
ದೊಡ್ಡಬಳ್ಳಾಪುರ ಏಪ್ರಿಲ್ 18 ( ವಿಜಯಮಿತ್ರ ) : ಸ್ಥಳೀಯ ಪತ್ರಕರ್ತರ ಕುರಿತು ಅಗೌರವ ತೋರಿದ ಹಿನ್ನಲೆ ತಾಲ್ಲೂಕಿನ ಪತ್ರಕರ್ತರು ಇದು ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಕಾಂಗ್ರೆಸ್ ಪತ್ರಿಕಾಗೋಷ್ಠಿಯನ್ನು ಸಾಮೂಹಿಕವಾಗಿ ಬಹಿಷ್ಕಾರ ಮಾಡಿದರು.
ಈ ಹಿಂದೆ ಏಪ್ರಿಲ್ 16 ರಂದು ನೆಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಪತ್ರಕರ್ತರನ್ನು ಕುರಿತು ಕೆಪಿಸಿಸಿ ವಕ್ತರರಾದ ಜಿ.ಲಕ್ಷ್ಮಿಪತಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದು. ಸೂಕ್ತ ಪ್ರತಿಕ್ರಿಯೆ ನೀಡದೆ ಪತ್ರಕರ್ತರಿಗೆ ಅಗೌರವ ತೋರಿರುತ್ತಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏಪ್ರಿಲ್ 18 ರಂದು ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯನ್ನು ತಾಲ್ಲೂಕಿನ ಸರ್ವಪತ್ರಕರ್ತರು ಸಾಮೂಹಿಕವಾಗಿ ಬಹಿಷ್ಕರಿಸಿ ಹೊರನೆಡೆದರು.
ಇನ್ನೂ ಮುಂದೆ ನೆಡೆಯುವ ಕಾಂಗ್ರೆಸ್ ಪಕ್ಷದ ಎಲ್ಲಾ ಸುದ್ದಿಗೋಷ್ಠಿಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಇನ್ನಾದರೂ ರಾಜಕೀಯ ನಾಯಕರಿಗೆ, ಮುಖಂಡರಿಗೆ ಪತ್ರಕರ್ತರ ನಡುವೆ ತಾರತಮ್ಯ ಮಾಡುವ ಮನಸ್ಥಿತಿ ಸರಿಹೋಗಲಿ ಎಂಬುದೇ ನಮ್ಮೆಲ್ಲರ ಆಶಯ.