ದೊಡ್ಡಬಳ್ಳಾಪುರ ಏಪ್ರಿಲ್ 23 ( ವಿಜಯ ಮಿತ್ರ ) : ಸರ್ವಾಧಿಕಾರಿ ಧೋರಣೆಯ ಬಿಜೆಪಿ ಸರ್ಕಾರದಿಂದ ಬಿಡುಗಡೆ ಬಯಸಿ ಸಂವಿಧಾನದ ರಕ್ಷಣೆಗಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಒಮ್ಮತದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಣಯಿಸಿದೆ ಎಂದು ರಮೇಶ್ ರಾಮಗೊಂಡನಹಳ್ಳಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಇಂದು ಇಡೀ ದೇಶದ ದುಡಿಯುವ ಜನರು. ದಮನಿತ ಸಮುದಾಯಗಳು, ಅಲ್ಪಸಂಖ್ಯಾತರು. ಪ್ರಜ್ಞಾವಂತರು ಒಂದಾಗಿದ್ದಾರೆ. ಬಿಜೆಪಿಯನ್ನು ಸೋಲಿಸಲು ಸಂಘ ಪರಿವಾರದ ಷಡ್ಯಂತ್ರವನ್ನು ವಿಫಲಗೊಳಿಸಲು ಒಗ್ಗೂಡಿ ಶ್ರಮಿಸಲು ಮುಂದಾಗಿದ್ದು.
ಸರ್ವ ಮುಖಂಡರ ನಿರ್ಣಾಯದಿಂದ “ಶರಣಾಗುವುದಿಲ್ಲ. ಸಂವಿಧಾನದ ನಾಶಕ್ಕೆ ಅವಕಾಶ ನೀಡುವುದಿಲ್ಲ” ಎಂಬ ಘೋಷಣೆಯೊಂದಿಗೆ ಈ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವ ನಿಟ್ಟಿನಲ್ಲಿ,ನಾವಿರುವ ಊರು, ಕೇರಿ, ಹಾಡಿ ಗಲ್ಲಿಗಳಲ್ಲಿ ಪ್ರತಿಯೊಬ್ಬರೂ BJP/JDS ವಿರುದ್ಧ ಮತ ಹಾಕುವಂತೆ ಮನವೊಲಿಸಲು ಮುಂದಾಗಿದ್ದೇವೆ . ಯಾರೇ ಅಧಿಕಾರಕ್ಕೆ ಬಂದರೂ ಸಮಸ್ತ ದುಡಿಯುವ ಜನ ಒಂದುಗೂಡಿ. ಐಕ್ಯ ಶಕ್ತಿಯಾಗಿ ಸಂವಿಧಾನವನ್ನು ಬಲಪಡಿಸಲು ಹಾಗೂ ಪೂರ್ಣ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಶೋಷಿತ ಸಮುದಾಯಗಳು ಒಂದಾಗಿ ಇನ್ನಿತರ ಪ್ರಗತಿಪರ ಸಾಹಿತಿ-ಕಲಾವಿದರ ಜೊತೆಗೂಡಿ ಪರ್ಯಾಯ ರಾಜಕೀಯ ಕಟ್ಟುವ ಕಡೆಗೂ ಹೆಜ್ಜೆ ಹಾಕಬೇಕು. ಎಂಬ ನಿರ್ಧಾರವನ್ನು ನಾವು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಲ್ಲಿ ತೆಗೆದುಕೊಂಡಿದ್ದೇವೆ ಎಂದರು.

ದಲಿತ ಮುಖಂಡರಾದ ರಾಜು ಸಣ್ಣಕ್ಕಿ ಮಾತನಾಡಿ ದೇಶದ ಜನಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಜನ ವಿರೋಧಿ ಹಾಗೂ ರೈತ ವಿರೋಧಿಯಾಗಿದ್ದು. ದೆಹಲಿಯಲ್ಲಿ ರೈತರು ನೆಡೆಸಿದ್ದ ಹೋರಾಟದ ಬಗ್ಗೆ ಗಮನ ಹರಿಸದ ಅವರು ಸುಮಾರು 700ಕ್ಕೂ ಅಧಿಕ ರೈತರ ಮಾರಣಹೋಮದ ನಂತರ ಈಗ ರೈತರ ಪರ ಎಂಬಂತೆ ನಾಟಕೀಯವಾಗಿ ಮಾತನಾಡುತ್ತಾರೆ. ಯುವಕರಿಗೆ ಉದ್ಯೋಗದ ಆಸೆ ಹುಟ್ಟಿಸಿ ಪಕೋಡ ಮಾರುವಂತೆ ಹೇಳಿದ್ದ ದೇಶದ ಪ್ರಧಾನಿ ಮೋದಿ ಬಿಟ್ಟರೆ ಮತ್ತೊಬ್ಬರಿಲ್ಲ ಎಂದರು.
