
ದೊಡ್ಡಬಳ್ಳಾಪುರ ಮಾರ್ಚ್ 04 : ದೇಶದ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿರುವ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನ ಸೇವಕರನ್ನಾಗಿ ಆಯ್ಕೆ ಮಾಡುವ ಸಲುವಾಗಿ ಇಂದು ಸ್ವಾಭಿಮಾನಿ ಮಹಿಳೆಯರು ಮ್ಯಾರಥಾನ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರ್ಪಡಿಸಿದರು.
ನಗರ ಭಾಗದ ತಾಲ್ಲೂಕು ಕಚೇರಿ ವೃತ್ತದಿಂದ ನೂರಾರು ಮಹಿಳೆಯರಿಂದ ರನ್ ಫಾರ್ ನೇಷನ್ ರನ್ ಫಾರ್ ಮೋದಿ ಎಂಬ ದ್ಯೇಯ ವಾಕ್ಯದೊಂದಿಗೆ ನಾರಿಶಕ್ತಿ ವಂದನ್ ಮ್ಯಾರಥಾನ್ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳೆಯರು ಮಾತನಾಡಿ ದೇಶದಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಬೇಕಿರುವ ಅನುಕೂಲಗಳನ್ನು ತಮ್ಮ ಯೋಜನೆಗಳ ಮೂಲಕ ದೇಶದ ಪ್ರತಿ ಮನೆಮನೆಗೆ ತಲುಪಿಸಿರುವ ನರೇಂದ್ರ ಮೋದಿ ಜೀ ಅವರನ್ನು ಬೆಂಬಲಿಸಿ ಈ ಮ್ಯಾರಥಾನ್ ಮಾಡುತ್ತಿದ್ದು. ತಾಲ್ಲೂಕಿನ ಹಲವು ಭಾಗಗಳಿಂದ ನೂರಾರು ಮಹಿಳೆಯರು ತಮ್ಮ ಸ್ವಇಚ್ಛೆಯಿಂದ ಮ್ಯಾರಥೋನ್ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ ತಾಲೂಕಿನಾದ್ಯಂತ ಮಹಿಳೆಯರು ಪಕ್ಷಾತೀತವಾಗಿ ನಮ್ಮೊಂದಿಗೆ ಸೇರಿದ್ದು. ಮೋದಿಜಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರಿವು ಮೂಡಿಸುವಲ್ಲಿ ನಮ್ಮೊಂದಿಗೆ ಸಹಕರಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಜಿಯವರಿಗೆ ಮತ ನೀಡುವ ಮೂಲಕ ದೇಶದ ಎಲ್ಲ ಮಹಿಳೆಯರು ಧನ್ಯವಾದಗಳು ಅರ್ಪಿಸಲಿದ್ದೇವೆ ಎಂದು ತಿಳಿಸಿದರು ಮ್ಯಾರಥಾನ್ ಕಾರ್ಯಕ್ರಮವು ಯಾವುದೇ ಆಡಂಬರವಿಲ್ಲದೆ ಸರಳ ರೀತಿಯಲ್ಲಿ ಆಯೋಜನೆಯಾಗಿದೆ. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಕ್ಷಾತೀತವಾಗಿ ಪಾಲ್ಗೊಂಡಿದ್ದು. ನಮ್ಮಲ್ಲಿ ಅಚ್ಚರಿ ಮೂಡಿಸಿದೆ ಇವತ್ತಿನ ಈ ಮ್ಯಾರಥಾನ್ ಕಾರ್ಯಕ್ರಮವೇ ಮೋದಿ ಜೀಯವರು ದೇಶದ ಮಹಿಳೆಯರಿಗೆ ನೀಡಿರುವ ಅಭಿವೃದ್ಧಿ ಕಾರ್ಯಗಳ ಹಾಗೂ ಉತ್ತಮ ಯೋಜನೆಗಳ ಕನ್ನಡಿಯಾಗಿದೆ. ಮಹಿಳೆಯರು ದೇಶದಲ್ಲಿ ಹೆಮ್ಮೆಯಿಂದ ಜೀವಿಸುವ ಯೋಜನೆಗಳನ್ನು ಮೋದಿಜೀ ನೇತೃತ್ವದ ಸರ್ಕಾರ ನೀಡಿದೆ. ಇಂದಿನ ಮ್ಯಾರಥಾನ್ ಮಹಿಳೆಯರ ಸ್ವಾಭಿಮಾನದ ಸಂಕೇತವಾಗಿದೆ. ಇಂದು ನಮ್ಮೊಂದಿಗೆ ಸರ್ವ ಸಮುದಾಯಗಳ ಮಹಿಳೆಯರು ಪಾಲ್ಗೊಂಡಿದ್ದು ಈ ಬಾರಿ ನಮ್ಮ ನೆಚ್ಚಿನ ನಾಯಕ ಮೋದಿಜೀ ಅವರಿಗೆ ನಮ್ಮ ಮತಗಳನ್ನು ಉಡುಗೊರೆಯಾಗಿ ನೀಡಲಿದ್ದೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ನಿರೀಕ್ಷೆಗೂ ಮೀರಿದ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಯಾವುದೇ ಪ್ರಚಾರವಿಲ್ಲದೆ ತಾಲೂಕಿನಾದ್ಯಂತ ಮಹಿಳೆಯರು ಇಂದಿನ ಮ್ಯಾರಥಾನ್ ಯಶಸ್ವಿಗೊಳಿಸಲು ನಮ್ಮೊಂದಿಗೆ ಕೈಜೋಡಿಸಿರುವುದು ಶ್ಲಾಘನೀಯ ಸಂಗತಿ. ಲೋಕಸಭಾ ಚುನಾವಣೆಯನ್ನು ಎದುರಿಸಲು ನಾರಿ ಶಕ್ತಿ ಒಂದಾಗಿದ್ದು ಈ ಬಾರಿ ಜಯ ನಮ್ಮದು ಎಂಬ ವಿಷಯದಲ್ಲಿ ಸಂಶಯವಿಲ್ಲ. ಮೋದಿ ಜೀ ಭರವಸೆ ಅಲ್ಲ, ನಮ್ಮ ನಂಬಿಕೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಮಹಿಳಾ ಮುಖಂಡರಾದ ಪುಷ್ಷಶಿವಶಂಕರ್, ವತ್ಸಲಾ ಜಗನ್ನಾಥ್ , ಉಮಾಮಹೇಶ್ವರಿ , ಸೌಮ್ಯ ,ವತ್ಸಲ , ವಾಣಿ, ಪ್ರಿಯಾಂಕಾ,ಹಂಸಪ್ರಿಯಾ, ಸುಮಿತ್ರಾ ಮತ್ತಿತ್ತರು ಉಪಸ್ಥಿತರಿದ್ದರು