
ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು
ತಾಲ್ಲೂಕಿನ ಹಲವು ಭಾಗಗಳಿಂದ ಹರಿದು ಬಂದ ಭಕ್ತಸಾಗರ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದರ್ಶನ ಪಡೆದು ಪುನೀತರಾದರು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೋರಿ ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಸಂಭ್ರಮಿಸಿದರು.
ಬ್ರಹ್ಮರಥೋತ್ಸವದಲ್ಲಿ ತಾಲ್ಲೂಕಿನ ಹಲವು ಗಣ್ಯರು ಭಾಗಿಯಾಗಿ ದೇವರ ದರ್ಶನ ಪಡೆದರು.
ಬ್ರಹ್ಮರಥೋತ್ಸವದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬಿ. ಮುನೇಗೌಡರವರ ಅಭಿಮಾನಿ ಬಳಗದ ವತಿಯಿಂದ ಜಾತ್ರಾ ಮಹೋತ್ಸವಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಮಜ್ಜಿಗೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕುರಿತು ಜೆಡಿಎಸ್ ಮುಖಂಡ ಮುನೇಗೌಡ ಮಾತನಾಡಿ ನಮ್ಮ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಜಾತ್ರೆ ನಡೆಯುತ್ತಿದ್ದು ಬೇಸಿಗೆ ಸಮಯದಲ್ಲಿ ಈ ಬ್ರಹ್ಮರಥೋತ್ಸವ ಇರುವ ಕಾರಣ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ದಣಿವಾರಿಸಲು ಮಜ್ಜಿಗೆ ಮತ್ತು ಕುಡಿಯುವ ನೀರು ನೀಡುವ ಅರವಂಟಿಕೆ ಕಾರ್ಯಕ್ರಮವನ್ನು ಕಳೆದ ಹಲವು ವರ್ಷಗಳಿಂದ ಆಯೋಜನೆ ಮಾಡುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಯೋಜನೆ ಮಾಡಿದ್ದೇವೆ. ಸುಮಾರು 3000ಕ್ಕೂ ಅಧಿಕ ಮಜ್ಜಿಕೆ ವಿತರಣೆ ಮಾಡಲಾಗುತ್ತಿದೆ,ಸಾರ್ವಜನಿಕರು ಶಾಂತ ರೀತಿಯಲ್ಲಿ ಭಾಗವಹಿಸಿ ರಥೋತ್ಸವ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಜೆಡಿಎಸ್ ಮುಖಂಡರು ಅಂಚರ ಹಳ್ಳಿ ಆನಂದ್, ಕುಂಟನ ಹಳ್ಳಿ ಮಂಜುನಾಥ್, ವಕೀಲರಾದ ಮುರುಳಿ, ಮಧುಸೂಧನ್ ಸೇರಿದಂತೆ ಬಿ ಮುನೇಗೌಡರವರ ಅಭಿಮಾನಿಗಳು ಉಪಸ್ಥಿತರಿದ್ದರು