
ದೊಡ್ಡಬಳ್ಳಾಪುರ : ಕನ್ನಡ ಜಾಗೃತಿ ವೇದಿಕೆ ತಾಲೂಕು ಮತ್ತು ಜಿಲ್ಲಾ ಘಟಕದ ವತಿಯಿಂದ ಆಪರೇಷನ್ ಸಿಂಧೂರ ದಲ್ಲಿ ವೀರ ಮರಣ ಹೊಂದಿದ ವೀರ ಯೋಧರಿಗೆ ಸಿದ್ದಲಿಂಗಯ್ಯ ಸರ್ಕಲ್ ವೃತ್ತದಲ್ಲಿ ದೀಪ ಹಚ್ಚುವ ಮುಖಾಂತರ ಶ್ರದ್ಧಾಂಜಲಿ/ ಮೌನಚರಣೆ ಅರ್ಪಿಸಲಾಯಿತು..
ಕಾರ್ಯಕ್ರಮದಲ್ಲಿ ಮೊದಲಿಗೆ ಮೌನಚರಣೆ ಶ್ರದ್ದಾಂಜಲಿ. ದೀಪ ಬೆಳಗು ಮುಖಾಂತರ ಗೌರವ ಸಲ್ಲಿಸಲಾಯಿತು
ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ನಾಗರಾಜ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ,ದೇಶಕ್ಕೆ ರೈತ ಎಷ್ಟು ಮುಖ್ಯವೋ ಸೈನಿಕರು ಕೂಡ ಅಷ್ಟೇ ಮುಖ್ಯವಾಗಿರಾಗಿರುತ್ತಾರೆ,ದೇಶಕ್ಕೆ ರೈತ ಬೆನ್ನೆಲುಬು ಆದರೆ ದೇಶಕ್ಕೆ ಸೈನಿಕರು ಕಣ್ಣುಗಳಂತೆ ನಮ್ಮನ್ನು ಸದಾ ಕಾಯುತ್ತಾರೆ ಅವರಿಗೆ ನಾವು ಸದಾ ಚಿರಋಣಿ ಎಂದರು.
ಮೊನ್ನೆ ಪಾಲ್ಗಾಮ್ ನಲ್ಲಿ ನಡೆದ ಹೀನ ಕೃತ್ಯವನ್ನು ನಾವು ಖಂಡಿಸುತ್ತೇವೆ. ಅದಕ್ಕೆ ಉತ್ತರವಾಗಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರು ಸೈನ್ಯದ ಮುಖಾಂತರ ಪಾಕಿಸ್ತಾನಕ್ಕೆ ಸರಿಯಾದ ಉತ್ತರವನ್ನು ನೀಡಿದ್ದಾರೆ. ಭಾರತೀಯ ನಾರಿಯರ ಸಿಂಧೂರದ ಮಹತ್ವ ಹಾಗೂ ಶಕ್ತಿ ಏನೆಂಬುದನ್ನು ತಿಳಿಸಿದ್ದಾರೆ ಎಂದರು.
ಅಲ್ಲದೆ ನಮ್ಮ ದೇಶದಲ್ಲಿ ಹೆಣ್ಣಿಗೆ ತನ್ನದೇ ವಿಶೇಷ ಸ್ಥಾನವನ್ನು ನೀಡಿ ಗೌರವಿಸುತ್ತೇವೆ, ನಮ್ಮ ನಾಡಿನ ಹಲವಾರು ವೀರ ವನಿತೆಯರಾದ ಕಿತ್ತೂರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಸಾವಿತ್ರಿಬಾಯಿ ಪುಲೆ, ಫಾತಿಮಾ ಬೇಗ0, ಸರೋಜಿನಿ ನಾಯ್ಡು ಸೇರಿದಂತೆ ಹಲವಾರು ಮಹಿಳೆಯರು ಸಾಕ್ಷಿಯಾಗಿದ್ದಾರೆ. ಈಗಿನ ಯುವ ಸಮುದಾಯ ಸಮಾಜ ದೇಶಕ್ಕೆ ಧಕ್ಕೆಯಾದಾಗ ಸ್ವಯಂ ಪ್ರೇರಿತವಾಗಿ ದೇಶ ಸೇವೆಗೆ ಮುಂದಾಗಬೇಕು ದೇಶದ ಭದ್ರತೆಗೆ ಸಹಕರಿಸಬೇಕು ಎಂದರು.