ಜನ ವಿರೋಧಿ ನೀತಿ ಗಳನ್ನು ಪ್ರಶ್ನೆ ಮಾಡುವುದೇ ತಪ್ಪು ಎಂಬ ವಾತಾವರಣ ನಿರ್ಮಾಣ ವಾಗಿದೆ…
ಮನುವಾದಿ ಸಂಸ್ಕೃತಿಯನ್ನು ನಮ್ಮ ಮೇಲೆ ಹೆರಲು ಹೊರಟಿದೆ ಈ ಬಿಜೆಪಿ ಸರ್ಕಾರ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ ಮಾತನಾಡಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುವ ಮೊದಲಿನಿಂದಲೂ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಾ ಸಂವಿಧಾನ ಬಾಹಿರ ಕಾನೂನುಗಳನ್ನು ಜಾರಿ ಮಾಡುತ್ತಿದ್ದಾರೆ. ಕೋಟ್ಯಂತರ ಉದ್ಯೋಗಗಳನ್ನು ನೀಡುವ ಭರವಸೆ ನೀಡಿದ್ದ ಬಿಜೆಪಿಗರು ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದು ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿ ದೇಶದ ಯುವಜನರನ್ನು ಅತಂತ್ರದಲ್ಲಿಟ್ಟಿದ್ದಾರೆ. ಅಹಿಂದ ವರ್ಗಗಳ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದ. ವಿದ್ಯಾರ್ಥಿವೇತನವನ್ನು ನಿಲ್ಲಿಸಿದ್ದಾರಲ್ಲದೆ ಧರ್ಮ ಜಾತಿಗಳ ನಡುವಿನ ಕಲಹಕ್ಕೆ ಅವರನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಬಡವರ ದಿನಬಳಕೆಯ ವಸ್ತುಗಳ ಮೇಲೆ ತರಿಗೆ ಹೆಚ್ಚಿಸಿ ಬಡವರನ್ನು ಅತೀ ಬಡವರನ್ನಾಗಿಸಿ ಶ್ರೀಮಂತ ಹಾಗು ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆಯಲ್ಲಿ ವಿನಾಯಿತಿ ಕೊಟ್ಟು ಈ ದೇಶ ಬಡವರಿಗಲ್ಲ ಎಂಬ ಸಂದೇಶ ನೀಡುತ್ತಲೇ ಇದ್ದಾರೆ ಎಂದರು.ಹುಸಿ ಸುಳ್ಳು ಗಳನ್ನು ಹೇಳುವಲ್ಲಿ ತರಬೇತಿ ಪಡೆದಿರುವ ನಿಸ್ಸಿಮರಿಗೆ ರಾಷ್ಟ್ರಪ್ರಶಸ್ತಿ ನೀಡುವ ಭ್ರಷ್ಟ ಸರ್ಕಾರ ಮೋದಿ ಸರ್ಕಾರ…
ಸಂವಿಧಾನ ರಕ್ಷಣೆಗೆ ಮುಂದಾಗುವ ಪಕ್ಷಕ್ಕೆ ನಮ್ಮೆಲ್ಲರ ಬೆಂಬಲ ನೀಡುತ್ತಿದ್ದು. ಡಾ. ಬಿ ಆರ್ ಅಂಬೇಡ್ಕರ್ ರರು ಸಮಾಜದ ಬದಲಾವಣೆಗಾಗಿ ನಮ್ಮೆಲ್ಲರಿಗೂ ಒಂದು ಶಸ್ತ್ರವನ್ನು ನೀಡಿದ್ದಾರೆ ಅದುವೇ ಮತದಾನ ಈ ಶಸ್ತ್ರದ ಮೂಲಕ ರಾಜಕೀಯದಲ್ಲಿ ಬದಲಾವಣೆ ಸಾಧ್ಯ ಎಂದರು.
ಶಿಕ್ಷಕರಾದ ಚಂದ್ರಪ್ಪ ಮಾತನಾಡಿ ದಕ್ಷಿಣ ರಾಜ್ಯಗಳಿಂದ ಸಂಗ್ರಹವಾದ ಅತಿ ಹೆಚ್ಚು ತೆರಿಗೆಯ ಪಾಲನ್ನು ತಮ್ಮ ಆಡಳಿತವಿರುವ ರಾಜ್ಯಗಳಿಗೆ ಕೊಡುತ್ತಾ ಪ್ರಾದೇಶಿಕ ಅಸಮಾನತೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ ಹಾಗೂ ರಾಜ್ಯಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದ್ದಾರೆ ತಮ್ಮ ಜನವಿರೋಧಿ ನೀತಿಗಳನ್ನು ವಿರೋಧಿಸಿದವರ ಮೇಲೆ ತೆರಿಗೆ ಭಯೋತ್ಪಾದನೆ ಮಾಡುತ್ತಾ ವಿರೋಧವನ್ನು ಹತ್ತಿಕ್ಕುತ್ತಿದ್ದಾರೆ ಹಾಗು ಇಡೀ ದೇಶವನ್ನು ಭಯದ ವಾತಾವರಣದಲ್ಲಿ ಬಂಧಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಂಜುನಾಥ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
