
ದೊಡ್ಡಬಳ್ಳಾಪುರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 49ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಬ್ಲೂ ಸ್ಟೋನ್ ಫಿಟ್ನೆಸ್ ಕ್ಲಬ್ ವತಿಯಿಂದ ಮೊದಲ ಬಾರಿಗೆ ರನ್ ಫಾರ್ ಪವರ್ ಹೆಸರಲ್ಲಿ ಭಾನುವಾರ ಮ್ಯಾರಥಾನ್ ನಡೆಸಲಾಯಿತು. ಮ್ಯಾರಥಾನ್ಗೆ ಶಾಸಕ ಧೀರಜ್ ಮುನಿರಾಜು ಫ್ಲ್ಯಾಗ್ ಆಫ್ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬ್ಲೂ ಸ್ಟೋನ್ ಫಿಟ್ನೆಸ್ ಕ್ಲಬ್ ಮಾಲೀಕರಾದ ಕೆ ಸಿ ಲಿಂಗೇಗೌಡ (ಮಣಿ) ಮಾತಾನಾಡಿ ಬಾಡಿ ಫಿಟ್ನೆಸ್ಗೆ ನಟ ಪುನೀತ್ ರಾಜಕುಮಾರ್ ಆದ್ಯತೆ ನೀಡುತ್ತಿದ್ದರು. ಯೋಗ, ವ್ಯಾಯಾಮ, ರನ್ನಿಂಗ್ ಮಾಡುವುದರಿಂದ ದೇಹ ಸಧೃಡವಾಗಿರಲು ಸಾಧ್ಯವಾಗುತ್ತದೆ. ಹೀಗಾಗಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮ್ಯಾರಾಥಾನ್ ಆಯೋಜಿಸಲಾಗಿದೆ ಎಂದರು.
ಶಾಸಕ ಧೀರಜ್ ಮುನಿರಾಜು ಮಾತಾನಾಡಿ, ವ್ಯಾಯಾಮ ಮಾಡುವಾಗ ಅಪ್ಪು ಸತ್ತಿದ್ದು ಎಂಬ ಸುದ್ದಿ ಅಳಿಸಬೇಕು. ವ್ಯಾಯಾಮ ಮಾಡುವುದರಿಂದ ಸಾವು ಬರುವುದಿಲ್ಲ. ಹುಟ್ಟಿದ ಮನುಷ್ಯನಿಗೆ ಒಂದಲ್ಲ ಒಂದು ದಿನ ಸಾವು ಬಂದೇ ಬರುತ್ತದೆ. ಆದರೆ ಅಲ್ಲಿಯವರೆಗೂ ನಾವು ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕು. ಈ ಬಾರಿಯ ಮ್ಯಾರಥಾನ್ನಲ್ಲಿ ನಾನು ಉತ್ಸಾಹದಿಂದ ಪಾಲ್ಗೊಂಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ವರ್ಚುವಲ್ ವೇದಿಕೆ ಮೂಲಕ ಪಾಲ್ಗೊಂಡಿದ್ದ ಚಿತ್ರ ನಟ ಡಾ. ಶಿವರಾಜ್ ಕುಮಾರ್ ಸೇರಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಚಿನ್ನೇಗೌಡ, ಪುನೀತ್ ರಾಜಕುಮಾರ್ ಕುಟುಂಬಸ್ಥರಾದ ಲಕ್ಷ್ಮೀ, ಗೋವಿಂದ ರಾಜು,ಶ್ಯಾನ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದವರಿಗೆ ಅಭಿನಂದನೆಸಲ್ಲಿಸಿದರು.
ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಧನ್ವಂತರಿ ಕ್ಲಿನಿಕ್ ಮತ್ತು ಮೆಡಿಕಲ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಅಕ್ಷತಾ ಮತ್ತು ತ್ರಿಭುವನ್ ನೇತೃತ್ವದಲ್ಲಿ ನೆಡೆಸಿಕೊಟ್ಟರು.
ಪವರ್ ಸ್ಟಾರ್ ಹೆಸರಲ್ಲಿ ಆಯೋಜಿಸಿದ್ದ ರನ್ ಫಾರ್ ಪವರ್ ಮ್ಯಾರಥಾನ್ ಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮಕ್ಕಳು, ಮಹಿಳೆಯರು, ಯುವಕರು ಹಾಗೂ ವೃದ್ಧರು ಸೇರಿದಂತೆ ಸುಮಾರು 600 ಜನ ಭಾಗವಹಿಸಿದ್ದರು. ಎಂದು ಮ್ಯಾರಥಾನ್ ಆಯೋಜಕರಾದ ಮಾನಸ ಕೆ ಲ್ ಗೌಡ ಮಾಹಿತಿ ನೀಡಿದರು.
ಇದೇ ವೇಳೆ ಅಪ್ಪು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಪ್ರಮಾಣ ಸ್ವೀಕರಿಸಲಾಯಿತು. ಮ್ಯಾರಥಾನ್ನಲ್ಲಿ ಮೊದಲ ಸ್ಥಾನ ಪಡೆದವರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಕೆಲ ಸಾಧಕರಿಗೆ ಬಹುಮಾನ ನೀಡಿ ಸನ್ಮಾನಿಸಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಲೂ ಸ್ಟೋನ್ ಫಿಟ್ನೆಸ್ ಕ್ಲಬ್ ಸಿಬ್ಬಂದಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.