ನಂತರ ಕನ್ನಡ ಜಾಗೃತ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್ ಮಾತನಾಡಿ ಭಾರತ ದೇಶ ವಿಶ್ವಮಟ್ಟದಲ್ಲಿ ಮಟ್ಟದಲ್ಲಿ ಬೆಳೆಯುತ್ತಿರುವುದು ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ,ಅಲ್ಲದೆ ನಮ್ಮ ದೇಶದಲ್ಲಿ ಹಿಂದೂ,ಮುಸ್ಲಿಂ, ಅಣ್ಣ ತಮ್ಮಂದಿರಂತೆ ಇರುವುದು ಅವರಿಗೆ ಸಹಿಸಲಾಗುತ್ತಿಲ್ಲ,, ದೇಶದಲ್ಲಿ ವಿಷ ಬೀಜಗಳನ್ನು ಬಿತ್ತಿ, ದೇಶವನ್ನು ಹಾಳು ಮಾಡುವ ಕೆಲಸವನ್ನು ಈ ಉಗ್ರಗಾಮಿಗಳು ಮಾಡುತ್ತಿದ್ದಾರೆ,, ಅಲ್ಲದೆ ನಾಗರೀಕರನ ಗುರಿಯಾಗಿರಿಸಿ ಹೀನಾಯ ಕೃತ್ಯಗಳನ್ನು ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.
ಕನ್ನಡ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಸಿ.ಶಶಿಧರ್ ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವಿದ್ದಂತೆ ನಾವುಗಳು ಎಲ್ಲರನ್ನು ಗೌರವಿಸುತ್ತೇವೆ ಆದರೆ ನಮ್ಮ ದೇಶವನ್ನು ಹಾಳು ಮಾಡುವ ಇಂತಹ ಉಗ್ರಗಾಮಿಗಳನ್ನು ಬೆಳೆಸುತ್ತಿರುವ ಪಾಕಿಸ್ತಾನಕ್ಕೆ ಯುದ್ಧದ ಮುಖಾಂತರ ತಕ್ಕ ಉತ್ತರ ನೀಡಬೇಕಾಗಿದೆ ಎಂದು ತಿಳಿಸಿದರು..
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಸಿ ಸುರೇಶ್ ಮಾತನಾಡಿ ಪಾಲ್ಗಾಮ್ ನಲ್ಲಿ ನಡೆದ ಕೃತ್ಯಕ್ಕೆ ನಮ್ಮ ಪ್ರಧಾನಿಗಳು ಆಪರೇಷನ್ ಸಿಂಧೂರ ಎಂಬ ಹೆಸರಿನಡಿಯಲ್ಲಿ ಸುಮಾರು ಭಯತ್ಪಾದಕ ನೆಲೆಗಳನ್ನು ಗುರುತಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಿದ್ದಾರೆ, ವಿಶ್ವಕ್ಕೆ ಭಾರತ ಶಕ್ತಿ ತಿಳಿಯುವಾಗೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ದೇಶದ subhadratrಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಕನ್ನಡ ಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್, ಜಿಲ್ಲಾಧ್ಯಕ್ಷರಾದ ಎಂ.ನಾಗರಾಜು , ತಾಲೂಕು ಅಧ್ಯಕ್ಷರಾದ ಶಶಿಧರ, ತಾಲೂಕು ಉಪಾಧ್ಯಕ್ಷರಾದ ಶಿವಪ್ರಸಾದ್, ಕಾರ್ಯದರ್ಶಿ ಮಹದೇವ್, ಕಾರ್ಮಿಕ ಘಟಕದ ಅಧ್ಯಕ್ಷರಾದ ಗುರುಪ್ರಸಾದ್, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಸುರೇಶ್ ಸಿಂಗಂ, ಶಿವಕುಮಾರ ಸ್ವಾಮಿ,ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ ಅಧ್ಯಕ್ಷರಾದ ಸಿ.ಸುರೇಶ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ನಿಜಗಲ್, ಅನ್ನ ದಾಸೋಹಿ ಮಲ್ಲೇಶ, ತಾಲೂಕು ಸಂಚಾಲಕರಾದ ಬಾಬು, ಪ್ರಸಾದ್, ಸಂಘಟನೆ ಕಾರ್ಯದರ್ಶಿ ರಜತ್, ಸತೀಶ್, ಉಮೇಶ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ದೇಶಾಭಿಮಾನಿಗಳು ಭಾಗವಹಿಸಿದ್ದರು.