಾಗೂ ವಿದ್ಯಾರ್ಥಿ ಕೇಂದ್ರಿತ ಅಧ್ಯಯನ ಮಾದರಿಯಿಂದ ಸಾಧ್ಯವಾಗಿದೆ ಎಂದರು.
ಪೋಷಕರು ಮತ್ತು ಶಿಕ್ಷಕ ತಂಡ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ಶಾಲಾ ಆಡಳಿತ ಮಂಡಳಿ ಬೋಧಕ ಹಾಗೂ ಬೋಧಕರ ಸಿಬ್ಬಂದಿ ವರ್ಗಕ್ಕೆ ಶುಭ ಕೋರಿ ಅಭಿನಂದನೆಗಳನ್ನು ತಿಳಿಸಿದರು.
ಎಂವಿಎಂ ಶಾಲೆ ಸಮಗ್ರ ಮತ್ತು ಹೈಬ್ರಿಡ್ ಶಿಕ್ಷಣದ ಮಾದರಿ ಶಾಲೆಯಾಗಿ ಪರಿಗಣಿಸಲ್ಪಟ್ಟಿದ್ದು, ಈ ಬಾರಿಯ ಫಲಿತಾಂಶವು ಶಾಲೆಯ ದೃಷ್ಟಿಕೋನವನ್ನು ಮತ್ತಷ್ಟು ದೃಢಪಡಿಸಿದೆ,ಅಲ್ಲದೇ ಗ್ರಾಮೀಣ ಪ್ರದೇಶದಿಂದಲೂ ಶ್ರೇಷ್ಟ ಶಿಕ್ಷಣ ನೀಡಬಹುದೆಂಬ ಸಂದೇಶವನ್ನು ಸ್ಪಷ್ಟವಾಗಿ ಸಮಾಜಕ್ಕೆ ತಿಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಗ್ರಾಮೀಣ ಕ್ಷೇತ್ರದಿಂದ ರಾಜ್ಯ ಮಟ್ಟದ ಸಾಧನೆಮಾಡಿರುವುದು ಸಂತಸ ತಂದಿದೆ ಇದು ಶಾಲೆಯ ಶ್ರೇಷ್ಠತೆ ಹಾಗೂ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಮಾತನಾಡಿ ನಮ್ಮ ಶಾಲೆಯಲ್ಲಿ ಶಿಕ್ಷಕರು ನಮ್ಮೊಂದಿಗೆ ಆತ್ಮೀಯವಾಗಿ ಬೆರೆಯುವ ಮೂಲಕ ಕಲಿಕೆಯ ನೂನ್ಯತೆಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿ, ಉತ್ತಮ ಅಭ್ಯಾಸ ನೀಡುವುದರ ಜೊತೆಗೆ ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬ ಮನೋಬಲವನ್ನು ಸಹ ತುಂಬುತ್ತಾರೆ , ನಮ್ಮ ಶಾಲೆಯೂ ಉತ್ತಮ ಆಡಳಿತ ಮಂಡಳಿ ಹೊಂದಿದ್ದು, ಉತ್ತಮ ಮೂಲಭೂತ ಸೌಕರ್ಯಗಳಿಂದ ಕೂಡಿದೆ ವಿದ್ಯಾರ್ಥಿಗಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುವ ಶಿಕ್ಷಕರು ಹಾಗೂ ಆಡಳಿತ ವರ್ಗ ನಮ್ಮ ಇಂದಿನ ಸಾಧನೆಗೆ ಕಾರಣವಾಗಿದೆ ಎಂದರು.
ಪೋಷಕರಾದ ಸುಮಾ ಮಾತನಾಡಿ ನನ್ನ ಮಗ ಇಂದು ಹತ್ತನೇ ತರಗತಿಯಲ್ಲಿ ಉತ್ತೀರ್ಣನಾಗಲು ಕಾರಣ ಶಾಲೆಗೆ ಸಿಬ್ಬಂದಿ ವರ್ಗ ಓದಿನಲ್ಲಿ ಹಿಂದುಳಿದಿದ್ದ ನನ್ನ ಮಗನನ್ನು ಇಂದು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣವಾಗುವಂತೆ ಮಾಡಿದ್ದಾರೆ, ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ, ಜೊತೆಗೆ ಶಾಲೆ ಆಡಳಿತ ಮಂಡಳಿ ಸದಾ ನಮ್ಮೊಟ್ಟಿಗಿದ್ದು ಮಕ್ಕಳನ್ನು ಹೇಗೆ ಬೆಳೆಸಬೇಕು , ಅವರಿಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು ಎಂಬ ಸಲಹೆಯನ್ನು ಸದಾ ನೀಡುತ್ತಿದ್ದರು , ಇಂದು ನನ್ನ ಮಗ ಹತ್ತನೇ ತರಗತಿಯಲ್ಲಿ ಶೇಕಡ 70ರಷ್ಟು ಅಂಕ ಪಡೆಯುವ ಮೂಲಕ ಉತ್ತೀರ್ಣನಾಗಿದ್ದಾನೆ ಶಾಲೆಯ ಆಡಳಿತ ಮಂಡಳಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಕ್ಕೆ ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ. ಶ್ರೀನಿವಾಸ, ಕಾರ್ಯದರ್ಶಿ ರಾಧಾ ಶ್ರೀನಿವಾಸ, ಪ್ರಾಂಶುಪಾಲರಾದ ಕೆ ಎಸ್ ಗೌರವ್ , ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಮತ್ತು ನಾಗೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.