
ದೊಡ್ಡಬಳ್ಳಾಪುರ :ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ 67 ನೇ ಪರಿನಿಬ್ಬಾಣ ದಿನದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ಡಿಸೆಂಬರ್ 6ರಂದು ಮೌಢ್ಯ ವಿರೋಧಿ ದಿನದ ಕಾರ್ಯಕ್ರಮವನ್ನು ತಾಲ್ಲೂಕಿನ ನಗರ ಭಾಗದ ರೋಜಿಪುರ ಸ್ಮಶಾನದಲ್ಲಿ ಬೆಳ್ಳಿಗೆ 11: 00 ಗಂಟೆಗೆ ಹಮ್ಮಿಕೊಳ್ಳಲಾಗಿದೆ
ಈ ಕುರಿತು ಕಾರ್ಯಕ್ರಮದ ಆಯೋಜಕರಾದ ರಾಜು ಸಣ್ಣಕ್ಕಿ ಮಾತನಾಡಿ ಮೌಢ್ಯಗಳ ವಿರುದ್ಧ ಸಮರ ಸಾರಿದ್ದ ಡಾ ಅಂಬೇಡ್ಕರ್ ರವರ ಮಹಾ ಪರಿನಿಬ್ಬಾಣ ದಿನದಂದು ಸಮಾಜದ ಬದಲಾವಣೆಗಾಗಿ ಪ್ರಗತಿಪರ ಚಿಂತಕರು ಸಾಮಾಜಿಕ ಕಾರ್ಯಕರ್ತರು ದಲಿತ ಮುಖಂಡರು ಸೇರಿ ಆಚರಿಸುವ ಕಾರ್ಯಕ್ರಮ ಇದಾಗಿದ್ದು ಸಮಾಜದಲ್ಲಿ ಇಂದಿಗೂ ಆಚರಣೆಯಲ್ಲಿ ಇರುವ ಮೌಢ್ಯಗಳು ತೋಲಗಲಿ ಎಂಬುದೇ ಮುಖ್ಯ ಉದ್ದೇಶವಾಗಿದೆ ವಿದ್ಯಾವಂತ ಮೌಢ್ಯರಹಿತ ಸಮಾಜದ ನಿರ್ಮಾಣ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು