
ದೊಡ್ಡಬಳ್ಳಾಪುರ : ವಿಷಪೂರಿತ ಆಹಾರ ಸೇವಿಸಿ 3 ದನಗಳು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಡತಿಪ್ಪುರು ಗ್ರಾಮದಲ್ಲಿ ನಡೆದಿದೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದ ಬಡರೈತ ರಂಗಪ್ಪ 6 ದನಗಳನ್ನು ಸಾಕಿದ್ದು ಇಂದು ಮುಂಜಾನೆ ಪ್ರತಿದಿನದಂತೆ ಈ ದಿನವೂ ಆಹಾರ ನೀಡಿದ್ದು ಇದಕ್ಕಿದ್ದಂತೆ ಸ್ವಾಧೀನ ಕಳೆದುಕೊಂಡು ಮೂರು ಹಸುಗಳು ಕುಸಿದು ಬಿದ್ದಿದೆ. ಗಾಬರಿಗೊಂಡ ರೈತ ವೈದ್ಯಕೀಯ ಸಹಾಯಕ್ಕೆ ಮುಂದಾಗಿದ್ದು ವೈದ್ಯರು ಬರುವ ಸಮಯಕ್ಕೆ ಒಂದು ದನ ಮರಣ ಹೊಂದಿದ್ದು ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಉಳಿದ ಇನ್ನೆರಡು ದನಗಳು ಜೀವ ಚಲ್ಲಿವೆ. ಕುಟುಂಬಕ್ಕೆ ಆಧಾರವಾಗಿದ್ದ ಪ್ರಾಣಿಗಳನ್ನು ಕಳೆದುಕೊಂಡ ರೈತ ಕುಟುಂಬ ಮೌನಕ್ಕೆ ಶರಣಾಗಿದ್ದು ರೈತನ ಆಕ್ರಂದನ ಮುಗಿಲು ಮುಟ್ಟಿದೆ
ಈ ಸಂದರ್ಭದಲ್ಲಿ ರೈತ ರಂಗಪ್ಪ ಮಾತನಾಡಿ ಎಂದಿನಂತೆ ಇಂದು ಕೂಡ ಸಾಧಾರಣ ಆಹಾರವನ್ನೇ ನೀಡಿದ್ದೆವು ಆದರೆ ಇದಕ್ಕಿದ್ದಂತೆ ದನಗಳು ನಡುಗಲು ಪ್ರಾರಂಭಿಸಿ ಸ್ವಾಧೀನ ಕಳೆದುಕೊಂಡು ನೆಲಕ್ಕೆ ಕುಸಿದಿವೆ ನಮ್ಮ ಕುಟುಂಬಕ್ಕೆ ಇದು ತುಂಬಲಾರದ ನಷ್ಟ ಜೀವನ ಸಾಗಿಸಲು ಆಧಾರವಾಗಿದ್ದ ದನಗಳನ್ನು ಕಳೆದು ಕೊಂಡಿದ್ದೇವೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು
ವೈದ್ಯರಾದ ಸತ್ಯನಾರಾಯಣ್ ಮಾತನಾಡಿ ದನಗಳನ್ನು ಪರೀಕ್ಷಿಸಿದಾಗ ಮೇಲ್ನೋಟಕ್ಕೆ ವಿಷಪೂರಿತ ಆಹಾರ ಸೇವಿಸಿ ದನಗಳು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ ಮರಣೋತ್ತರ ಪರೀಕ್ಷೆಗೆ ದನಗಳನ್ನು ರಾವನಿಸುತ್ತಿದ್ದು ಈ ವಿಚಾರವಾಗಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ರೈತ ಕುಟುಂಬಕ್ಕೆ ಸೇರಬೇಕಾದ ಮೃತ ದನಗಳ ಪರಿಹಾರ ನೀಡಲು ವೈದ್ಯಕೀಯ ಇಲಾಖೆ ವತಿಯಿಂದ ಸಹಕರಿಸಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ , ಹನುಮನರಸಯ್ಯ, ಗ್ರಾಮಸ್ಥರು ಇದ್ದರು